ರಾಗಿ ಖರೀದಿ ನೊಂದಣಿಗೆ ಬಂದು ಕಾದು ಕಾದು ಸುಸ್ತಾದ ರೈತರು
- ರಾಗಿ ಖರೀದಿ ನೊಂದಣಿಗೆ ಕಾದು ಕಾದು ಸುಸ್ತಾದ ರೈತರು
- ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸಾದ ಅನ್ನದಾತ
- ನಿನ್ನೆಯಿಂದ ಆನ್‌ಲೈನ್‌ನಲ್ಲಿ ರಾಗಿ ಖರೀದಿಗೆ ನೊಂದಣಿ ಎಂದು ಹೇಳಲಾಗಿತ್ತು
ವರದಿ: ರವಿಕುಮಾರ್ ವಿ
ಚಿಕ್ಕಬಳ್ಳಾಪುರ, ಏ.26):: ರಾಗಿ ಖರೀದಿಗೆ ನೊಂದಣಿ ಮಾಡಿಕೊಳ್ಳಲು ಬನ್ನಿ ಎಂದು ಕರೆ ಕೊಟ್ಟಿದ್ದ ಅಧಿಕಾರಿಗಳು ರೈತರಿಗೆ ಶಾಕ್ ನೀಡಿದ್ದಾರೆ. ಬಿರು ಬಿಸಿಲಿನ ಮಧ್ಯೆ ಕ್ಯೂನಲ್ಲಿ ನಿಂತ ರೈತರು ಸಂಜೆ ಪೂರ್ತಿ ಕಾದರು ಪ್ರಯೋಜನವಿಲ್ಲದಂತಾಗಿದೆ. ರಾಗಿ ಖರೀದಿಗೆ ನೊಂದಣಿ ಮಾಡಿಕೊಳ್ಳಬೇಕಾದ ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷದಿಂದ (Technical Problem) ನೊಂದಣಿ ಮಾಡಿಕೊಳ್ಳಲು ಆಗಿಲ್ಲ. ಹೀಗಾಗಿ ರೈತರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾಗಿದ್ದಾರೆ. ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಾದ್ಯಂತ ಹೆಚ್ಚಾಗಿ ರಾಗಿ ಬೆಳೆಯನ್ನು ಬೆಳೆದಿದ್ದು, ತಮ್ಮ ಬೆಳೆಯನ್ನು ಸರ್ಕಾರಕ್ಕೆ ಬೆಂಬಲ ಬೆಲೆಗೆ ನೀಡಲು ಮುಂದಾಗಿದ್ರು. ಆದರೆ ವೆಬ್ ಸೈಟ್ (Website) ನಲ್ಲಿನ ತಾಂತ್ರಿಕ ದೋಷದಿಂದ ನೊಂದಣಿ ಮಾಡಿಕೊಳ್ಳಲು ಆಗದೇ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ರಾಜ್ಯಾದ್ಯಂತ 11.4 ಲಕ್ಷ ಕ್ವಿಂಟಾಲ್ ರಾಗಿ ಖರೀದಿಗೆ ಸರ್ಕಾರ ನಿರ್ಧಾರ ಮಾಡಿದ್ದು, ಬೇಗ ಬಂದು ನೊಂದಣಿ ಮಾಡಿಕೊಳ್ಳುವವರಿಗೆ ಮೊದಲ ಆದ್ಯತೆ ಹೀಗಾಗಿ ರೈತರು ಬಂದು ನೊಂದಣಿ ಮಾಡಿಕೊಳ್ಳಿ, ಸೋಮವಾರದಿಂದ ನೊಂದಣಿ ಆರಂಭವಾಗಲಿದೆ ಎಂದು ಸರ್ಕಾರ ಕರೆ ಕೊಟ್ಟಿತ್ತು. ಹೀಗಾಗಿ ರೈತರು ಬೆಳ್ಳಂಬೆಳಗ್ಗೆ ಸರತಿ ಸಾಲಿನಲ್ಲಿ ಬಂದು ನಿಂತಿದ್ದರು.
ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿಗೆ ರೈತರ ಪರದಾಟ: ಸರ್ಕಾರದ ವಿರದ್ಧ ಅನ್ನದಾತನ ಆಕ್ರೋಶ
ಆನ್ ಲೈನ್ ನೊಂದಣಿ ಕಡ್ಡಾಯ
ರೈತರು ತಾವು ಬೆಳೆದ ರಾಗಿಯನ್ನು ಸರ್ಕಾರ ಖರೀದಿ ಮಾಡಬೇಕಾದರೆ ಮೊದಲು ಆನ್ ಲೈನ್ ನಲ್ಲಿ (Online)ತಾವು ಎಷ್ಟು ಕ್ವಿಂಟಾಲ್ ಮಾರುತ್ತೇವೆ ಎಂದು ನಮೂದಿಸಬೇಕು, ಬಳಿಕ ನೊಂದಾವಣೆ ವೇಳೆ ಒಂದು ಪ್ರತಿಯನ್ನು ನೀಡಲಾಗುತ್ತದೆ. ಆ ಪ್ರತಿಯನ್ನು ತೆಗೆದುಕೊಂಡು ಹೋದ್ರೆ ಮಾತ್ರ ರಾಗಿಯನ್ನು (Millets) ಖರೀದಿ ಮಾಡಲಾಗುತ್ತದೆ. ಹೀಗಾಗಿ ರೈತರು ಬೆಳಗ್ಗೆಯೇ ಬಂದು ಆನ್ ಲೈನ್ ನಲ್ಲಿ ನೊಂದಣಿಗೆ ಕಾದು ಕುಳಿತಿದ್ರು.
ತಾಂತ್ರಿಕ ದೋಷದ ನೆಪ
ರಾಜ್ಯಾದ್ಯಂತ ಸರ್ಕಾರ 11.4 ಲಕ್ಷ ಕ್ವಿಂಟಾಲ್ ರಾಗಿಯನ್ನು ಖರೀದಿ ಮಾಡಲು ನಿರ್ಧಾರ ಮಾಡಿದ್ದು, ಎರಡು ಏಜೆನ್ಸಿಗಳಿಗೆ ನೊಂದಣಿ ಮಾಡಲು ಅವಕಾಶ ನೀಡಿದೆ, ಸೋಮಾವರದಿಂದ ಅಂದ್ರೆ ಏಪ್ರಿಲ್ 25 ರಿಂದ ಖರೀದಿ ಮಾಡಲು ಅವಕಾಶ ಇದೆ ಎಂದು ಹೇಳಿದ್ರು. ಆದ್ರೆ ಸೋಮವಾರ ನೊಂದಣಿ ಮಾಡಲು ಬಂದಿದ್ದ ರೈತರಿಗೆ ಮಾತ್ರ ವೆಬ್ ಪೇಜ್ ನಲ್ಲಿ ತಾಂತ್ರಿಕ ಸಮಸ್ಯೆಯಿಂದ ನೊಂದಣಿಗೆ ಅವಕಾಶ ಆಗದಿದ್ದಕ್ಕೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ಘಂಟೆಗಟ್ಟಲೇ ಬಿರು ಬಿಸಿಲಿನ ನಡುವೆಯೂ ಕಾದು ಕುಳಿತಿದ್ದ ರೈತರು
ರೈತರು ತಾವು ಬೆಳೆದ ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ನೊಂದಣಿ ಮಾಡಿಸಿಕೊಳ್ಳಲು ಬಂದಿದ್ದರು, ಆದ್ರೆ ತಾಂತ್ರಿಕ ಸಮಸ್ಯೆಯಿಂದ ನೊಂದಣಿ ಮಾಡಲು ಸಾಧ್ಯವಾಗದೇ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬಿರು ಬಿಸಿಲನ್ನು ಲೆಕ್ಕಿಸದೇ ನೊಂದಣಿಗೆ ಕಾದು ಕಾದು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸಾದ ಪ್ರಸಂಗ ನಡೆಯಿತು. ಆದ್ರೆ ಅಧಿಕಾರಿಗಳು ರೈತರ ಕೋಪ ತಣ್ಣಗಾಗಿಸಲು ಮ್ಯಾನುಯಲ್ ನೊಂದಣಿ ಮಾಡಿಕೊಂಡರು.
ಏತ ನೀರಾವರಿ ಯೋಜನೆಗೆ ಬೊಮ್ಮಾಯಿ ಚಾಲನೆ, ಸಿಎಂಗೆ ಗೋ ಕಾಣಿಕೆ ನೀಡಿದ ರೈತರು..!