ಚಿಕ್ಕಮಗಳೂರಿನಲ್ಲೂ ಐಎಂಎ ಮಾದರಿ ವಂಚನೆ, ಇಲ್ಲೆಲ್ಲ ಐ ಕಾಯಿನ್ ವ್ಯವಹಾರ!
ಬೆಂಗಳೂರು ಶಿವಾಜಿನಗರದ ಐಎಂಎ ವಂಚನೆ ಪ್ರಕರಣ ಇಡೀ ರಾಜ್ಯವನ್ನು ತಲ್ಲಣ ಮಾಡಿದ್ದರೆ ಇದಾದ ಮೇಲೆ ತುಮಕೂರಿನಲ್ಲೂ ಒಂದು ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.ಇದೀಗ ಚಿಕ್ಕಮಗಳೂರಿನ ಸರದಿ.
ಚಿಕ್ಕಮಗಳೂರು[ಜೂ.21] ಕಾಫಿನಾಡು ಚಿಕ್ಕಮಗಳೂರು ಐ ಕಾಯಿನ್ ದೋಖಾ ಪ್ರಕರಣ ನಡೆದಿದ್ದು ಬೆಳಕಿಗೆ ಬಂದಿದೆ. ಜನರಿಗೆ ವಂಚನೆ ಮಾಡಿ ಬಾಗಿಲು ಮುಚ್ಚಿದ ಖಾಸಗಿ ಸಂಸ್ಥೆ ಜನರಿಗೆ ಲಕ್ಷಾಂತರ ರೂ. ವಂಚನೆ ಮಾಡಿ ಬಾಗಿಲು ಹಾಕಿದೆ.
ಚಿಕ್ಕಮಗಳೂರು ಸೇರಿದಂತೆ ಹೊರ ಜಿಲ್ಲೆಯಲ್ಲೂ ವ್ಯಾಪ್ತಿ ಹೊಂದಿರುವ ಖಾಸಗಿ ಸಂಸ್ಥೆ ಐಎಮ್ ಎ ರೀತಿಯಲ್ಲೇ ಜಿಲ್ಲೆಯಲ್ಲಿ ಐ ಕಾಯಿನ್ ಹೆಸರಿನಲ್ಲಿ ಮೋಸ ಮಾಡಿದೆ. ರಕ್ಷೀದಾ ಬಾನು ಎನ್ನುವ ಮಹಿಳೆ ಜನರಿಗೆ ವಂಚಿಸಿರುವ ಆರೋಪ ಬಂದಿದೆ.
ಶಿವಾಜಿನಗರದ IMA ಚಿನ್ನದಂಗಡಿಯಲ್ಲಿ ಪರಿಶೀಲನೆ ಅಂತ್ಯ: 20 ಟ್ರಂಕ್ ಚಿನ್ನಾಭರಣ ಪತ್ತೆ..!
ಆನ್ ಲೈನ್ ಮೂಲಕ ನಡೆಯುತ್ತಿದ್ದ ಕಂಪನಿಹಣಕಾಸು ವಹಿವಾಟು ನಡೆಸುತ್ತಿತ್ತು. ಮಂಗಳೂರು ಮೂಲದ Icoin ಆನ್ ಲೈನ್ ಸಂಸ್ಥೆ ಗೆ ಹಣಪಾವತಿ ಮಾಡುತ್ತಿದ್ದ ಮಹಿಳೆ ತಿಂಗಳ ಚೀಟಿ ವ್ಯವಹಾರ ನಡೆಸುತ್ತಿದ್ದರು. ಡಬಲ್ ಹಣ ನೀಡುವ ಬಗ್ಗೆ ಆಮಿಷ ಒಡ್ಡಿ ಹಣ ಸಂಗ್ರಹಣೆ ಮಾಡಿದ್ದರು ಎನ್ನಲಾಗಿದೆ.
ಚಿಕ್ಕಮಗಳೂರು ನಗರದಲ್ಲೇ 500ಕ್ಕೂ ಅಧಿಕ ಮಂದಿ ಹಣ ಹೂಡಿಕೆ ಮಾಡಿದ್ದರು. ಕಳೆದ ಒಂದು ವಾರದಿಂದ ಸಂಸ್ಥೆಯಿಂದ ಯಾವುದೇ ವ್ಯವಹಾರ ನಡೆಯದ ಹಿನ್ನಲೆಯಲ್ಲಿ ಜನರು ಜಾಗೃತಗೊಂಡು ಆಗಮಿಸಿದ್ದಾರೆ. ರಕ್ಷೀದಾ ಬಾನು ಮನೆ ಮುಂದೆ ಜಮಾವಣೆಯಾದ ಜನ ನಂತರ ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಚಿಕ್ಕಮಗಳೂರು ನಗರದ ಪೇನ್ ಷನ್ ಮೊಹಲ್ ನಲ್ಲಿ ಮಹಿಳೆಯ ಮನೆ ಇತ್ತು.