ಚಿಕ್ಕಮಗಳೂರು [ಅ.13]: ಸಾಮಾಜಿಕ ಜಾಲತಾಣದಲ್ಲಿ  50 ರು. ಮೇಲೆ ‘ಟಾರ್ಗೆಟ್ ಬಾಳೆಹೊನ್ನೂರು’ ಹೆಸರಿನಲ್ಲಿ ಪಾಕಿಸ್ತಾನದವರು ಎಂದು ಮೆಸೇಜ್ ಹಾಕಿದ ಪ್ರಕರಣ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಯುವಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಪಂಜರ ಗಿಳಿಗಳು ಹಾರಿಹೋದಾವು - ಸರ್ವರು ಎಚ್ಚರ..ಎಚ್ಚರ : ಮೈಲಾರ ಕಾರಣಿಕ...

ವಾಟ್ಸಾಪ್‌ನಲ್ಲಿ ಹರಿದಾಡಿದ ನೋಟಿನ ಪ್ರಕರಣದ ಬಗ್ಗೆ ಈಗಾಗಲೇ ಸೂಕ್ಷ್ಮವಾಗಿ ತನಿಖೆ ಮಾಡಲಾಗಿದೆ. ಈ ಸಂದೇಶವನ್ನು ಕಳಿಸಿದ ಒಬ್ಬ ಯುವಕನನ್ನು ಜಿಲ್ಲಾ ಪೊಲೀಸರು ಈಗಾಗಲೇ ಬಂಧಿಸಿದೆ. ಆತ ಸಾರ್ವಜನಿಕರ ನೆಮ್ಮದಿ ಹಾಗೂ ಶಾಂತಿಯನ್ನು ಕದಡಲು ಮಾಡಿರುವ ಸಂದೇಶವಾಗಿದ್ದು ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ವಿನಂತಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜನರು ಈ ರೀತಿಯ ಯಾವುದೇ ಸಂದೇಶಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಈ ರೀತಿಯ ಸಂದೇಶಗಳನ್ನು ಯಾರು ಯಾವುದೇ ಕಾರಣಕ್ಕೂ ಬೇರೆ ಗ್ರೂಪ್‌ಗಳಿಗೆ ಫಾರ್ವರ್ಡ್ ಮಾಡಬಾರದು. ಅಂಥ ವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಈ ರೀತಿಯ ಮೆಸೇಜ್ ಕಳುಹಿಸುವವರ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಒಂದು ತಂಡ ಕಾರ್ಯಪ್ರವೃತವಾಗಿದೆ ಎಂದು ತಿಳಿಸಿದ್ದಾರೆ.

ನೋಟಿನ ಮೇಲೆ ಏನಿತ್ತು?: ನೋಟಿನ ಮೇಲೆ ‘ಟಾರ್ಗೆಟ್ ಬಾಳೆಹೊನ್ನೂರು’ ಅಲ್ಲದೇ, ನಾವು ಪಾಕಿಸ್ತಾನದವರು. ನಾವು 6 ಜನ ಇದ್ದೇವೆ. ನಾವು ಒಂದೊಂದು ಜಿಲ್ಲೆಯಲ್ಲಿಯೂ ಇದ್ದೀವಿ. ಇಂಡಿಯಾ ದವರನ್ನು ಒಬ್ಬೊಬ್ಬರನ್ನೂ ಬಿಡುವುದಿಲ್ಲ. ನಮಗೆ ಹೇಗೆ ಕನ್ನಡ ಬಂತು ಅಂತ ನಿಮ್ಮ ಯೋಚನೆ. ನಮಗೆ ಕನ್ನಡದವರು ಹೆಲ್ಪ್ ಮಾಡುತ್ತಿದ್ದಾರೆ ಎಂದು ಇಲ್ಲಿ ಬರೆಯಲಾಗಿದೆ.

ಕೊಪ್ಪ ಸಹಕಾರ ಸಾರಿಗೆ ಸಂಸ್ಥೆ ಸಂಕಷ್ಟಕ್ಕೆ ಸ್ಪಂದಿಸಿದ ಸಿಎಂ...

ನಾವು ಬಾಳೆಹೊನ್ನೂರಿನಲ್ಲಿ ಇದ್ದೀವಿ. 2 ಜನ ಪಾಕಿಸ್ತಾನದ ಹುಲಿಗಳು’ ಎಂದು ಬರೆದು ಆ ನೋಟಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ಸುದ್ದಿ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿ, ಪೊಲೀಸರು ಫೋಟೋ ಅಪ್‌ಲೋಡ್ ಮಾಡಿದ ಆರೋಪಿಯ ಹುಡುಕಾಟಕ್ಕೆ ಕ್ರಮ ಜರುಗಿಸಿದ್ದರು. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಬಾಳೆಹೊನ್ನೂರು ಠಾಣೆ ಪಿಎಸ್‌ಐ ತೇಜಸ್ವಿ ಸಹ ಮನವಿ ಮಾಡಿದ್ದಾರೆ.