ನರಸಿಂಹರಾಜಪುರ [ಅ.18]: ಭಾರತದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 55 ಸಾವಿರ ಶಾಖೆಗಳಿದ್ದು, 1 ಲಕ್ಷ 70  ಸಾವಿರ ಚಟುವಟಿಕೆಗಳು ನಿತ್ಯ ನಡೆಯುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿವಮೊಗ್ಗ ವಿಭಾಗದ ಸಹ ಕಾರ್ಯವಾಹ ಗಿರೀಶ ಕಾರಂತ ಹೇಳಿದರು.

ಗುರುವಾರ ಬಸ್ತಿಮಠದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು. ಸಂಘವು ಕೇವಲ ಭಾರತದಲ್ಲಿ ಮಾತ್ರ ಕೆಲಸ ಮಾಡುತ್ತಿಲ್ಲ.

ವಿಶ್ವದ 40 ದೇಶಗಳಲ್ಲೂ ನಮ್ಮ ಶಾಖೆಗಳಿದ್ದು, ಅಲ್ಲೂ ಚಟುವಟಿಕೆ ಮಾಡುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರತಿ ನಿತ್ಯದ 1 ಗಂಟೆ ಶಾಖೆಯಲ್ಲಿ ಶಿಸ್ತು, ಸಂಸ್ಕಾರ, ದೇಶಾಭಿಮಾನ ಕಲಿಸುತ್ತಿದ್ದೇವೆ. ದೇಶಕ್ಕೆ ಪೂರಕವಾಗಿ ಸಂಘ ಕೆಲಸ ಮಾಡುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

1940 ರಲ್ಲಿ ಪ್ರಾರಂಭಗೊಂಡ ಸಂಘ ಬೇರೆ, ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಲು ಹಲವು ಸಂಘಟನೆ ಹುಟ್ಟುಹಾಕಿದೆ. 1949 ರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಪ್ರಾರಂಭವಾಯಿತು. ರಾಜಕೀಯಕ್ಕೋಸ್ಕರ ಜನಸಂಘ, ಹಿಂದೂ ಸಂಘಟನೆಗೆ ವಿಶ್ವ ಹಿಂದೂ ಪರಿಷತ್ತು  ಪ್ರಾರಂಭಿ ಸಲಾಯಿತು.

ಗ್ರಾಮೀಣ ಅಭಿವೃದ್ಧಿಗೆ ಹಲವು ಸಂಘಟನೆ ಪ್ರಾರಂಭಿಸಿದ್ದೇವೆ. ಕೌಟುಂ ಬಿಕ ವ್ಯವಸ್ಥೆ ಸರಿಪಡಿಸಲು ಭಜನೆ, ಭೋಜನ, ಬಾರ್ಜಿತ್ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ಎಲ್ಲಕ್ಕಿಂತ ದೇಶ ಮೊದಲು ಎಂದು ಯುವಜನರಿಗೆ ಕಲಿಸುತ್ತೇವೆ. ಯುವಶಕ್ತಿ ದೇಶಕ್ಕಾಗಿ ಕೆಲಸ ಮಾಡಬೇಕಾಗಿದೆ ಎಂದರು. 

ಅಯೋಧ್ಯೆಯ ರಾಮಜನ್ಮ ಭೂಮಿ ತೀರ್ಪು ಶೀಘ್ರದಲ್ಲೇ ಹೊರಬರಲಿದ್ದು, ಬಹುತೇಕ ಡಿ. 6ರಂದೇ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಪ್ರಾರಂಭಿಸಬಹುದು. ದೇಶದ ಎಲ್ಲರಿಗೂ ಶಾಂತಿ, ಸಾಮರಸ್ಯ ಬೇಕಾಗಿದ್ದು ಯಾರಿಗೂ ಯುದ್ದ ಬೇಡವಾಗಿದೆ. ಒಟ್ಟಾಗಿ ಸಮಾಜ ಕಟ್ಟೋಣ ಎಂದರು. 

ಭಾರತ ದೇಶದಲ್ಲಿ ಹಲವು ಸಮಸ್ಯೆಗಳಿವೆ. ಆದರೂ, ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶ ವಿಕಾಸದ ಕಡೆ ಹೋಗುತ್ತಿದೆ. ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾದ್ಯ ಎಂದು ತೋರಿಸಲಾಗಿದೆ. ರಫೇಲ್ ಎಂಬ ಯುದ್ಧ ವಿಮಾನ ನಮಗೆ ಸಿಕ್ಕಿದ್ದು, ಬ್ರಹ್ಮಾಸ್ತ್ರ ಸಿಕ್ಕಿದಂತಾಗಿದೆ. ಈಗ ಭಾರತದ ರಕ್ಷಣಾ ಸಾಮರ್ಥ್ಯ ಗಣನೀಯವಾಗಿ ವದ್ಧಿಸಿದೆ. ಪಾಕಿಸ್ತಾನ ಇನ್ನು 3 ತಿಂಗಳಲ್ಲಿ ಭಯೋತ್ಪಾದನೆ ನಿಲ್ಲಿಸದಿದ್ದರೆ ಆ ದೇಶವನ್ನು ವಿಶ್ವ ಸಂಸ್ಥೆಯು ಬ್ಲಾಕ್ ಲೀಸ್ಟ್‌ಗೆ ಸೇರಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುತ್ತಿನಕೊಪ್ಪ ಸಂಜೀವಿನಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ.ಕೆ. ಕೃಪಾಲ್ ಮಾತನಾಡಿ, ಈ ದೇಶದ ಶಿಸ್ತಿನ ಸಂಘಟನೆ ಯಾದ ಆರ್. ಎಸ್.ಎಸ್. ದೇಶದ ಉನ್ನತೀಕರಣಕ್ಕೆ ಶ್ರಮಿಸುತ್ತಿದೆ ಎಂದರು. 

ಶಿಬಿರಾಧಿಕಾರಿ ಕೊನೋಡಿ ಗಣೇಶ್ ವರದಿ ವಾಚಿಸಿ, ಮೂಡಬಾಗಿಲಿನ ಜ್ಞಾನ ಗಂಗೋತ್ರಿಯಲ್ಲಿ ನಡೆಯುತ್ತಿರುವ ಪ್ರಾಥಮಿಕ ಶಿಕ್ಷಾ ವರ್ಗದ ಶಿಬಿರದಲ್ಲಿ 139  ಶಿಬಿರಾರ್ಥಿಗಳು ಭಾಗವಹಿಸುತ್ತಿ ದ್ದಾರೆ ಎಂದರು. ಜಿಲ್ಲಾ ಕಾರ್ಯಕಾರಿಣಿ ರಾಜೇಂದ್ರಕುಮಾರ್ ಸ್ವಾಗತಿಸಿದರು. ಅರುಣಾಚಲ ವಂದಿಸಿದರು. ಇದಕ್ಕೂ ಮೊದಲು ಶಿಬಿರಾರ್ಥಿಗಳು ಪಟ್ಟಣದ ಪ್ರವಾಸಿ ಮಂದಿರ ಸಮೀಪದ ಕೋಟೆ ಮಾರಿಕಾಂಬ ದೇವ ಮಂದಿರ
ದಿಂದ ಜ್ವಾಲಾಮಾಲಿನಿ ಶಾಲೆವರೆಗೆ ಪಥ ಸಂಚಲನ ನಡೆಸಿದರು. ಅನಂತರ ಆಟದ ಮೈದಾನದಲ್ಲಿ ಯೋಗಾಸನದ ವಿವಿಧ ಭಂಗಿಗಳ ಪ್ರದರ್ಶನ ನಡೆಸಿದರು.