ಕಾಂಗ್ರೆಸ್‌ ದೂರು ವಜಾಗೊಳಿಸಿದ ಜಿಲ್ಲಾಧಿಕಾರಿ ನ್ಯಾಯಾಲಯ ಸಾಕ್ಷ್ಯಧಾರ ಒದಗಿಸುವಲ್ಲಿ ವಿಫಲ, ಸದ್ಯರಿಗೆ ಬಿಗ್ ರಿಲೀಫ್ ಅರ್ನಹತೆಯ ಭೀತಿ ಎದುರಿಸುತ್ತಿದ್ದ ಕಾಂಗ್ರೆಸ್ ಸದಸ್ಯರು

ಚಿಕ್ಕಬಳ್ಳಾಪುರ(ಫೆ.06): ಸ್ಥಳೀಯ ಚಿಕ್ಕಬಳ್ಳಾಪುರ(hikkaballapur) ನಗರಸಭೆ ಅಧ್ಯಕ್ಷರ ಚುನಾವಣೆ(Election) ವೇಳೆ ಕಾಂಗ್ರೆಸ್‌ ಪಕ್ಷ ಜಾರಿ ಮಾಡಿದ್ದ ವಿಪ್‌ನ್ನು(Whip) ಉಲ್ಲಂಘನೆ ಮಾಡಿದ್ದಾರೆಂದು ಹೇಳಿ 7 ಮಂದಿ ಕಾಂಗ್ರೆಸ್‌ ನಗರಸಭಾ ಸದಸ್ಯರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅರ್ನಹೆಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ(Court) ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ ಮತ್ತಿತರರು ಸಲ್ಲಿಸಿದ್ದ ದೂರು, ಸಾಕ್ಷ್ಯಧಾರಗಳ ಕೊರತೆಯಿಂದ ಜಿಲ್ಲಾಧಿಕಾರಿಗಳ ನ್ಯಾಯಾಲಯ ವಜಾಗೊಳಿಸಿ ತೀರ್ಪು ಪ್ರಕಟಿಸಿದೆ.

ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆಯಡಿ ನಗರಸಭಾ ಸದಸ್ಯತ್ವದಿಂದ ಅರ್ನಹತೆಯ ಭೀತಿ ಎದುರಿಸುತ್ತಿದ್ದ ಸ್ಥಳಿಯ ನಗರಸಭೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಗೆಲುವು ಸಾಧಿಸಿದ್ದ 17ನೇ ವಾರ್ಡ್‌ನ ಕಾಂಗ್ರೆಸ್‌ ಪಕ್ಷದ ನಗರಸಭಾ ಸದಸ್ಯ ಎಸ್‌.ಎಂ.ರಫೀಕ್‌, 21ನೇ ವಾರ್ಡ್‌ನ ಅಪ್ಜಲ್‌, 28ನೇ ವಾರ್ಡ್‌ನ ಎನ್‌.ಎಸ್‌.ಚಂದ್ರಶೇಖರ್‌, 30ನೇ ವಾರ್ಡ್‌ನ ಪಿ.ಎಚ್‌.ಮೀನಾಕ್ಷಿ, 2ನೇ ವಾರ್ಡ್‌ನ ರತ್ನಮ್ಮ, 22ನೇ ವಾರ್ಡ್‌ನ ಸ್ವಾತಿ ಹಾಗೂ 3ನೇ ವಾರ್ಡ್‌ನ ಶಾಕೀಲ ಭಾನು ಸೇರಿ 7 ಮಂದಿ ಬೀಸಿದೊಣ್ಣೆಯಿಂದ ಪರಾಗಿ ಸದ್ಯಕ್ಕೆ ಬೀಗ್‌ ರೀಲಿಪ್‌ ಸಿಕ್ಕಿದೆ.

Aadhaar-voter ID linking: ಚುನಾವಣಾ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ, ಎನ್‌ಸಿಪಿ, ಕಾಂಗ್ರೆಸ್ ವಿರೋಧ!

ಏನಿದು ಪ್ರಕರಣ:
ಚಿಕ್ಕಬಳ್ಳಾಪುರ ನಗರಸಭೆಯ 31 ವಾರ್ಡ್‌ಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ 16, ಬಿಜೆಪಿ 9, ಜೆಡಿಎಸ್‌ 2 ಹಾಗೂ 4 ಪಕ್ಷೇತರರ ಸದಸ್ಯರು ಗೆಲುವು ಸಾಧಿಸಿದ್ದರು. ಬಳಿಕ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಕ್ಷಕ್ಕೆ ಸ್ಪಷ್ಟಬಹುಮತ ಇದ್ದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ವಿಪ್‌ ಉಲ್ಲಂಘಿಸಿ 7 ಮಂದಿ ಕಾಂಗ್ರೆಸ್‌ ಸದಸ್ಯರು ಅಡ್ಡಮತದಾನ ಮಾಡಿದ ಪರಿಣಾಮ ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಡಿ.ಎಸ್‌.ಆನಂದರೆಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್‌ ಪಕ್ಷದ ವೀಣಾರಾಮು ಆಯ್ಕೆಗೊಂಡಿದ್ದರು.

ಡೀಸಿ ನ್ಯಾಯಾಲಯಕ್ಕೆ ದೂರು:
ವಿಪ್‌ ಉಲ್ಲಂಘಿಸಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ದ ಮತ ಚಲಾಯಿಸಿದ ಕಾಂಗ್ರೆಸ್‌ ಸದಸ್ಯರಾದ ಎಸ್‌.ಎಂ.ರಫೀಕ್‌, ಮೀನಾಕ್ಷಿ, ಅಪ್ಜಲ್‌, ಚಂದ್ರಶೇಖರ್‌, ಸ್ವಾತಿ, ಶಾಕೀಲಬಾನು ಹಾಗೂ ರತ್ನಮ್ಮ ವಿರುದ್ದ ದೂರು ದಾಖಲಿಸಲಾಗಿತ್ತು. ಪ್ರಕರಣವನ್ನು ಜಿಲ್ಲಾಧಿಕಾರಿಗಳು ವಿಚಾರಣೆಗೆ ಕೈಗೆತ್ತಿಕೊಳ್ಳದೇ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್‌ ಹೈಕೋರ್ಟ್‌ ಮೊರೆ ಹೋಗಿ 4 ತಿಂಗಳ ಗಡುವು ಒಳಗೆ ಪ್ರಕರಣ ಇತ್ಯರ್ಥಗೊಳಿಸುವಂತೆ ಡೀಸಿಗೆ ಸೂಚನೆ ಕೊಡಿಸಿದ್ದರು.

ಜಿಲ್ಲಾಧಿಕಾರಿಗಳು ಪ್ರಕರಣದ ವಾದ, ಪ್ರತಿವಾದ ಆಲಿಸಿ ಕಾಂಗ್ರೆಸ್‌ ಸದಸ್ಯರು ವಿಪ್‌ ಉಲ್ಲಂಘನೆ ಆರೋಪಕ್ಕೆ ದೂರುದಾರರು ನ್ಯಾಯಾಲಯಕ್ಕೆ ಸೂಕ್ತ ಸಾಕ್ಷ್ಯಧಾರಗಳನ್ನು ಒದಗಿಸಿ ಆರೋಪವನ್ನು ಸಾಭೀತುಪಡಿಸುವಲ್ಲಿ ವಿಫಲರಾಗಿದ್ದಾರೆಂದು ಹೇಳಿ ಜಿಲ್ಲಾಧಿಕಾರಿ ಆರ್‌.ಲತಾ ಅವರು, ಕಾಂಗ್ರೆಸ್‌ ತನ್ನ 7 ಮಂದಿ ನಗರಸಭಾ ಸದಸ್ಯರ ವಿರುದ್ದ ವಿಪ್‌ ಉಲ್ಲಂಘನೆ ಆರೋಪದಡಿ ದಾಖಲಿಸಿದ್ದ ಪ್ರಕರಣವನ್ನು ವಜಾಗೊಳಿಸಿ ಆದೇಶಿಸಿದ್ದಾರೆ.

ವಿಪ್‌ ನೀಡಿರಲಿಲ್ಲ: ರಫೀಕ್‌
ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಕೊಟ್ಟು ನಮ್ಮ ವಿರುದ್ದ ಕ್ರಮಕ್ಕೆ ಕಾಂಗ್ರೆಸ್‌ ಕೆಲ ಮುಖಂಡರು ಮುಂದಾಗಿದ್ದರು. ಆದರೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ನಮಗೆ ಜಯ ಸಿಕ್ಕಿದೆಯೆಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಗರಸಭಾ ಸದಸ್ಯ ಎಸ್‌.ಎಂ.ರಫೀಕ್‌ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ತಮ್ಮ ವಿರುದ್ದ ನಗರಸಭಾ ಸದಸ್ಯತ್ವ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅರ್ನಹಗೊಳಿಸುವಂತೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಿಸಿದ್ದ ದೂರನ್ನು ಸೂಕ್ತ ಸಾಕ್ಷ್ಯಧಾರಗಳ ಕೊರತೆ ಹಿನೆÜ್ನಲೆಯಲ್ಲಿ ವಜಾಗೊಂಡ ಹಿನ್ನಲೆಯಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ನಮಗೆ ಕಾಂಗ್ರೆಸ್‌ ಪಕ್ಷದಿಂದ ಚುನಾವಣೆ ವೇಳೆ ವಿಪ್‌ ಕೊಟ್ಟಿರಲಿಲ್ಲ ಎಂದರು.

ನಾವು ಯಾವತ್ತು ಪಕ್ಷದ ವಿರುದ್ದ ಹೋಗಿಲ್ಲ. ಬೇಕಾಗಿಯೆ ನಮಗೆ ತೊಂದರೆ ಕೊಡಬೇಕೆಂದು ಹೊಸ ಗುಂಪು, ಬೇರೆ ಪಕ್ಷದಿಂದ ಬಂದವರು ನಮಗೆ ತೊಂದರೆ ಕೊಟ್ಟರು ಅಷ್ಟೇ ಎಂದರು. ಒಂದು ವೇಳೆ ಡೀಸಿ ನ್ಯಾಯಾಲಯ ಆದೇಶದ ವಿರುದ್ದ ಹೈಕೋರ್ಟ್‌ನ ಮೊರೆ ಹೋದರೆ ನಿಮ್ಮ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ, ನಾವೂ ಕೂಡ ಕಾನೂನು ಹೋರಾಟ ಮಾಡಲು ಸಿದ್ದರಿದ್ದೇವೆ ಎಂದರು.