Asianet Suvarna News Asianet Suvarna News

ಕಡೂರು ಬಸ್‌ ನಿಲ್ದಾಣಕ್ಕೆ ಶಾಸಕರ ದಿಢೀರ್‌ ಭೇಟಿ

ಸಾರ್ವಜನಿಕ ದೂರಿನ ಮೇರೆಗೆ ಪರಿಶೀಲನೆಗೆ ಧಾವಿಸಿದ ಶಾಸಕ ಬೆಳ್ಳಿ ಪ್ರಕಾಶ್‌| ಕೆಎಸ್‌ಆರ್‌ಟಿಸಿ ಬಸ್‌ ಸ್ಟ್ಯಾಂಡ್‌ ಆವರಣದಲ್ಲಿ ಸ್ವಚ್ಚತೆ ನಿರ್ಲಕ್ಷ್ಯ ವಿರುದ್ಧ ತರಾಟೆ| ಸಾರ್ವಜನಿಕರ ದೂರಿನ ಅನ್ವಯ ದಿಢೀರ್‌ ಭೇಟಿ ನೀಡಿದ ಸಚಿವರು|, ಶುಚಿತ್ವವಿಲ್ಲದ ಇಡೀ ಬಸ್‌ ನಿಲ್ದಾಣ ಕೆಟ್ಟ ವಾಸನೆಯಿಂದ ಕೂಡಿದೆ| ಬಸ್‌ ನಿಲ್ದಾಣದಲ್ಲಿರುವ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದನ್ನು ಹಾಗೂ ನಿಲ್ದಾಣ ಸ್ವಚ್ಛತೆ ಇಲ್ಲದೇ ಇರುವುದನ್ನು ಅವರು ಪರಿಶೀಲಿಸಿದರು|

MLA Belli Prakash Visit Kadur KSRTC Bus Stand
Author
Bengaluru, First Published Oct 17, 2019, 1:26 PM IST

ಕಡೂರು(ಅ.17): ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬುಧವಾರ ದಿಢೀರ್‌ ಎಂದು ಭೇಟಿ ನೀಡಿದ ಶಾಸಕ ಬೆಳ್ಳಿ ಪ್ರಕಾಶ್‌ ಅವರು ಆವರಣದಲ್ಲಿ ಸ್ವಚ್ಛತೆ ಕಾಪಾಡದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾರ್ವಜನಿಕರ ದೂರಿನ ಅನ್ವಯ ದಿಢೀರ್‌ ಭೇಟಿ ನೀಡಿದ ಅವರು, ಶುಚಿತ್ವವಿಲ್ಲದ ಇಡೀ ಬಸ್‌ ನಿಲ್ದಾಣ ಕೆಟ್ಟ ವಾಸನೆಯಿಂದ ಕೂಡಿದೆ. ಬಸ್‌ ನಿಲ್ದಾಣದಲ್ಲಿರುವ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದನ್ನು ಹಾಗೂ ನಿಲ್ದಾಣ ಸ್ವಚ್ಛತೆ ಇಲ್ಲದೇ ಇರುವುದನ್ನು ಅವರು ಪರಿಶೀಲಿಸಿದರು. ಕ್ಲೀನಿಂಗ್‌ ಏಜೆನ್ಸಿಯವರು ಸಹ ನಿಲ್ದಾಣದಲ್ಲಿ ಶುಚಿತ್ವ ಕಾಪಾಡದೇ ಇರುವುದರ ಬಗ್ಗೆ ಏಜೆನ್ಸಿಯವರಿಗೆ ಸೂಕ್ತ ಸೂಚನೆ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಡೀ ಬಸ್‌ ನಿಲ್ದಾಣದಲ್ಲಿ ಎಲ್ಲೆಡೆ ಅಡ್ಡಾಡಿ ವೀಕ್ಷಿಸಿದ ಅವರು, ಬಸ್‌ ನಿಲ್ದಾಣದ ಶುಚಿತ್ವಗೊಳಿಸುವ ಜವಾಬ್ದಾರಿ ಲಕ್ಷ್ಮಿ ಎಂಟರ್‌ಪ್ರೈಸಸ್‌ ಅವರಿಗೆ ಟೆಂಡರ್‌ ಆಗಿದೆ. ಸೂಕ್ತ ರೀತಿಯಲ್ಲಿ ಬಸ್‌ ನಿಲ್ದಾಣವನ್ನು ಸ್ವಚ್ಛತೆ ಮಾಡದೇ ಇದ್ದರೆ ಬೇರೆಯವರಿಗೆ ಅವಕಾಶ ಮಾಡಿಕೊಡಲಿ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ, ಕೆಲಸ ಮಾಡಬೇಕು. ಕ್ರಮ ಕೈಗೊಳ್ಳಿ ಎಂದು ಡಿಪೋ ವ್ಯವಸ್ಥಾಪಕ ಚನ್ನಬಸಪ್ಪ ಅವರಿಗೆ ಸೂಚನೆ ನೀಡಿದರು.

ನಿಲ್ದಾಣದೊಳಗಿರುವ ಅಂಗಡಿಗಳು ಮತ್ತು ಹೋಟೆಲ್‌ಗಳು ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪುರಸಭೆಯವರ ಜೊತೆ ಸಹಕರಿಸಬೇಕು. ಬಸ್‌ ನಿಲ್ದಾಣದಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಪ್ರತಿದಿನ ಸಾವಿರಾರು ಜನರು ಬಂದು ಹೋಗುವುದರಿಂದ ಶಾಸಕರ ಅನುದಾನದಲ್ಲಿ ಶುದ್ಧಗಂಗ ಘಟಕ ಪ್ರಾರಂಭಿಸುವುದಾಗಿ ಹೇಳಿದರು.

ಬಸ್‌ ನಿಲ್ದಾಣದ ಮುಂಭಾಗದಲ್ಲಿ ಕೆಸರಿನಮಯವಾಗಿ ಪ್ರಯಾಣಿಕರು ನಿಲ್ದಾಣದೊಳಗೆ ಬರಲು ಪ್ರಯಾಸ ಪಡುವ ಸ್ಥಿತಿಯಲ್ಲಿ ಇರುವುದರಿಂದ ನಿಲ್ದಾಣದ ಮುಂಭಾಗದಲ್ಲಿ ಗುಣಮಟ್ಟದ ಕಾಮಗಾರಿ ಮಾಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರಭಾರ ಡಿಟಿಓ ಬೇಬಿಬಾಯಿ, ಜಿಪಂ ಸದಸ್ಯ ಕೆ.ಆರ್‌. ಮಹೇಶ್‌ ಒಡೆಯರ್‌, ಡಿಪೋ ಮ್ಯಾನೆಜರ್‌ ಚನ್ನಬಸಪ್ಪ, ಕೆಎಸ್‌ಆರ್‌ಟಿಸಿ ಎಂಜಿನಿಯರ್‌ ರಮೇಶ್‌, ಅಧಿಕಾರಿಗಳಾದ ಬಸವರಾಜು, ಮಂಜುನಾಥ್‌ ಮತ್ತಿತರಿದ್ದರು.
 

Follow Us:
Download App:
  • android
  • ios