ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋದ ಮದುಮಗ ಅಪಘಾತದಲ್ಲಿ ಸಾವು
ಇನ್ನೇನು ಎರಡು ದಿನದಲ್ಲಿ ಹಸೆಮಣೆ ಏರಬೇಕಿದ್ದ ವರ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮದುವೆ ಖುಷಿಯಿಂದ ಕಂಗೊಳಿಸಬೇಕಾದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.
ಚಿತ್ರದುರ್ಗ: ಇನ್ನೇನು ಎರಡು ದಿನದಲ್ಲಿ ಹಸೆಮಣೆ ಏರಬೇಕಿದ್ದ ವರ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮದುವೆ ಖುಷಿಯಿಂದ ಕಂಗೊಳಿಸಬೇಕಾದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಮನೆ ಮುಂದೆ ಚಪ್ಪರದ ಪೂಜೆ ಮಾಡಿ ಸಂಬಂಧಿಕರಿಗೆ ಮದುವೆ ಕಾರ್ಡ್ ನೀಡಲು ಹೋದವ ಸೇರಿದ್ದು ಮಸಣಕ್ಕೆ. ವರನ ಸಾವಿನ ಸುದ್ದಿ ತಿಳಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಭತ್ತನಹಟ್ಟಿ ಕ್ರಾಸ್ ಬಳಿ ಈ ಅನಾಹುತ ಸಂಭವಿಸಿದೆ.
ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ ಬಡಾವಣೆಯ ನಿವಾಸಿ 31 ವರ್ಷ ಪ್ರಾಯದ ಮಂಜುನಾಥ್ (Manjunath) ಮೃತ ಯುವಕ. ಈತ ನಾಳೆ ಒಂದು ಕಳೆದರೆ ಭಾನುವಾರ ಹಸೆಮಣೆ ಏರಬೇಕಿದ್ದ. ಆದರೆ ವಿಧಿ ಬೇರೆಯದೇ ಬರೆದಿದ್ದು, ಆತ ಮಸಣ ಸೇರಿದ್ದಾನೆ. ಬೆಳಗ್ಗೆ ತಾನೇ ತನ್ನ ಮನೆಯ ಮುಂದೆ ಚಪ್ಪರದ ಕೂಟಕ್ಕೆ ಪೂಜೆ ಸಲ್ಲಿಸಿ ಮದುವೆಗೆ ಚಪ್ಪರ ಕೂಡ ಸ್ವತಃ ತಾನೇ ಹಾಕಿದ್ದ. ಬಳಿಕ ಮನೆಯಲ್ಲಿ ಯಾರಿಗೂ ಹೇಳದೇ ಮದುವೆಯ ಕಾರ್ಡ್‌ಗಳನ್ನು ತೆಗೆದುಕೊಂಡು ಉಳಿದ ಸಂಬಂಧಿಕರಿಗೆ ನೀಡಿ ಆಹ್ವಾನಿಸಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬರುವಾಗ ಈ ಅವಘಡ ಸಂಭವಿಸಿದ್ದು ಯುವಕ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಂಜುನಾಥ್‌ಗೆ ರಾಯದುರ್ಗದ (Rayadurga) ಯುವತಿಯೊಂದಿಗೆ ಮದುವೆ ನಿಶ್ವಯ ಆಗಿತ್ತು. ಇಂದು ರಾತ್ರಿ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆಯಬೇಕಿತ್ತು. ಆದ್ರೆ ಈ ಸಾವಿನಿಂದ ಮದುವೆ ಮನೆ ಸೂತಕದ ಮನೆಯಾಗಿ ಬದಲಾಗಿದೆ.
Accident: ಕಾರು ಡಿಕ್ಕಿಯಾಗಿ ಮದುಮಗ ಸೇರಿ ಇಬ್ಬರ ಸಾವು: ಕಣ್ಣೀರು ಹಾಕುತ್ತಿರುವ ವಧು
ಆಟೋ ಚಾಲಕನಾಗಿ (Auto Driver) ಕೆಲಸ ಮಾಡುತ್ತಾ ಜೀವನ ಸಾಗಿಸ್ತಿದ್ದ ಮಂಜುನಾಥ್‌ಗೆ ಯಾವುದೇ ದುಷ್ಚಟವಿರಲಿಲ್ಲ. ಆದ್ರೆ ವಿಧಿ ಮಾತ್ರ ಆತನನ್ನು ಮದುವೆಗೂ ಮುನ್ನವೇ ಕರೆದುಕೊಂಡಿದ್ದು ಇಡೀ ಗ್ರಾಮದಲ್ಲಿ ಜನರ ಆಕ್ರಂದನಕ್ಕೆ ಕಾರಣವಾಗಿದೆ. ಊರಲ್ಲಿ ಯಾರನ್ನು ಕೇಳಿದ್ರು ಆತನ ಬಗ್ಗೆ ಪಾಸಿಟಿವ್ ಮಾತುಗಳೇ ಹೇಳ್ತಾರೆ. ಇಡೀ ಗ್ರಾಮದಲ್ಲಿ ಎಲ್ಲರಿಗೂ ಆತ ಸಹಾಯ ಮಾಡ್ತಿದ್ದ. ಯಾವುದೇ ತಂಟೆ ತಕರಾರಿಲ್ಲದೇ ತನ್ನ ಪಾಡಿಗೆ ತಾನು ಇರ್ತಿದ್ದ ಯುವಕ ಮಂಜುನಾಥ್. ಇಂತಹ ಒಳ್ಳೆಯ ಮನಸ್ಸಿದ್ದ ಹುಡುಗನಿಗೆ ಈ ರೀತಿ ಆಯ್ತಲ್ಲ ಎಂದು ಇಡೀ ಸಂಬಂಧಿಕರು ರೋದಿಸ್ತಿದ್ದಾರೆ.
ಕಲಘಟಗಿ: ಮದುವೆಯಾದ ಒಂದೇ ದಿನದಲ್ಲಿ ಮಸಣ ಸೇರಿದ ಮದುಮಗ