ಮುಂಬೈ(ಮೇ 31)  ಅಭಿಷೇಕ್ ಬಚ್ಚನ್ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪುತ್ರ. ಆದರೆ ಅಭಿಷೇಕ್ ಚಿತ್ರರಂಗಕ್ಕೆ ಬರುವ ಮುನ್ನ ಎಲ್ಲ ಕೆಲಸಗಳನ್ನು ಮಾಡಿದ್ದರು!

ಹೌದು.. ಈ ಸುದ್ದಿಯನ್ನು ನಂಬಲೇಬೇಕು. ಸಂದರ್ಶನವೊಂದರಲ್ಲಿ ಅಭಿಷೇಕ್ ತಮ್ಮ ಹಳೆಯ ಜೀವನದ ಕತೆ ಹಂಚಿಕೊಂಡಿದ್ದಾರೆ. ಶೂಟಿಂಗ್ ಸೆಟ್ ನಲ್ಲಿ ಎಲ್ಲ ಪ್ರೊಡಕ್ಷನ್ ಅಸಿಸ್ಟೆಂಟ್ ಆಗಿ ಎಲ್ಲ ರೀತಿಯ ಕೆಲಸಗಳನ್ನು ಮಾಡಿದ್ದರಂತೆ!

ಡಿವೋರ್ಸ್ ವದಂತಿಯ ಬಗ್ಗೆ ಅಭಿಷೇಕ್ ಬಿಚ್ಚು ಮಾತು

ನಟ ಅರ್ಶದ್ ವಾರ್ಸಿ ಅವರ ವಾಹನ ಚಾಲಕನಾಗಿ ಕೆಲಸ ಮಾಡಿದ್ದೆ. ಪ್ರೊಡಕ್ಷನ್ ಬಾಯ್ ಆಗಿ ಟೀ ತಂದುಕೊಡುವುದು, ಪ್ಲೋರ್ ಕ್ಲೀನ್ ಮಾಡುವುದನ್ನು ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ.

ಆರಂಭದ ದಿನಗಳಲ್ಲಿ ಯಶಸ್ಸು ನನಗೆ ಕೈ ಹಿಡಿಯಲಿಲ್ಲ. ಯುವ ಮತ್ತು ಧೂಮ್ ಚಿತ್ರಗಳು ನನಗೆ ಇಮೇಜ್ ತಂದುಕೊಟ್ಟವು ಎಂದು ನೆನಪಿಸಿಕೊಂಡಿದ್ದಾರೆ.

ಅನುರಾಗ್ ಬಸು ಅವರ ಲುಡೋದಲ್ಲಿ ಅಭಿಷೇಕ್ ಮತ್ತೊಮ್ಮೆ ತೆರೆಯಮೇಲೆ ಕಾಣಿಸಿಕೊಳ್ಳಲಿದ್ದಾರೆ.  ಕೊರೋನಾ ಕಾರಣಕ್ಕೆ ಸಿನಿಮಾ ಡಿಜಿಟಲ್ ಮೀಡಿಯಾ ಮುಖೇನ ಪ್ರೇಕ್ಷಕರನ್ನು ತಲುಪುವ ಸಾಧ್ಯತೆಗಳಿವೆ.