ಗ್ರಾ.ಪಂ ಚುನಾವಣೆ ದ್ವೇಷಕ್ಕೆ ಕೋಳಿ ಫಾರಂ ತೆಗೆಸುವಂತೆ ಅಧಿಕಾರಿಗಳಿಗೆ ಪತ್ರ ಬರೆದ ಹೋರಾಟಗಾರ.  ನೊಂದ ಕುಟುಂಬಸ್ಥರಿಂದ ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಮನವಿ. 20 ವರ್ಷಗಳಿಂದ ಬಾರದ ಸಮಸ್ಯೆ ದಿಢೀರ್ ಅಂತ ಹೀಗ್ಯಾಕೆ ಬಂತು ಎಂಬುದೇ ಯಕ್ಷ ಪ್ರಶ್ನೆ? 

ಕಿರಣ್ ಎಲ್ ತೊಡರನಾಳ್ , ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಮಾ21): ಆ ಭಾಗ ಬರಪೀಡಿತ ಪ್ರದೇಶ, ಅಲ್ಲಿ ಮಳೆ, ಬೆಳೆ ಇಲ್ಲದೇ ಕಂಗಾಲಾದ ರೈತನೋರ್ವ ಬ್ಯಾಂಕ್ ನಲ್ಲಿ ಸಾಲ ಸೂಲ ಮಾಡಿ, ಕೋಳಿ ಫಾರಂ ಮಾಡಿದ್ರು. ಆದ್ರೆ ಇದನ್ನ ಸಹಿಸಲಾಗದವರು ಇವರ ವಿರುದ್ಧ ಪದೇ ಪದೇ ಅಧಿಕಾರಿಗಳಿಗೆ ಪತ್ರ ಬರೆದು ಮಾನಸಿಕವಾಗಿ ಕಿರುಕುಳ ನೀಡ್ತೀದ್ದಾರೆ ಎಂಬ ಆರೋಪ‌ ಕೇಳಿ ಬಂದಿದೆ. ಹೀಗಾಗಿ ಮನನೊಂದ ಇಡೀ ರೈತ ಕುಟುಂಬ (farmers family) ಜಿಲ್ಲಾಧಿಕಾರಿಗೆ (district collector) ದಯಾಮರಣಕ್ಕೆ (Euthanasia) ಅರ್ಜಿ ಸಲ್ಲಿಸಿದೆ.

ಹೌದು, ಈ ಗ್ರಾಮದ ಕೃಷ್ಣಾರೆಡ್ಡಿ ಎನ್ನುವ ರೈತ ತನ್ನ 4 ಎಕರೆ ಜಮೀನಿನಲ್ಲಿ ಬೆಳೆನಷ್ಟದಿಂದಾಗಿ ಬೇಸತ್ತು, ಕಳೆದ 20 ವರ್ಷಗಳ ಹಿಂದೆ ಕೋಳಿ ಫಾರಂ (Poultry farm) ಆರಂಭಿಸಿ‌ದ್ರು. ಹೇಗೋ ಸಣ್ಣಪುಟ್ಟ ವ್ಯಾಪಾರ ಮಾಡ್ತಾ ಕೋಳಿ (Chicken) ಸಾಕಣೆಯಿಂದ‌ ಬದುಕು ಕಟ್ಟಿಕೊಂಡಿದ್ರು. ಆಗ ನಿಯಮಾನುಸಾರ ಗ್ರಾಮ ಪಂಚಾಯ್ತಿ ಹಾಗೂ ಇತರೆ ಅಧಿಕಾರಿಗಳಿಂದಲೂ ಅನುಮತಿ ಸಹ ಪಡೆದಿದ್ರು. ಆಗ ಇದೇ ಗ್ರಾಮದಲ್ಲಿ ಸ್ನೇಹಿತರಾಗಿದ್ದ ಮಲ್ಲಿಕಾರ್ಜುನ್ ಹಾಗೂ ಕೃಷ್ಣರೆಡ್ಡಿ ನಡುವೆ ಗ್ರಾಮ ಪಂಚಾಯ್ತಿ ಚುನಾವಣೆ ವೇಳೆ ವೈಷಮ್ಯ ಚಿಗುರೊಡೆದು, ಅದು ದ್ವೇಷವಾಗಿ ಪರಿಣಮಿಸಿದೆ.

ಹೀಗಾಗಿ ಕಳೆದ ಮೂರು ವರ್ಷದಲ್ಲೇ ಸತತ ಎಂಟು ಬಾರಿ ಎಸಿ,ಡಿಸಿ ಹಾಗೂ ಆರೋಗ್ಯ ಇಲಾಖೆಗೆ ರೈತ ಹೋರಾಟಗಾರ ಮಲ್ಲಿಕಾರ್ಜುನ್ ಅರ್ಜಿ ಸಲ್ಲಿಸಿದ್ದಾರಂತೆ. ಕೋಳಿ‌ ಫಾರಂನಿಂದ‌ ಗ್ರಾಮದಲ್ಲಿ ದುರ್ನಾಥ ಹಾಗು ನೊಣಗಳ ಕಾಟವಿದೆ ಅದ್ದರಿಂದ ಕೋಳಿ ಫಾರಂ‌ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರಂತೆ. ಹೀಗಾಗಿ ಬ್ಯಾಂಕ್ ನಲ್ಲಿ 15 ಲಕ್ಷ‌ ಸಾಲ ಮಾಡಿ ಫಾರಂ ನಿರ್ಮಾಣ ಮಾಡಿರೋ ರೈತ ಕುಟುಂಬ ಕಂಗಾಲಾಗಿದ್ದಾರೆ.

Udupi Cylinder Blast: ಸ್ಫೋಟಕ್ಕೆ 3 ಬಲಿ, ಮೃತರೊಬ್ಬರ ಪತ್ನಿ 6 ತಿಂಗಳು ಗರ್ಭಿಣಿ

ಯಾವುದೇ ಸಮಸ್ಯೆ ಇಲ್ಲದಿದ್ರೂ, ಸುಳ್ಳು ಆರೋಪ ಮಾಡ್ತಾ ಕಿರುಕುಳ‌ ನೀಡ್ತಿದ್ದಾರೆಂದು ಆರೋಪಿಸಿದ್ದೂ, ಮನನೊಂದ ಕೃಷ್ಣಾರೆಡ್ಡಿ, ಪತ್ನಿಯಾದ ಸುಲೋಚನಮ್ಮ, ಮಕ್ಕಳಾದ ತಿಪ್ಪೇಸ್ವಾಮಿ ಹಾಗೂ ತಿಮ್ಮಾರೆಡ್ಡಿ ದಯಾಮರಣಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಇನ್ನೂ ಈ ಬಗ್ಗೆ ರೈತ ಹೋರಾಟಗಾರ ಮಲ್ಲಿಕಾರ್ಜುನ ಅವರನ್ನು ಕೇಳಿದ್ರೆ, ಆ ಕೋಳಿ ಫಾರಂ ನಿಯಮಬಾಹಿರವಾಗಿ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಶಾಲೆಯ ವಿಧ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಸಮಸ್ಯೆಯಾಗ್ತಿದೆ. ಆದ್ದರಿಂದ ಅದನ್ನ ತೆರವುಗೊಳಿಸುವಂತೆ ಎಸಿಯವರ ಮೊರೆ ಹೊಗಿದ್ದೇನೆ. ಆದ್ರೆ ಸ್ಥಳಕ್ಕೆ ತೆರಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ಮಾಡಿದಾಗ ಅಲ್ಲಿ ಕೃಷ್ಣಾ ರೆಡ್ಡಿಯವರು ಹಲವು ವರ್ಷಗಳಿಂದ ಅಲ್ಲಿ ಕೋಳಿ ಸಾಕಣೆ ನಿಲ್ಲಿಸಿದ್ದೂ, ವೈಯಕ್ತಿಕ ದ್ವೇಷದಿಂದಾಗಿ ಈ ವಿವಾದ ಸೃಷ್ಟಿಯಾಗಿರೋದೇ ಒಂದು ವಿಪರ್ಯಾಸ ಎನ್ನಿಸಿದೆ.

ಚಿಕ್ಕಮಗಳೂರು: ಕಾಡುಕುರಿ‌, ಹಂದಿ ಶಿಕಾರಿ ಮಾಡಿದ ಆರೋಪಿಗಳು ಪರಾರಿ

ಒಟ್ಟಾರೆ ಸತತ 20 ವರ್ಷಗಳಿಂದ ಇಲ್ಲದ ಕೋಳಿ ಫಾರಂ ವಿವಾದ ಚುನಾವಣಾ ದ್ವೇಷದಿಂದ ದಿಢೀರ್ ಅಂತ ಎಸಿ ಕೋರ್ಟ್ ಮೆಟ್ಟಿಲೇರಿದೆ. ನೊಂದ ರೈತ ಕೃಷ್ಣಾರೆಡ್ಡಿ ಕುಟುಂಬ ದಯಾಮರಣಕ್ಕೆ ಅನುಮತಿ ಕೋರಿದೆ. ಹೀಗಾಗಿ ನ್ಯಾಯಾಲಯ ಯಾರ ಪರ ತೀರ್ಪು ನೀಡಲಿದೆ ಅನ್ನೋದನ್ನ ಕಾದು ನೋಡಬೇಕಿದೆ.