ಹೊಸ ಬಾಂಬ್ ಸಿಡಿಸಿದ ಸಿ.ಟಿ.ರವಿ : ಮತ್ತಷ್ಟು ಕೈನವರು ಬಿಜೆಪಿಗೆ

ಈಗಾಗಲೇ ಅನರ್ಹರಾಗಿ ರಾಜೀನಾಮೆ ನೀಡಿದವರಿಗೂ ಬಿಜೆಪಿ ಮಣೆ ಹಾಕುತ್ತಿದ್ದು, ಇತ್ತ ಇನ್ನಷ್ಟು ಮಂದಿ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ಸಚಿವರು ಬಾಂಬ್ ಸಿಡಿಸಿದ್ದಾರೆ. 

Many Congress Leaders Will Join BJP Says Minister CT Ravi

"

ಚಿಕ್ಕಮಗಳೂರು (ನ.11) : ಚುನಾವಣೆ ಬಳಿಕ ಮತ್ತಷ್ಟು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಸಿ,ಟಿ.ರವಿ ಕಾಂಗ್ರೆಸಿನ ಕೆಲ ಶಾಸಕರು ಬಿಜೆಪಿಯೊಂದಿಗೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದರು. 

ರಾಜ್ಯದಲ್ಲಿ ಡಿಸೆಂಬರ್ 5ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಮೊದಲು ಹಾಗೂ ನಂತರ ಮತ್ತಷ್ಟು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು. ಯಾವುದನ್ನೂ ಕದ್ದು ಮುಚ್ಚಿ ಮಾಡಲು ಸಾಧ್ಯವಿಲ್ಲ. ಎಷ್ಟು ಮಂದಿ ಬರಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು. 

ಇನ್ನು ಬಿಜೆಪಿಗೆ ಬರುವ ಮನಸು ಮಾಡಿರುವವರೆಲ್ಲಾ ವ್ಯಾವಹಾರಿಕ ದೃಷ್ಟಿಯಿಂದ ಇಲ್ಲಿಗೆ ಆಗಮಿಸುತ್ತಿಲ್ಲ. ಬರುವವರೆಲ್ಲಾ ವೈಚಾರಿಕಾ ಹಿನ್ನೆಲೆಯಿಂದ ಬರುತ್ತಿದ್ದಾರೆ ಎಂದರು. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವ ಮೂಲಕ ಪಕ್ಷ ವಿಭಜನೆಯಾಗಲಿದೆ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ.ರವಿ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗಾಗಲೇ ರಾಜ್ಯದಲ್ಲಿ ಮರ್ಹರಾಗಿರುವ ಕೆಲ ಶಾಸಕರಿಗೆ ಉಪ ಚುನಾವಣೆ ವೇಳೆ ಬಿಜೆಪಿ ಮಣೆ ಹಾಕುವ ಸಾಧ್ಯಾ ಸಾಧ್ಯತೆಗಳು ಕಂಡು ಬರುತ್ತಿದ್ದು ಇದೀಗ ಮತ್ತಷ್ಟು ಮಂದಿ ಬರುತ್ತಿರುವುದಾಗಿ ಹೇಳಿದ್ದಾರೆ.

ಆಡಿಯೋ ರೆಕಾರ್ಡ್ ಯಾರು ಮಾಡಿದ್ದು ಎಂದು ಹೇಳಲು ನಾನೇನು ಅಂಜನ ಹಾಕಿಲ್ಲ’

ಆದರೆ ಇತ್ತ ಕಾಗವಾಡದ ಮಾಜಿ ಶಾಸಕ ರಾಜು ಕಾಗೆ  ಉಪ ಚುನಾವಣೆ ಹೊಸ್ತಿಲಿನಲ್ಲೇ ಬಿಜೆಪಿ ತೊರೆದು ಕಾಂಗ್ರೆಸಿಗೆ ಸೇರಲು ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರಡೆ. ಆದರೆ ಇತ್ತ ಬಿಜೆಪಿಯತ್ತ ಕಾಂಗ್ರೆಸಿಗರ ಚಿತ್ತ ಎಂದು ಸಿಟಿ ರವಿ ಮಾತನಾಡಿದ್ದಾರೆ. 

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9ಕ್ಕೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

Latest Videos
Follow Us:
Download App:
  • android
  • ios