Asianet Suvarna News Asianet Suvarna News

ಹೆದ್ದಾರಿ ಬೀದಿ ದೀಪಗಳು ಕೆಟ್ಟು ತಿಂಗಳಾದರೂ ಕೇಳೋರೇ ಇಲ್ಲ..!

ಹೆದ್ದಾರಿಗಳಲ್ಲಿ ಬೀದಿ ದೀಪಗಳು ಅನಿವಾರ್ಯ. ಹೆಚ್ಚಿನ ಸಂಖ್ಯೆಗಳಲ್ಲಿ ವಾಹನಗಳು ಓಡಾಡುವುದರಿಂದ ಬೀದಿ ದೀಪಗಳು ಕಾರ್ಯ ನಿರ್ವಹಿಸಲೇ ಬೇಕು. ಆದರೆ ಗುಂಡ್ಲುಪೇಟೆ ತಾಲೂಕಿನಲ್ಲಿ ಹೆದ್ದಾರಿ ದೀಪಗಳು ಕೆಟ್ಟು ತಿಂಗಳಾದ್ರೂ ಇದನ್ನು ಕೇಳೋಕೆ ಯಾರೂ ಇಲ್ಲ. ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ.

Highway street lights gone off for
Author
Bangalore, First Published Oct 18, 2019, 1:37 PM IST

ಚಾಮರಾಜನಗರ(ಅ.18): ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ನಡುವೆ ಹಾದು ಹೋಗಿರುವ ಹೆದ್ದಾರಿಯ ಬೀದಿ ದೀಪಗಳು ಕೆಟ್ಟು ತಿಂಗಳುಗಟ್ಟಲೇ ಆಗಿದೆ. ಆದರೂ ಕೆಟ್ಟಿರುವ ದೀಪ ಬೆಳಕು ನೀಡಲು ಯಾರು ಮುಂದೆ ಬಂದಿಲ್ಲ.

ಸಿ.ಎಸ್‌.ನಿರಂಜನಕುಮಾರ್‌ ಶಾಸಕರಾದ ಬಳಿಕ ಹಾಗೂ ಕೈ ವಶದಲ್ಲಿದ್ದ ಬೇಗೂರು ಗ್ರಾಪಂ ಕಮಲದ ತೆಕ್ಕೆಗೆ ಬಂದ ಹೊಸದರಲ್ಲಿ ಅಧಿಕಾರಿಗಳು ದಬಾಯಿಸಿ ಹೆದ್ದಾರಿ ಬದಿಯಲ್ಲಿ ಬೀದಿ ದೀಪ ಉದ್ಘಾಟಿಸಿದ್ದರು. ನಂತರ ಒಂದೆರಡು ತಿಂಗಳ ಬಳಿಕ ದೀಪಗಳು ಕೆಟ್ಟು ಹೋಗಿವೆ. ಕೆಟ್ಟಬೀದಿ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.

ಈ ಗ್ರಾಮದಲ್ಲಿ ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯಗಳೇನೂ ಇಲ್ಲ..!

ರಾತ್ರಿಯ ವೇಳೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಹೆದ್ದಾರಿಯಲ್ಲಿ ಬೀದಿ ದೀಪ ಇಲ್ಲದಿರುವ ಕಾರಣ ಜನರ ಪಾಡು ಹೇಳತೀರದಾಗಿ ಹೋಗಿದೆ. ಕೆಟ್ಟಬೀದಿದೀಪಗಳ ದುರಸ್ತಿಗೆ ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿಗಳು ಗ್ರಾಪಂ ನತ್ತ ಬೆರಳು ತೋರಿಸಿದರೆ ಗ್ರಾಪಂ ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿಗಳತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ಪ್ರಪಂಚದ ಏಕೈಕ ಸಸ್ಯಾಹಾರಿ ಬುಡಕಟ್ಟು ಜನಾಂಗ 'ಬೇಡಗಂಪಣರು'!

ಸ್ಥಳೀಯ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಬೀದಿದೀಪ ಉದ್ಘಾಟನೆಗೆ ತೋರಿದ ಆಸಕ್ತಿಯನ್ನು ಕೆಟ್ಟು ನಿಂತಿರುವ ಬೀದಿ ಉರಿಯುವಂತೆ ಮಾಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow Us:
Download App:
  • android
  • ios