ಚಿಕ್ಕಮಗಳೂರು (ನ.01): ಚಾಲಕನ ಅಜಾಗರೂಕತೆಯಿಂದ ksrtc ಬಸ್ ಪಲ್ಟಿಯಾಗಿ ಮಗುವೊಂದು ಸಾವಿಗೀಡಾಗಿದೆ. 

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಕಾಟಿಗನಗೆರೆ ಬಳಿ ಬಸ್ ಪಲ್ಟಿಯಾಗಿದ್ದು, ಒಂದೂವರೆ ವರ್ಷದ ಮಗು ಸಾವಿಗೀಡಾಗಿದೆ.  ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಧರ್ಮಸ್ಥಳದಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ KSRTC ಬಸ್ ಉರುಳಿದೆ. ಚಾಲಕ  ನಿದ್ರೆಗೆ ಜಾರಿದ ಹಿನ್ನಲೆಯಲ್ಲಿ ಕಂಡಕ್ಟರ್ ಬಸ್ ಚಾಲನೆ ಮಾಡುತ್ತಿದ್ದು, ಇದರಿಂದ ಈ ದುರ್ಘಟನೆಯಾಗಿದೆ.  

ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.