ಚಿಕ್ಕಮಗಳೂರು : KSRTCಯಿಂದ ವಿಶೇಷ ಬಸ್‌

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಚಿಕ್ಕಮಗಳೂರಿನಲ್ಲಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರ ಅನುಕೂಲವನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ. 

KSRTC Runs Special Bus For Chikkamagaluru Deviramma Fair

ಚಿಕ್ಕಮಗಳೂರು [ಅ.23]: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನ.26ರಿಂದ ನ.30 ರವರೆಗೆ ಬಿಂಡಿಗ ಮಲ್ಲೇನಹಳ್ಳಿಯ ಶ್ರೀ ದೇವಿರಮ್ಮ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.   

ಜಾತ್ರೆಯ ಪ್ರಯುಕ್ತ ನ.26ರಂದು ಮಧ್ಯಾಹ್ನದಿಂದ ನ.29 ರವರೆಗೆ ಭಕ್ತರಿಗೆ ಅನುಕೂಲವಾಗಲು ವಿಶೇಷ ಸಾರಿಗೆ ಬಸ್‌ ಸಂಚಾರ ಮಾಡಲಾಗಿದೆ. ಇದರ ಅನುಕೂಲವನ್ನು ಭಕ್ತರು ಪಡೆದುಕೊಳ್ಳಬಹುದಾಗಿದೆ.   

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಿಕ್ಕಮಗಳೂರು ವಿಭಾಗದಿಂದ ಕಡೂರು, ಬೀರೂರು ತರೀಕೆರೆ ಬಸ್‌ ನಿಲ್ದಾಣದಿಂದ ಮಲ್ಲೇನಹಳ್ಳಿಗೆ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕರಾರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ದೀಪಾವಳಿಗೂ ಕೂಡ ಕೆಎಸ್‌ಆರ್ಟಿಸಿಯಿಂದ ಬೆಂಗಳೂರಿನಿಂದ ವಿವಿಧ ಊರುಗಳಿಗೆ 1600 ಹೆಚ್ಚಿನ ಬಸ್ ಸೇವೆ ಒದಗಿಸಲಾಗುತ್ತಿದೆ. 

Latest Videos
Follow Us:
Download App:
  • android
  • ios