Asianet Suvarna News Asianet Suvarna News

ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು

ಕಾಫಿ ತೋಟದ ಬೇಲಿಗೆ ಅಕ್ರಮವಾಗಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಸುಮಾರು ಮೂರು ವರ್ಷ ಪ್ರಾಯದ ಹೆಣ್ಣು ಚಿರತೆ ಸಾವಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. 

Chikkamagaluru  leopard died after it getting caught in a trap which set to catch a wild boar at Mudigere akb
Author
First Published Feb 7, 2023, 7:32 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು : ಕಾಫಿ ತೋಟದ ಬೇಲಿಗೆ ಅಕ್ರಮವಾಗಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಸುಮಾರು ಮೂರು ವರ್ಷ ಪ್ರಾಯದ ಹೆಣ್ಣು ಚಿರತೆ ಸಾವಪ್ಪಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ  ಮೂಡಿಗೆರೆ (Mudigere) ವಲಯದ, ಬೀಳುಗುಳ ಸಮೀಪದ, ಮೂಡಿಗೆರೆ ಟೌನ್ ಸೆಕ್ಷನ್, ಟೌನ್ ಬೀಟ್ ನ ಲಕ್ಷ್ಮಣ ಗೌಡ ಮತ್ತು ವೆಂಕಟ್ ಗೌಡ ಅವರ ಕಾಫಿ ಎಸ್ಟೇಟ್‌ನ ಬೇಲಿಗೆ ಅಕ್ರಮವಾಗಿ ಉರುಳು ಹಾಕಲಾಗಿತ್ತು.

ಮೂಡಿಗೆರೆ ಸಮೀಪದ ಬಿಳಗುಳ ಕೊಲ್ಲಿಬ್ಯೆಲ್ (Bilagula Kollibiel) ಸಮೀಪದ ಲಕ್ಷ್ಮಣಗೌಡ ಎಂಬುವವರ ಸುಮಾರು 10 ವರ್ಷದಿಂದ ಪಾಳುಬಿದ್ದ ಕಾಫಿ ತೋಟದಲ್ಲಿ ದುಷ್ಕರ್ಮಿಗಳು ಕಾಡು ಹಂದಿ ಬೇಟೆಗಾಗಿ ಉರುಳು ಹಾಕಿದ್ದರು. ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆಲವೇ ಅಡಿ ದೂರದ ಅಂತರದಲ್ಲಿ ಚಿರತೆಯು ಉರುಳಿಗೆ ಬಿದ್ದಿದ್ದು ಈ ವೇಳೆ ಚಿರತೆ ಕೂಗಾಟವನ್ನು ಕೇಳಿ ದಾರಿಯಲ್ಲಿ ಹೋಗುವ ಪ್ರಯಾಣಿಕರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ರಾತ್ರಿಯೇ ತೆರಳಿದ ಅಧಿಕಾರಿಗಳು ಚಿರತೆಯನ್ನು ಬದುಕಿಸಲು ಪ್ರಯತ್ನಪಟ್ಟಿದ್ದು ಉರುಳು ಕುತ್ತಿಗೆಗೆ ಬಲವಾಗಿ ಸಿಲುಕಿದ್ದ ಕಾರಣ  ಮೃತಪಡುವ ಹಂತಕ್ಕೆ ತಲುಪಿದ್ದು. ರಕ್ಷಣೆ ಮಾಡುವ ವೇಳೆಗೆ ಮೃತಪಟ್ಟಿದೆ.  ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಕಾಫಿ ತೋಟದ ಮಾಲೀಕರು ಹಾಗೂ ಉರುಳು ಹಾಕಿದವರ ವಿರುದ್ಧ ಪ್ರಕರಣ ದಾಖಲಾಗಿದೆ.

Bengaluru: ಗೊಂಗಡಿಪುರದಲ್ಲಿ ಚಿರತೆ ಪ್ರತ್ಯಕ್ಷ?: ಹೆಜ್ಜೆ ಗುರುತು, ನಾಯಿಯ ದೇಹ ಪತ್ತೆ

ಚಿರತೆ ಹಾವಳಿ ನಡುವೆ ಪ್ರತಿ ವರ್ಷ ಭಾರತಕ್ಕೆ ಬರಲಿದೆ 12 ಚೀತಾ, ದಕ್ಷಿಣ ಆಫ್ರಿಕಾ ಜೊತೆ ಒಪ್ಪಂದ!

Follow Us:
Download App:
  • android
  • ios