ಗೆಳೆಯ ಸುಶಾಂತ್ ಸ್ಮರಿಸಿದ ಅಂಕಿತಾ, ಹಂಚಿಕೊಂಡ ನೆನಪಿನಾಳದ ವಿಡಿಯೋ
* ಪ್ರತಿಭಾವಂತ ಕಲಾವಿದ ಸುಶಾಂತ್ ಸಿಂಗ್ ಅಗಲಿ ಒಂದು ವರ್ಷ
* ಗೆಳೆಯನ ಸ್ಮರಿಸಿದ ಅಂಕಿತಾ ಲೋಖಂಡೆ
* ದಿಗ್ಗಜರಿಂದಲೂ ಸುಶಾಂತ್ ಸ್ಮರಣೆ
* ಸಿಐಡಿ ತನಿಖೆ ಇನ್ನು ಅಂತಿಮವಾಗಿಲ್ಲ
ಮುಂಬೈ(ಜೂ. 14) ಬಾಲಿವುಡ್ ನ ಪ್ರತಿಭಾವಂತ ಕಲಾವಿದ ಸುಶಾಂತ್ ಸಿಂಗ್ ರಜಪೂತ್ ಚಿತ್ರರಂಗ ಅಗಲಿ ಒಂದು ವರ್ಷಗಳು ಸಂದಿವೆ. ಅನೇಕ ದಿಗ್ಗಜರು ಸುಶಾಂತ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಗೆಳತಿ, ಸುಶಾಂತ್ ಸಿಂಗ್ ಜತೆಯೇ ಬಣ್ಣದ ಬದುಕು ಆರಂಭಿಸಿಸಿದ್ದ ಅಂಕಿತಾ ಲೋಖಂಡೆ ಗೆಳಯನ ಸ್ಮರಣೆ ಮಾಡಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು ಸುಶಾಂತ್ ಜತೆಗಿನ ಸ್ನೇಹವನ್ನು ವಿವರಿಸುತ್ತಾ ಹೋಗಿದ್ದಾರೆ. ಸುಶಾಂತ್ ಅವರೊಂದಿಗೆ ಕಳೆದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಗೆಳತಿ ರಿಯಾ ತಿಂಗಳ ಮುಂಚೆ ಹಂಚಿಕೊಂಡಿದ್ದ ಸಂದೇಶ
2011ರ ದೀಪಾವಳಿ ಸಂದರ್ಭ ಇಬ್ಬರು ಜತೆಯಾಗಿ ನೃತ್ಯ ಮಾಡಿದ್ದ ಕ್ಷಣಗಳನ್ನು ಪೋಸ್ಟ್ ಮಾಡಿದ್ದಾರೆ. ನಿನ್ನ ನೆನಪು ನನ್ನ ಜೀವನದಲ್ಲಿ ಸದಾ ಹಸಿರಾಗಿರುತ್ತದೆ ಎಂದು ಗೆಳೆಯನಿಗೆ ವಂದನೆ ಸಲ್ಲಿಸಿದ್ದಾರೆ.
ಕಳೆದ ವರ್ಷ ಜೂ. 14 ರಂದು ಸುಶಾಂತ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದಾದ ಮೇಲೆ ಹಲವು ಅನುಮಾನಗಳು ಹುಟ್ಟಿಕೊಂಡು ತನಿಖೆ ನಡೆಸಲಾಯಿತು. ತನಿಖೆ ಈಗಲೂ ಮುಂದುವರಿದೆ ಇದೆ.
ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಏಮ್ಸ್ ಹೇಳಿತು. ಸಿಬಿಐ ತನಿಖೆ ನಡೆಸುತ್ತಿತ್ತು. ಸುಶಾಂತ್ ಇನ್ನೊಬ್ಬ ಗೆಳತಿ ರಿಯಾ ಚಕ್ರವರ್ತಿ ಮೇಲೆ ಆರೋಪಗಳು ಕೇಳಿಬಂದವು. ಸುಶಾಂತ್ ಸಾವಿನ ನಂತರ ಬಾಲಿವುಡ್ ಡ್ರಗ್ಸ್ ಪ್ರಕರಣ ತೆರೆದುಕೊಂಡಿತು.