District Incharge Minister ಉಸ್ತುವಾರಿ ಸಚಿವರಿಲ್ಲದೇ ತಬ್ಬಲಿ ಜಿಲ್ಲೆಯಾದ ಚಿಕ್ಕಮಗಳೂರು!
- ನಾಲ್ವರು ಉಸ್ತುವಾರಿ ಸಚಿವರ ಬದಲಾವಣೆ
- ಉಸ್ತುವಾರಿ ಸಚಿವರಿಗೆ ಚಿಕ್ಕಮಗಳೂರು ಶಾಪನಾ?
- ಬಂದವರು ಅಭಿವೃದ್ಧಿಗೂ ಮುನ್ನ ಜಾಗ ಖಾಲಿ
ಚಿಕ್ಕಮಗಳೂರು(ಏ.25) :ಜಿಲ್ಲಾ ಉಸ್ತುವಾರಿ ಸಚಿವರ ಹುದ್ದೆಗೂ ಚಿಕ್ಕಮಗಳೂರು ಜಿಲ್ಲೆಗೂ ಆಗಿ ಬರುತ್ತಿಲ್ಲ. ಕಾಫಿ ನಾಡು ಚಿಕ್ಕಮಗಳೂರಿನ ಉಸ್ತುವಾರಿ ಸಚಿವರಿಗೆ ಶಾಪಗ್ರಸ್ಥ ಜಿಲ್ಲೆಯ ಅಗುತ್ತಿದೆಯಾ ಅನ್ನುವ ಪ್ರಶ್ನೆ ಜನರಲ್ಲಿ ಮೂಡಿಸಿದೆ. ಜಿಲ್ಲಾ ಉಸ್ತುವಾರಿ ನೇಮಕವಾದ ತಕ್ಷಣ ಬರುತ್ತಾರೆ, ಎರಡ್ಮೂರು ಮಿಟಿಂಗ್ ಮಾಡ್ತಾರೆ. ಜಿಲ್ಲೆಯ ಅಭಿವೃದ್ದಿಯ ನೀಲಿ ನಕ್ಷೆ ರೆಡಿ ಮಾಡಿ ಎನ್ನೇನೋ ಮಾಡ್ತೀವಿ ಅಂತಾ ಪ್ಲಾನ್ ಕೊಟ್ಟವರು ಮತ್ತೆ ಬರೋದೇ ಇಲ್ಲ.ಆಗ್ಲೇ ಉಸ್ತುವಾರಿ ಸಚಿವ ಸ್ಥಾನವೇ ಚೆಂಜ್ ಅಗುತ್ತೇ.ಈ ಬಾರಿ ಬಿಜೆಪಿ ಸರ್ಕಾರದಲ್ಲಿ ನಾಲ್ವರು ಉಸ್ತುವಾರಿಸಚಿವರು ಬದಲಾವಣೆಯಾಗಿ ಈಗ ಮತ್ತೆ ಆ ಖಾಲಿಯಾಗಿದೆ.
ಉಸ್ತುವಾರಿ ಸಚಿವರಿಗೆ ಜಿಲ್ಲೆ ಶಾಪನಾ ?
ಚಾಮರಾಜನಗರಕ್ಕೆ ಮುಖ್ಯಮಂತ್ರಿ ಹೊದ್ದೋರು ಅಧಿಕಾರ ಕಳೆದುಕೊಳ್ತಾರೆ ಅನ್ನೋ ಮಾತಿದೆ.ಆದ್ರೆ ಈಗ ಉಸ್ತುವಾರಿಗಳಿಗೆ ಅದೇ ರೀತಿ ಕಾಫಿ ನಾಡು ಶಾಪಗ್ರಸ್ಥ ಜಿಲ್ಲೆಯಾಗ್ತಾ ಇದ್ದೀಯಾ ಹೀಗೋಂದು ಚರ್ಚೆಯಂತೂ ಕಾಫಿ ನಾಡಲ್ಲಿ ಶುರುವಾಗಿದೆ..ಕಾಂಗ್ರೆಸ್, ಮೈತ್ರಿ ಸರ್ಕಾರ, ಬಿಜೆಪಿ ಅಧಿಕಾರದಲ್ಲಿ ಬರೊಬ್ಬರಿ 14 ಜಿಲ್ಲಾ ಉಸ್ತುವಾರಿ ಸಚಿವರನ್ನು ಕಂಡಿರೋ ಜಿಲ್ಲೆಯಿರೋದು ಅಂದ್ರೆ ಕಾಫಿನಾಡು ಚಿಕ್ಕಮಗಳೂರು.ಹೌದು ಡಿ.ಬಿ.ಚಂದ್ರೇಗೌಡ, ಗೋವಿಂದಗೌಡರ ನಂತ್ರ ಬಂದೋರು ಯಾರು ಪೂರ್ಣವಧಿಯಾಗಿಲ್ಲ.ವರ್ಷಕ್ಕೊಮ್ಮೆ ಚೆಂಜ್ ಅಗ್ತಾನೇ ಇದ್ದಾರೆ.ನಾಲ್ವರು ಸಚಿವರ ತಲೆದಂಡವೂ ಅಗಿದೆ.ಇಬ್ಬರಿಗೆ ಪಕ್ಷದ ಉನ್ನತ ಸ್ಥಾನದ ಲಕ್ ಸಿಕ್ಕಿ ರಾಜಿನಾಮೆಯನ್ನು ಕೊಟ್ಟಿದ್ದಾರೆ.ಇನ್ನುಳಿದವರಂತೂ ಕಾರಣವೇ ಇಲ್ಲದೇ ಚೆಂಜ್ ಅಗಿದ್ದಾರೆ
ಪಟ್ಟಿ ಬದಲಾವಣೆಗೆ ಹೆಚ್ಚಿದ ಒತ್ತಡ, ಸಾಧ್ಯವೇ ಇಲ್ಲ ಎಂದ ಸಿಎಂ
ಮ್ಯೂಸಿಕಲ್ ಚೇರ್ ನಂತೆ ಬದಲಾದ ಜಿಲ್ಲಾ ಉಸ್ತುವಾರಿ ಸಚಿವರ ಹುದ್ದೆ
ಮೈತ್ರಿ ಸರ್ಕಾರ ಪತನವಾದ ಬಳಿಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈಶ್ವರಪ್ಪನವರೆ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿದ್ದರು.ಇನ್ನೂ ವಿಶೇಷವೆಂದ್ರೆ ಈ ಬಾರಿಯ ಬಿಜೆಪಿ ಸರ್ಕಾದಲ್ಲಿಯೂ ನಾಲ್ವರು ಉಸ್ತುವಾರಿ ಸಚಿವರನ್ನು ಕಂಡಿರೋ ಜಿಲ್ಲೆ.ಈಗಾಗಲೇ ಈಶ್ವರಪ್ಪ ನವ್ರು ಸಂತೋಷ್ ಪಾಟೀಲ್ ಅತ್ಮಹತ್ಯೆಯಿಂದ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರೋದ್ರಿಂದ ಉಸ್ತುವಾರಿ ಹುದ್ದೆ ಖಾಲಿಯಾಗಿದೆ.2010ರಲ್ಲಿ ಯಡಿಯ್ಯೂರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ವೇಳೆಯಲ್ಲಿ ಆನಂದ ಅಸ್ನೋಟಿಕರ್, ರೇಣುಕಾಚಾರ್ಯ ಚಿಕ್ಕಮಗಳೂರು ಉಸ್ತುವಾರಿಯಾಗಿದ್ದಾಗಲೇ ಸಚಿವ ಸ್ಥಾನ ಕಳೆದುಕೊಂಡ್ರೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಕೆ.ಜೆ.ಜಾರ್ಜ್ಗೆ ಮಡಿಕೇರಿಯ ಡಿವೈಎಸ್ಪಿ ಗಣಪತಿ ಅತ್ಮಹತ್ಯೆ ಕೇಸ್ ನಲ್ಲಿ ತಲೆದಂಡವೂ ಅಯ್ತು.ಇನ್ನೂ ಸಿ.ಟಿ.ರವಿ, ಜಿ.ಪರಮೇಶ್ವರ್ ಅವ್ರಿಗೆ ಪಕ್ಷದಲ್ಲಿ ಉನ್ನತ ಸ್ಥಾನವೂ ಸಿಕ್ತು ರಾಜಿನಾಮೆ ನೀಡಿದ್ರು.ಉಸ್ತುವಾರಿ ಸಚಿವರು ಕೇವಲ ದ್ವಜಾರೋಹಣಕ್ಕೆ, ಒಂದೇರಡು ಕೆಡಿಪಿ ಸಭೆಗೆ ಮೀಸಲಾಗಿ ಬದಲಾವಣೆಯಾಗಿರೋದು ಸ್ಥಳೀಯರಲ್ಲಿ ಅಸಮಾಧಾನ ತಂದಿದೆ.
ಆಯಾ ಜಿಲ್ಲೆಯವರಿಗೆ ಉಸ್ತುವಾರಿ ನೀಡುವುದರಿಂದ ಜಿಲ್ಲೆಯಲ್ಲಿ ಸಮರ್ಪಕವಾಗಿ ಪ್ರವಾಸಕೈಗೊಳ್ಳುವುದಿಲ್ಲ, ಅಭಿವೃದ್ಧಿಕಾರ್ಯಕ್ಕೆ ವೇಗಸಿಗುವುದಿಲ್ಲವೆಂಬ ಆರೋಪ ಕೇಳಿಬರುತ್ತಿದ್ದಂತೆ ತಕ್ಷಣ ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದರಿಂದ ಕ್ರೀಡಾಸಚಿವ ನಾರಾಯಣಗೌಡ ಅವರಿಗೆ ಶಿವಮೊಗ್ಗ ಉಸ್ತುವಾರಿಯನ್ನು ಆ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರ ಹೊಸ ಪಟ್ಟಿ ರಿಲೀಸ್, ಅಶೋಕ್, ಆನಂದ್ ಸಿಂಗ್‌ಗೆ ಬಿಗ್ ಶಾಕ್
ಉಸ್ತುವಾರಿ ಸಚಿವರು ಇಲ್ಲದೇ ಮತ್ತೆ ತಬ್ಬಲಿ ಜಿಲ್ಲೆಯಾದ ಚಿಕ್ಕಮಗಳೂರು
ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರ ಪಾತ್ರ ಬಹಳ ಮುಖ್ಯ . ಕೆಡಿಪಿ ಸಭೆ ನಡೆಸುವ ಮೂಲಕ ಸಮಸ್ಯೆಗಳಿಗೆ ಉತ್ತರ ಕಂಡಕೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವರು ಪೂರ್ಣಾವಧಿಗೊಳಸದೇ ರಾಜೀನಾಮೆ , ತಲೆದಂಡದ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಸ್ತುವಾರಿ ಹುದ್ದೆ ಮತ್ತೆ ಖಾಲಿ ಆಗಿದೆ. ಇದರಿಂದ ಅಭಿವೃದ್ದಿ ವೇಗಕ್ಕೆ ಮತ್ತೆ ಹಿನ್ನೆಡೆ ಉಂಟಾಗಿದೆ ಎನ್ನುವ ಜನಾಭಿಪ್ರಾಯ ಕೇಳಿಬಂದಿದೆ. ಒಟ್ಟಾರೆ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿರೋರ ಸಮಸ್ಯೆಯೂ ಬಗೆಹರಿದಿಲ್ಲ.ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಗಾರರಿಗೆ ಮುಕ್ತಿ ಕೊಡಿಸ್ತೀವಿ ಅನ್ನೋ ಭರವಸೆ ನೀಡ್ತಾನೇ ಒಬ್ರ ಮೇಲೆ ಒಬ್ರು ಬದಲಾವಣೆಯಾಗ್ತಾ ಇದ್ದಾರೆ.ಜಿಲ್ಲೆಯ ಹಲವು ಸಮಸ್ಯೆಗಳಿದ್ದರೂ ಸಮಸ್ಯೆಯನ್ನು ನಿಗಿಸ್ತೇವೆ ಅನ್ನೋ ಭರವಸೆ ಕೊಟ್ಟ ಕೆಲವೇ ದಿನದಲ್ಲಿ ಬದಲಾವಣೆಯಾಗ್ತಾ ಇರೋದ್ರಿಂದ ಉಸ್ತುವಾರಿ ಸಚಿವ ಸ್ಥಾನವೇ ಶ್ರಾಪಗ್ರಸ್ಥವಾಯ್ತಾ ಜಿಲ್ಲೆಗೆ ಅನ್ನೊ ಅನುಮಾನ ಮೂಡಿಸಿದೆ.
ವರದಿ : ಆಲ್ದೂರು ಕಿರಣ್
ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು