ಚಿಕ್ಕಬಳ್ಳಾಪುರ: ಜೂಜು ಅಡ್ಡೆಯಲ್ಲಿ ಕಂತೆ ಕಂತೆ ಹಣ..ಮೊತ್ತ!
ಭರ್ಜರಿ ಬೇಟೆ ನಡೆಸಿರುವ ಚಿಕ್ಕಬಳ್ಳಾಪುರ ಪೊಲೀಸರು ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿ ಬರೋಬ್ಬರಿ 24 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ[ಜೂ. 23] ಇಸ್ಪೀಟ್ ಅಡ್ಡೆ ಮೇಲೆ ಮಿಂಚಿನ ದಾಳಿ ನಡೆಸಿದ ಪೊಲೀಸರು 24 ಲಕ್ಷ 70 ಸಾವಿರ ನಗದು ವಶ ಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಕಣಿತಹಳ್ಳಿ ಗ್ರಾಮದ ಜೂಜು ಅಡ್ಡೆ ಮೇಲೆ ದಾಳಿ ಮಾಡಿ 24 ಲಕ್ಷ 70 ಸಾವಿರ ನಗದು, 21 ಮೊಬೈಲ್ , 17 ಬೈಕ್ ವಶಕ್ಕೆ ಪಡೆದಿದ್ದಾರೆ. 17 ಜನರನ್ನು ಬಂಧಿಸಿದ್ದಾರೆ.
ಜೂಜಾಡಿ 15 ಕೋಟಿ ಡಾಲರ್ ಸಂಪಾದಿಸಿದ ವಿಶ್ವದ ಅತಿದೊಡ್ಡ ಜೂಜುಕೋರ!
ಕಣಿತಹಳ್ಳಿ ಅರಣ್ಯ ಪ್ರದೇಶದಲ್ಲಿ ಜೂಜು ನಡೆಯುತ್ತಿರುವ ಮಾಹಿತಿ ಆಧರಿಸಿ ಚಿಕ್ಕಬಳ್ಳಾಪುರ ಗ್ರಾಮಾಂತರದ ನಂದಿ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದಾರೆ.