ಚಿಕ್ಕಮಗಳೂರು: ಕಾಡುಕುರಿ‌, ಹಂದಿ ಶಿಕಾರಿ ಮಾಡಿದ ಆರೋಪಿಗಳು ಪರಾರಿ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ  ಕಾಡುಕುರಿ‌, ಹಂದಿ  ಶಿಕಾರಿ ಮಾಡಿ ಮಾಂಸವನ್ನು ಹಂಚಿಕೆ ಮಾಡುವಾಗ ಅರಣ್ಯಾಧಿಕಾರಿಗಳು‌ ದಾಳಿ ನಡೆಸಿರುವ ಘಟನೆ ನಡೆದಿದೆ. ಆರೋಪಿಗಳು ಪರಾರಿಯಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ.

forest animal hunter escaped in  Chikkamagaluru gow

ಚಿಕ್ಕಮಗಳೂರು (ಮಾ.21): ಅರಣ್ಯದಲ್ಲಿ ಅಕ್ರಮವಾಗಿ ಶಿಕಾರಿ ಮಾಡಿ ಮನೆಯಲ್ಲಿ ಮಾಂಸವನ್ನು ಹಂಚಿಕೆ ಮಾಡುವಾಗ ಅರಣ್ಯಾಧಿಕಾರಿಗಳು‌ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕಾಡಮನೆ ಗ್ರಾಮದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ಮಾಡಿದಾಗ ಅರಣ್ಯದಲ್ಲಿ ಅಕ್ರಮ ಬೇಟೆಯಾಡಿದ ಕಾಡುಕುರಿ, ಹಂದಿ ಮಾಂಸ ಪತ್ತೆಯಾಗಿದೆ.

ಅಕ್ರಮವಾಗಿ‌ ಭದ್ರಾ ಅರಣ್ಯಪ್ರದೇಶದ ವ್ಯಾಪ್ತಿಯಲ್ಲಿ  ಕಾಡುಕುರಿ , ಹಂದಿಯನ್ನು ಆರೋಪಿಗಳು  ಹತ್ಯೆ ಮಾಡಿದ್ದಾರೆ. ಮನೆಯಲ್ಲಿ  ಕಾಡುಕುರಿ, ಕಾಡು ಹಂದಿ ಮಾಂಸವನ್ನು ಆರೋಪಿಗಳು ಹಂಚಿಕೆ ಮಾಡುವಾಗ ಅರಣ್ಯಾಧಿಕಾರಿಗಳು‌‌ ದಾಳಿ‌ ನಡೆಸಿದ್ದಾರೆ.

ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಹೇಳಿಕೆ ಯಾರೂ ನೀಡಬಾರದು: ಆರಗ ಜ್ಞಾನೇಂದ್ರ

ಕಾಡಮನೆಯ ವಾಸಿಗಳಾದ ವೆಂಕಟೇಶ್, ಲೋಕೇಶ್ ಆರೋಪಿಗಳಾಗಿದ್ದು, ಮನೆಯಿಂದ ಪರಾರಿಯಾಗಿದ್ದು ಪ್ರಕರಣ ದಾಖಲು ಮಾಡಿಕೊಂಡಿರುವ ಬಾಳೆಹೊನ್ನೂರು ಅರಣ್ಯಾಧಿಕಾರಿಗಳು, ಪೊಲೀಸರ ಸಹಾಯದೊಂದಿಗೆ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.  ಮನೆಯಲ್ಲಿದ್ದ 10 ಕಿಲೋ ಮಾಂಸ, ಎರಡು ನಾಡ ಬಂದೂಕುಗಳು, ಮದ್ದು ಗುಂಡುಗಳನ್ನಿಡುವ ಚೀಲ ಮತ್ತಿತರ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Srirangapatna Tourism: ವಿದೇಶಿ ಮಾದರಿ ಶ್ರೀರಂಗಪಟ್ಟಣ ಅಭಿವೃದ್ಧಿಗೆ ಚಿಂತನೆ

ಡಿಎಫ್‌ಓ ಮಾಗದರ್ಶನದಲ್ಲಿ ಬಾಳೆಹೊನ್ನೂರಿನ ಆರ್‌ಎಫ್‌ಓ ನಿರಂಜನ್, ಕಡಬಗೆರೆಯ ಡಿವೈಆರ್‌ಎಫ್ ಮಂಜುನಾಥ್, ಸಿಬ್ಬಂದಿಗಳಾದ ಹನುಮಂತ್ , , ಪ್ರಕಾಶ್ ಮತ್ತಿತರರು ಕಾರ್ಯಾಚರಣೆಯಲ್ಲಿ ತೊಡಗಿದ್ದರು.

Latest Videos
Follow Us:
Download App:
  • android
  • ios