ಗಾಯತ್ರಿ ಬಿಟ್ಟುಹೋದ್ರೂ ನಟ ಅರವಿಂದ ಸ್ವಾಮಿ ಮಕ್ಕಳನ್ನು ಬಿಡಲಿಲ್ಲ, ಆಮೇಲೇನಾಯ್ತು?

ರೋಜಾ ತೆರೆಗೆ ಬಂದಾಗ ಅವರನ್ನು ನೋಡಿದ ಎಲ್ಲರೂ ಇವರು ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರನ್ನು ಸೈಡ್‌ಗೆ ತಳ್ಳುತ್ತಾರೆ ಎಂದೇ ಮಾತನಾಡಿಕೊಂಡಿದ್ದರು. ಅತ್ಯಂತ ಸ್ಪುರದ್ರೂಪಿ ಆಗಿದ್ದ ಜೊತೆಗೆ ನಟಿಸಿದ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಎಆರ್ ರೆಹಮಾನ್ ಸಂಗೀತ ನೀಡಿದ್ದ ರೋಜಾ.. 

Actor Arvind Swamy takes care of his children without his wife hence controversy srb

ನಟ ಅರವಿಂದ ಸ್ವಾಮಿ (Aravind Swamy) ಗೊತ್ತಿಲ್ಲದವರು ಕಡಿಮೆ. ಕೆಲವರಿಗೆ ಅವರ ಹೆಸರು ಗೊತ್ತಿಲ್ಲದೇ ಇರಬಹುದು. ಆದರೆ 'ರೋಜಾ' ಹಾಗೂ 'ಬಾಂಬೆ' ಸಿನಿಮಾ ಹೀರೋ ಅಂದ್ರೆ ಸಾಕು, ಓ ಅವ್ರಾ, ಸಖತ್ ಚೆಂದ ಇದಾರೆ ಅಂತಾರೆ. ಅಷ್ಟು ಸ್ಪುರದ್ರೂಪಿ ನಟರು ಭಾರತೀಯ ಚಿತ್ರರಂಗದಲ್ಲಿ ತೀರಾ ಕಡಿಮೆ ಎನ್ನಬಹುದು. ಅಂಥ ಹ್ಯಾಂಡ್‌ಸಮ್ ಬಾಯ್, ರೋಜಾ ನಟ ಅರವಿಂದ ಸ್ವಾಮಿ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಹಲವಾರು ಏರುಪೇರುಗಳನ್ನು ನೋಡಿದ್ದಾರೆ. 

ಹೌದು, ನಟ ಅರವಿಂದ ಸ್ಟಾಮಿ ಮೊದಲು ನಟಿಸಿದ್ದು ತಮಿಳಿನ 'ತಲಪತಿ' ಸಿನಿಮಾ. ಆದರೆ ಅವರು ದೇಶಾದ್ಯಂತ ಜನಪ್ರಿಯತೆ ಪಡೆದಿದ್ದು 1992ರಲ್ಲಿ ತೆರೆಗೆ ಬಂದ ಮಣಿರತ್ನಂ ನಿರ್ದೇಶನದ 'ರೋಜಾ' ಚಿತ್ರದ ಮೂಲಕ. ಬಳಿಕ ಅವರು ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಕೂಡ ಮತ್ತೆ ಅವರನ್ನು ಮುನ್ನಲೆಗೆ ತಂದಿದ್ದು 1995ರ ಬಿಡುಗಡೆ ಕಂಡು ಸೂಪರ್ ಹಿಟ್ ದಾಖಲಿಸಿದ ಬಾಂಬೆ ಮತ್ತು ಇಂದಿರಾ. 1997ರಲ್ಲಿ ಬಂದ 'ಮಿನ್ಸಾರ ಕಣವು' ಚಿತ್ರ ಕೂಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ. 

ಡಾ ರಾಜ್‌ ಜೊತೆ ವಿಷ್ಣು ಹೋಲಿಕೆ ಸರಿಯಲ್ಲ; ಆ ದೊಡ್ಡ ತಪ್ಪು ಯಾರಿಂದ ಯಾಕೆ ನಡೆದಿದ್ದು?

ಆದರೆ, ರೋಜಾ ತೆರೆಗೆ ಬಂದಾಗ ಅವರನ್ನು ನೋಡಿದ ಎಲ್ಲರೂ ಇವರು ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರನ್ನು ಸೈಡ್‌ಗೆ ತಳ್ಳುತ್ತಾರೆ ಎಂದೇ ಮಾತನಾಡಿಕೊಂಡಿದ್ದರು. ಅತ್ಯಂತ ಸ್ಪುರದ್ರೂಪಿ ಆಗಿದ್ದ ಜೊತೆಗೆ ನಟಿಸಿದ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಎಆರ್ ರೆಹಮಾನ್ ಸಂಗೀತ ನೀಡಿದ್ದ ರೋಜಾ ಹಾಗೂ ಬಾಂಬೆ ಸಿನಿಮಾಗಳ ಹಾಡು ಅದೆಷ್ಟು ಜನಪ್ರಿಯತೆ ಪಡೆದಿತ್ತು ಎಂದರೆ, ಇಂದಿಗೂ ಕೂಡ ಅಂದಿನ ಜನರೇಶನ್ನಿನ ಸಿನಿಮಾಪ್ರಿಯರು ಆ ಹಾಡುಗಳನ್ನು ಗುನುಗುತ್ತಲೇ ಇರುತ್ತಾರೆ. 

ಅಂಥ ನಟ ಅರವಿಂದ ಸ್ವಾಮಿ ಗಾಯತ್ರಿ ರಾಮಮೂರ್ತಿ (Gayathri Ramamurthy) ಎನ್ನುವವರನ್ನು 1994ರಲ್ಲಿ ಮದುವೆಯಾದರು. ಅರವಿಂದ ಸ್ವಾಮಿ-ಗಾಯತ್ರಿ ಜೋಡಿಗೆ 1996ರಲ್ಲಿ ಅಧಿರಾ ಎಂಬ ಮಗಳು ಹಾಗೂ 2000ದಲ್ಲಿ ರುದ್ರ ಎಂಬ ಮಗ ಜನಿಸಿದ್ದಾರೆ. ಆದರೆ, ಅವರಿಬ್ಬರ ಸಂಸಾರದಲ್ಲಿ ಸಾಮರಸ್ಯ ಮೂಡದೇ ಅವರಿಬ್ಬರೂ ಬೇರೆಬೇರೆಯಾಗಿ ವಾಸಿಸಿ, ಕೊನೆಗೆ 2010ರಲ್ಲಿ ಡಿವೋರ್ಸ್ ಪಡೆದಿದ್ದಾರೆ. ಅಚ್ಚರಿ ಎಂಬಂತೆ, ಮಕ್ಕಳಿಬ್ಬರನ್ನೂ ಕೋರ್ಟ್ ಅರವಿಂದ ಸ್ವಾಮಿ ಅವರ ಸುಪರ್ದಿಗೇ ಬಿಟ್ಟಿದೆ. 

ಮೊಟ್ಟಮೊದಲ ಕಲರ್ ಸಿನಿಮಾ ಕೈತಪ್ಪಿದ ಬೇಸರಕ್ಕೆ ಡಾ ರಾಜ್‌ಕುಮಾರ್ ಮಾಡಿದ್ದೇನು?

ಬಳಿಕ, 2012ರಲ್ಲಿ ಅರವಿಂದ ಸ್ವಾಮಿ ಅವರು ಅಪರ್ಣಾ ಮುಖರ್ಜಿ (Aparna Mukerjee) ಎಂಬವರನ್ನು ಮದುವೆಯಾಗಿ ಈಗಲೂ ಸಂಸಾರ ಮಾಡಿಕೊಂಡಿದ್ದಾರೆ. ಆದರೆ, 2002ನೇ ಇಸ್ವಿಯಿಂದ 2010ರವರೆಗೂ ಗಾಯತ್ರಿ ಹಾಗೂ ಅರವಿಂದ ಸ್ವಾಮಿ ಬೇರೆಬೇರೆಯಾಗಿ ಇದ್ದಾಗ, ನಟ ಅರವಿಂದ ಸ್ವಾಮಿಯವರು ಮಕ್ಕಳನ್ನು ಬೆಳೆಸಲು ತುಂಬಾ ಕಷ್ಟಪಟ್ಟಿದ್ದಾರೆ ಎನ್ನಲಾಗಿದೆ. 4 ವರ್ಷದ ಮಗಳ ಜೊತೆ ಮಗನೂ ಸೇರಿಕೊಂಡಿದ್ದ. ಮಗಳಿಗೆ 16, ಮಗನಿಗೆ 12 ವರ್ಷ ಆಗುವವರೆಗೂ ಅರವಿಂದ ಸ್ವಾಮಿಯವರು ತಮ್ಮ ಮಕ್ಕಳನ್ನು ಸಾಕಲು ಬಹಳ ಕಷ್ಟಪಟ್ಟಿದ್ದಾರೆ. 

ತಾಯಿಯಿಲ್ಲದೇ ಇದ್ದರೂ ತಾಯಿ-ತಂದೆ ಇಬ್ಬರ ಸ್ಥಾನದಲ್ಲೂ ನಿಂತು ಅರವಿಂದ ಸ್ವಾಮಿಯವರು ಮಕ್ಕಳನ್ನು ಅತ್ಯಂತ ಮಮತೆಯಿಂದ ನೋಡಿಕೊಂಡರು ಎಂದು ಅವರ ಆಪ್ತರು ಹೇಳುತ್ತಾರೆ. ಅಷ್ಟೊಂದು ಸ್ಪರದ್ರೂಪಿ ಗಂಡನನ್ನು ಗಾಯತ್ರಿ ಅವರು ಬಿಟ್ಟು ಹೋಗಿದ್ದು ಯಾಕೆ ಎಂದು ಹಲವರು ಪ್ರಶ್ನಿಸಿದರೂ ಅದಕ್ಕೆ ಸೂಕ್ತ ಉತ್ತರವಿಲ್ಲ. ಅದೇನೇ ಇದ್ದರೂ, ನಟ ಅರವಿಂದ ಸ್ವಾಮಿ ಮಕ್ಕಳನ್ನು ತಾವೊಬ್ಬರೇ ಪೋಷಿಸಿ ಬೆಳೆಸಿದ್ದು ದೊಡ್ಡ ಸಾಧನೆ ಎನ್ನಲೇಬೇಕು!

ಕೆಜಿಎಫ್ ಚಿತ್ರಕ್ಕೆ ಯಶ್‌ ಹೀರೋ ಆಗಲು ಯಾರು ಕಾರಣ ಎಂಬ ಗುಟ್ಟು ರಟ್ಟಾಯ್ತು!

Latest Videos
Follow Us:
Download App:
  • android
  • ios