ನಟ ಸೋನು ಸೂದ್‌ರಿಂದ ಮತ್ತೊಂದು ಮಾದರಿ ಕೆಲಸ, ಲಾಕ್ ಡೌನ್ ಸಂಕಷ್ಟದಲ್ಲಿದ್ದ ಇಂಜಿನಿಯರ್‌ಗೆ ಕೆಲಸ/ ಇಂಜಿನಿಯರ್‌ ಶಾರದಾಗೆ ನೆರವು/ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಆಪದ್ಭಾಂಧವರಾಗಿದ್ದ ಸೋನು ಸೂದ್

ಹೈದರಾಬಾದ್(ಜು. 27) ಕೊರೋನಾ ವೈರಸ್ ಎನ್ನುವುದು ಒಂದು ಕಡೆ ಆರೋಗ್ಯ ಸಮಸ್ಯೆ ತಂದಿಟ್ಟರೆ ಇನ್ನೊಂದು ಕಡೆ ಲಾಕ್ ಡೌನ್ ಪರಿಣಾಮ ಅದೆಷ್ಟೋ ಜನ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದ ಹೈದರಾಬಾದ್ ಇಂಜಿನಿಯರ್ ಒಬ್ಬರು ತರಕಾರಿ ವ್ಯಾಪಾರಕ್ಕೆ ಇಳಿದಿದ್ದರು. ಈ ಸುದ್ದಿ ವೈರಲ್ ಆಗಿತ್ತು.

ವಲಸೆ ಕಾರ್ಮಿಕರಿಗೆ, ರೈತರಿಗೆ ನೆರವು ನೀಡಿಕೊಂಡು ಬಂದಿದ್ದ ಸೋನು ಸೂದ್ ಇಲ್ಲಿಯೂ ತಮ್ಮ ಮಾದರಿ ಗುಣ ಪ್ರದರ್ಶನ ಮಾಡಿದ್ದಾರೆ. ಕೆಲಸ ಕಳೆದುಕೊಂಡಿದ್ದ ಶಾರದಾಗೆ ಸೋನು ಸೂದ್ ಕೆಲಸ ನೀಡಿದ್ದಾರೆ.

ನನ್ನ ಅಧಿಕಾರಿ ಶಾರದಾ ಅವರನ್ನು ಭೇಟಿ ಮಾಡಿದ್ದು ಸಂದರ್ಶನ ಮುಗಿದಿದೆ. ಆಕೆಗೆ ಜಾಬ್ ಲೆಟರ್ ನೀಡಲಾಗಿದೆ ಎಂದು ಸೋಶಿಯಲ್ ಮೀಡಿಯಾ ಮೂಲಕ ನಟ ತಿಳಿಸಿದ್ದಾರೆ.

ಹೊಟ್ಟೆ ಪಾಡಿಗಾಗಿ ಅಮಿರ್ ಜತೆ ನಟಿಸಿದ್ದ ನಟನ ತರಕಾರಿ ವ್ಯಾಪಾರ

ಶಾರದಾ ಅವರ ತಂದೆ ಸಹ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸಿಕೊಂಡು ಬಂದವರು. ಧೈರ್ಯದ ಹುಡುಗಿ ತರಕಾರಿ ವ್ಯಾಪಾರವನ್ನು ಮುಂದುವರಿಸಿದ್ದಾರೆ. ಹೈದರಾಬಾದ್ ನ ಶ್ರೀ ನಗರ್ ಕಾಲೋನಿಯಲ್ಲಿ ತರಕಾರಿ ವ್ಯಾಪಾರ ಮುಂದುವರಿಸಿದ್ದರು. ನಾವು ಒಂದೇ ದಾರಿಯಲ್ಲಿ ಜೀವನ ನೋಡಬಾರದು. ಇದರಲ್ಲಿ ಪಶ್ಚಾತಾಪ ಪಡುವಂಥದ್ದು ಏನು ಇಲ್ಲ. ಹೊಸ ಅವಕಾಶ ತೆರೆದುಕೊಳ್ಳುತ್ತದೆ ಎಂದು ಶಾರದಾ ಹೇಳಿದ್ದು ಈಗ ನಿಜವಾಗಿದೆ.

ಸಿನಿಮಾ ನಟರು, ಕಿರುತೆರೆ ನಟರು ಬಾಡಿಗೆ ಕಟ್ಟಲಾರದೆ ಮನೆಯಿಂದ ಹೊರಬಿದ್ದ ನಿದರ್ಶನಗಳು ಇವೆ. ಅಮಿರ್ ಖಾನ್ ಜತೆ ತೆರೆ ಹಂಚಿಕೊಂಡಿದ್ದ ನಟ ಅನಿವಾರ್ಯವಾಗಿ ತರಕಾರಿ ಮಾರಾಟಕ್ಕೆ ಇಳಿದಿದ್ದು ಸುದ್ದಿಯಾಗಿತ್ತು.

Scroll to load tweet…