ಚಿಕ್ಕಬಳ್ಳಾಪುರ [ನ.07]: ಮಾಜಿ ಸಚಿವ ಶಿವಶಂಕರ ರೆಡ್ಡಿ ಕೈ ಕತ್ತರಿಸುತ್ತೇನೆ ಎಂದು ಬಿಜೆಪಿ ಮುಖಂಡ ರವಿ ನಾರಾಯಣ ರೆಡ್ಡಿ ಹೇಳಿದ್ದಾರೆ. 

ಗೌರಿ ಬಿದನೂರು ನಗರಸಭಾ ಸಾರ್ವತ್ರಿಕ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ರವಿನಾರಾಯಣ ರೆಡ್ಡಿ ಬಡವರ ಮನೆಗಳ ಮೇಲೆ ಕೈ ಹಾಕಿದರೆ ಶಾಸಕರ ಕೈ ಕತ್ತರಿಸುವವನು ನಾನೇ ಎಂದು ಹೇಳಿದ್ದಾರೆ. 

ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಸುಧಾಕರ್ ಅವರ ಕೈ ಕತ್ತರಿಸುತ್ತೇನೆ ಎಂದು ಹೇಳಿದ್ದ ಶಿವಶಂಕರ ರೆಡ್ಡಿಗೆ ಇದೀಗ ಬಿಜೆಪಿ ಮುಖಂಡ  ತಿರುಗೇಟು ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನರ್ಹ ಶಾಸಕ ಸುಧಾಕರ್ ಅವರ ಕೈ ಕತ್ತರಿಸಲು ಶಿವಶಂಕರ ರೆಡ್ಡಿ ಅವರಿಗೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಮಾತ್ರ ಶಿವಶಂಕರ ರೆಡ್ಡಿ ಕೈ ಕತ್ತರಿಸುತ್ತೇನೆ ಎಂದು ಹೇಳಿದ್ದಾರೆ. 

ಇದೀಗ ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಕತ್ತರಿಸುವ ಹೇಳಿಕೆಗಳು ಹೆಚ್ಚಾಗುತ್ತಿದ್ದು, ಒಬ್ಬರಿಗೊಬ್ಬರು ರಕ್ತ ರಾಜಕೀಯ ಮಾಡುತ್ತಿದ್ದಾರೆ.