Asianet Suvarna News

ಹೆಚ್ಚು ಸ್ಥಾನ ಗೆದ್ದಿರುವ ನಮಗೆ ಅಧಿಕಾರ : ಬಿಜೆಪಿ ಶಾಸಕ

ಹೆಚ್ಚಿನ ಸ್ಥಾನ ಪಡೆದಿರುವ ನಮಗೆ ಇಲ್ಲಿ ಅಧಿಕಾರ ಎಂದು ಬಿಜೆಪಿ ಶಾಸಕರೋರ್ವರು ಹೇಳಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಧಿಕಾರ ಪಡೆವ ಭರವಸೆ ವ್ಯಕ್ತಪಡಿಸಿದ್ದಾರೆ.

BJP Will Take Power in Birur Municipality
Author
Bengaluru, First Published Nov 15, 2019, 1:40 PM IST
  • Facebook
  • Twitter
  • Whatsapp

ಬೀರೂರು(ನ.15): ಪಟ್ಟಣ ಪುರಸಭೆಯಲ್ಲಿ ಅತಿ ಹೆಚ್ಚಿನ ಸ್ಥಾನ ಗಳಿಸಿರುವ ಬಿಜೆಪಿ ಬಹುಮತಕ್ಕೆ ಸಂಖ್ಯಾಬಲದ ಕೊರತೆಯಿದ್ದರೂ ರಾಜಕೀಯ ಲೆಕ್ಕಾಚಾರದ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಲಿದ್ದೇವೆ ಎಂದು ಶಾಸಕ ಬೆಳ್ಳಿ ಪ್ರಕಾಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ 10, ಕಾಂಗ್ರೆಸ್9, ಜೆಡಿಎಸ್ 2, ಪಕ್ಷೇತರ 2 ಸ್ಥಾನದಲ್ಲಿ ಗೆಲುವು ಪಡೆದಿವೆ.  ಬೀರೂರು ಪುರಸಭೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿದ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ರವಿಕುಮಾರ್‌ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪಟ್ಟಣದ ಅಭಿವೃದ್ಧಿಗೆ ತಾವು ವಹಿಸಿರುವ ಕಾಳಜಿ ಮತ್ತು ವಿರೋಧಿ ಕಾಂಗ್ರೆಸ್‌ ಹುರುಳಿಲ್ಲದ ಭ್ರಷ್ಟಾಚಾರದ ಆರೋಪಗಳ ಕುರಿತಂತೆ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಬಾರಿ ಸಹ ಬಿಜೆಪಿ ಉತ್ತಮ ಆಡಳಿತ ನೀಡಿದೆ. ಈ ಭಾರಿ ಇನ್ನು ಒಂದು ಹೆಚ್ಚಿನ ಸ್ಥಾನ ಗಳಿಸಿದ್ದು ಇನ್ನು ಮೂರ್ನಾಲ್ಕು ಕಡೆ ಕಡಿಮೆ ಮತಗಳ ಅಂತರದಿಂದ ಕೈತಪ್ಪಿದೆ. ಕಳೆದ ಲೋಕಸಭೆ, ವಿಧಾನಸಭಾ ಚುನಾವಣೆಯಲ್ಲಿ ಬೀರೂರು ನಾಗರಿಕರು ಬಿಜೆಪಿಗೆ ಹೆಚ್ಚಿನ ಮತನೀಡಿ ಆಶೀರ್ವದಿಸಿದ್ದಾರೆ. ಕಳೆದ 14 ತಿಂಗಳಿನಿಂದ ತಾವೂ ಕೂಡ ಪಟ್ಟಣದ ಮೂಲಸೌಕರ್ಯ ಕಾಮಗಾರಿಗಳಿಗೆ ಸರಕಾರದ ಅನುದಾನ ತರುವಲ್ಲಿ ಹಿಂದೆಬಿದ್ದಿಲ್ಲ ಎಂದರು.

ಬಿಜೆಪಿ ಅಲ್ಪಸಂಖ್ಯಾತರ ಹಿತರಕ್ಷಣೆಗೆ ತಾವು ಬದ್ಧವಿದ್ದು ಕ್ಷೇತ್ರದಲ್ಲಿ 16ತಿಂಗಳ ಅವಧಿಯಲ್ಲಿ ಕೋಮು ಸೌಹಾರ್ದತೆ ಮೂಡಿ ಶಾಂತಿ ಸುವ್ಯವಸ್ತೆ ನೆಲೆಸಿದೆ. ಅಲ್ಪಸಂಖ್ಯಾತರು ಆತಂಕಕ್ಕೆ ಒಳಗಾಗುವುದು ಬೇಡ. ಪಕ್ಷದ 15ನೇ ವಾರ್ಡ್‌ನ ಮುಸ್ಲಿಂ ಅಭ್ಯರ್ಥಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಪರಾಜಿತಗೊಂಡಿರುವ ಅಭ್ಯಥಿಗಳು ಹತಾಶಗೊಳ್ಳದೇ ವಾರ್ಡ್‌ನ ಜನರಿಗೆ ಕೃತಜ್ಞತೆ ಸಲ್ಲಿಸಿ ಜನರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಎಂದರು.

Follow Us:
Download App:
  • android
  • ios