ಮಲೆನಾಡಲ್ಲೂ ಮತ್ತೆ ಮಳೆಯಬ್ಬರ : ಹೊಲಗದ್ದೆಗಳು ಜಲಾವೃತ
ಮತ್ತೆ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇತ್ತ ಮಲೆನಾಡಿನ ಹಲವು ಜಿಲ್ಲೆಗಳು ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತತ್ತರಿಸಿವೆ.
ಚಿಕ್ಕಮಗಳೂರು[ಅ.21] : ರಾಜ್ಯದಲ್ಲಿ ಮತ್ತೊಮ್ಮೆ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಲೆನಾಡು ಕರಾವಳಿ ಸೇರಿದಂತೆ ಉತ್ತರ ಭಾಗವೂ ಕೂಡ ತತ್ತರಿಸುತ್ತಿದೆ.
ಇತ್ತ ಮಲೆನಾಡಿನ ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ವಿವಿಧೆಡೆ ಹಳ್ಳಕೊಳ್ಳಗಳು ಉಕ್ಕಿ ಹರಿದು ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವೃತವಾಗಿವೆ.
ಕಡೂರು ತಾಲೂಕಿನ ನರಸೀಪುರದಲ್ಲಿ ದನದ ಕೊಟ್ಟಿಗೆಯೊಂದು ಉರುಳು ಬಿದ್ದು ಅವಘಡವಾಗಿದೆ. ಇಲ್ಲಿ ಕಟ್ಟಲಾಗಿದ್ದ 6 ಹಸುಗಳನ್ನು ರಕ್ಷಣೆ ಮಾಡಲಾಗಿದೆ. ಇನ್ನು ಇತ್ತ ಕಡೂರು ತಾಲೂಕಿನಲ್ಲಿಯೂ ಕೂಡ ಮಳೆ ಸುರಿಯುತ್ತಿದ್ದು, ಹೊಲಗದ್ದೆ ತೋಟಗಳಿಗೆ ನೀರು ನುಗ್ಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ತರೀಕೆರೆ ತಾಲೂಕಿನ ಮಳೆಗೆ ಮನೆಗಳಿಗೂ ನೀರು ನುಗ್ಗಿದ್ದು, ಪರದಾಡುವಂತಾಗಿದೆ. ಪಂಪ್ ಇಟ್ಟು ನೀರನ್ನು ಹೊರಹಾಕುವ ದುಸ್ಥಿತಿ ಎದುರಾಗಿದೆ.