'ನೋಡಿ, ಎಲ್ಲರಿಗೂ ಒಂದು ವಿಷಯ ಅರ್ಥವಾಗಬೇಕು.. ಮೊಬೈಲ್ ಫೋನ್ ಮತ್ತು ಸೋಷಿಯಲ್ ಮೀಡಿಯಾ ಇದೆ ಎಂದ ಮಾತ್ರಕ್ಕೆ ಬೇರೆಯವರ ಘನತೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ಆನ್‌ಲೈನ್‌ಲ್ಲಿ ನೀವು ಮಾಡುವ ಎಲ್ಲಾ ಕೆಲಸಕ್ಕೂ ಹೆಜ್ಜೆ ಗುರುತುಗಳು ಇರುತ್ತವೆ.. ಎಲ್ಲದಕ್ಕೂ ಉತ್ತರ ಕೊಡಬೇಕಾಗಿ ಬರುತ್ತದೆ…

ನಟಿ ಅನುಪಮಾ ಪರಮೇಶ್ವರನ್‌ಗೆ ಕಿರುಕುಳ!

ದಕ್ಷಿಣ ಭಾರತದ ಹೆಸರಾಂತ ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಅವರಿಗೆ ಆನ್‌ಲೈನ್‌ನಲ್ಲಿ ಕಿರುಕುಳ ನೀಡಲಾಗಿದೆ. ಈ ಬಗ್ಗೆ ಸೈಬರ್ ಕ್ರೈನಲ್ಲಿ ದೂರು ದಾಖಲಿಸಿದ ನಟಿ ಅನುಪಮಾ ಪರಮೇಶ್ವರನ್ ಅವರಿಗೆ ಶಾಕ್ ಆಗಿದೆ. ತಮಗೆ ಕಿರುಕುಳ ನೀಡಿದವರು ಬೇರೆ ಯಾರೋ ಪುರುಷರೋ, ಯುವಕರೋ ಅಲ್ಲ ಎಂಬುದನ್ನು ತಿಳಿದು ಶಾಕ್ ಆಗಿದೆ. ಆದರೆ ಆನ್‌ಲೈನ್ ಗುರುತು ಮರೆಮಾಚಿಕೊಂಡು ಕಿರುಕುಳ ಕೊಡುತ್ತಿದ್ದ ಕಳ್ಳರನ್ನು ಹಿಡಿದಿರುವ ಬಗ್ಗೆ ನಟಿ ಅನುಪಮಾ ಪರಮೇಶ್ವರನ್ ಅವರಿಗೆ ಖುಷಿಯೂ ಆಗಿದೆ. ಹಾಗಿದ್ರೆ ಆ ಕಳ್ಳ ಯಾರು? ಕಳ್ಳನೋ ಅಥವಾ.. ಕ*ಯೋ..?

ಚಿತ್ರವಿಚಿತ್ರ ಫೋಟೋ ಬಿಡುಗಡೆ

ಹೌದು, ನಟಿ ಅನುಪಮಾ ಪರಮೇಶ್ವರನ್ ಅವರನ್ನೇ ಟಾರ್ಗೆಟ್ ಮಾಡಿ ಅನ್‌ಲೈನ್‌ನಲ್ಲಿ ಚಿತ್ರವಿಚಿತ್ರ ಫೋಟೋ ಬಿಡುಗಡೆ ಮಾಡಿ ಕಿರುಕುಳ ನೀಡಲಾಗಿದೆ. ಈ ಬಗ್ಗೆ ದೂರು ನೀಡಿ ಅಪರಾಧಿಯನ್ನು ಕಂಡುಕೊಂಡ ನಟಿ ಅನುಪಮಾ ಪರಮೇಶ್ವರನ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ. 'ನನ್ನ ಬಗ್ಗೆ ಇಲ್ಲಸಲ್ಲದ ತಪ್ಪು ತಪ್ಪು ಮಾಹಿತಿಯನ್ನು ಹಾಗೂ ನನ್ನ ಫೋಟೋಗಳನ್ನು ಎಡಿಟ್ ಮಾಡಿ ಕೆಟ್ಟಕೊಳಕ ರೀತಿಯಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡುತ್ತಿದ್ದರು. ಅಷ್ಟೇ ಅಲ್ಲ, ಅದನ್ನು ನನ್ನ ಫ್ಯಾಮಿಲಿ, ಪರಿಚಯದವರು ಹಾಗೂ ಕುಟುಂಬದವರಿಗೆ ಟ್ಯಾಗ್ ಮಾಡಲಾಗುತ್ತಿತ್ತು.

ಇದರಿಂದ ತೀವ್ರ ನೋವಿಗೆ ಒಳಗಾದ ನಾನು ಸೈಬರ್ ಕ್ರೈಂನಲ್ಲಿ ಕೇಸ್ ಹಾಕಿದಾಗ ತನಿಖೆ ನಡೆದು ಇದರ ಹಿಂದಿರುವ ಕಾಣದ ಕೈ ಯಾರೆಂಬುದು ಪತ್ತೆಯಾಯ್ತು. ನನ್ನ ಬಗ್ಗೆ ಕೆಟ್ಟ ಮೆಸೇಜ್ ಹರಡಲು, ಫೋಟೋ ಎಡಿಟ್ ಮಾಡಿ ನನ್ನ ಮಾನ ಹರಾಜು ಹಾಕಲು ಹಾಗೂ ಕೆಟ್ಟ ಕಾಮೆಂಟ್ ಮಾಡಲೆಂದೇ ಒಂದೇ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಹಲವು ಫೇಕ್ ಅಕೌಂಟ್ ಮಾಡಿಕೊಂಡಿದ್ದು ತಿಳಿಯಿತು. ಸೈಬರ್ ಕ್ರೈಮ ಪೊಲೀಸರ ತನಿಖೆಯಿಂದ ಆ ವ್ಯಕ್ತಿ ಯಾರೆಂಬುದು ತಿಳಿದು ನನಗೆ ನಿಜವಾಗಿಯೂ ಶಾಕ್ ಆಗಿದೆ. ಅದು ಬೇರಾರು ಅಲ್ಲ, ತಮಿಳುನಾಡಿನ 20 ವರ್ಷದ ಯುವತಿ...!

ಆಕೆಯ ವಯಸ್ಸನ್ನು ಗಮನದಲ್ಲಿ ಇಟ್ಟುಕೊಂಡು ನಾನು ಆಕೆಯ ಗುರುತನ್ನು ಬಹಿರಂಗ ಪಡಿಸುತ್ತಿಲ್ಲ. ಏಕೆಂದರೆ ಆಕೆಯ ಭವಿಷ್ಯ ಹಾಗೂ ಮನಃಶಾಂತಿಗೆ ತೊಂದರೆ ಆಗಬಾರದು. ಆದರೆ, ನನ್ನ ಮನಃಶಾಂತಿಗೆ ಭಂಗ ತಂದಿರುವುದು ಕೇವಲ 20 ವರ್ಷದ ಹುಡುಗಿ ಎಂಬುದನ್ನು ತಿಳಿದು ನನಗೆ ನಿಜವಾಗಿಯೂ ಶಾಕ್ ಹಾಗೂ ಬೇಸರ ಆಗಿದೆ' ಎಂದು ನಟಿ ಅನುಪಮಾ ಪರಮೇಶ್ವರನ್ ಅವರು ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ಖಾತಯಲ್ಲಿ ಬರೆದುಕೊಂಡಿದ್ದಾರೆ. ಅವರ ಈ ನಿರ್ಧಾರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಎಲ್ಲಾ ಕೆಲಸಕ್ಕೂ ಹೆಜ್ಜೆ ಗುರುತುಗಳು ಇರುತ್ತವೆ

ಆದರೆ, ನಟಿ ಅನುಪಮಾ ಪರಮೇಶ್ವರನ್ ಅವರು ಈ ಮೂಲಕ ಒಂದು ಸಂದೇಶವನ್ನು ಕೂಡ ನೀಡಿದ್ದಾರೆ. 'ನೋಡಿ, ಎಲ್ಲರಿಗೂ ಒಂದು ವಿಷಯ ಅರ್ಥವಾಗಬೇಕು.. ಮೊಬೈಲ್ ಫೋನ್ ಮತ್ತು ಸೋಷಿಯಲ್ ಮೀಡಿಯಾ ಇದೆ ಎಂದ ಮಾತ್ರಕ್ಕೆ ಬೇರೆಯವರ ಘನತೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ಆನ್‌ಲೈನ್‌ಲ್ಲಿ ನೀವು ಮಾಡುವ ಎಲ್ಲಾ ಕೆಲಸಕ್ಕೂ ಹೆಜ್ಜೆ ಗುರುತುಗಳು ಇರುತ್ತವೆ.. ಎಲ್ಲದಕ್ಕೂ ಉತ್ತರ ಕೊಡಬೇಕಾಗಿ ಬರುತ್ತದೆ. ನಾನು ಹಾಕಿರುವ ಕೇಸ್ ತನಿಖೆ ನಡೆಯುತ್ತಿದೆ. ಆಕೆಯೂ ಅಷ್ಟೇ, ತಾನು ಮಾಡಿದ ಕೆಟ್ಟ ಕೆಲಸಕ್ಕೆ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಒಟ್ಟಿನಲ್ಲಿ ದಿನದಿನಕ್ಕೂ ಸೈಬರ್ ಕ್ರೈಂ ಅಪರಾಧಗಳು ಹೆಚ್ಚುತ್ತಲೇ ಇವೆ ಎನ್ನಬಹುದು.