ಗುಂಡ್ಲುಪೇಟೆ ತಾಲೂಕಿನ ಬೇಗೂರು- ಮಾದಾಪಟ್ಟಣದ ರಸ್ತೆಯ ಬದಿಯಲ್ಲಿ ವ್ಯಕ್ತಿಯೊಬ್ಬರ ಶವ ಕಂಡು ಬಂದಿದೆ. ಶವ ಮಾದಾಪಟ್ಟಣ ರಸ್ತೆಯಿಂದ ಕಮರಹಳ್ಳಿಗೆ ಹೋಗುವ ಸಂಪರ್ಕ ರಸ್ತೆಯ ಬದಿ ದೊರೆತಿದೆ. ಮೃತರ ಸಂಬಂಧಿಕ ಪ್ರಕಾರ ಕಾಡು ಪ್ರಾಣಿ ದಾಳಿ ಮಾಡಿ ಸಾಯಿಸಿದೆ ಎಂದು ಹೇಳುತ್ತಿದ್ದಾರೆ. 

ಚಾಮರಾಜನಗರ(ಅ.24): ಗುಂಡ್ಲುಪೇಟೆ ತಾಲೂಕಿನ ಬೇಗೂರು- ಮಾದಾಪಟ್ಟಣದ ರಸ್ತೆಯ ಬದಿಯಲ್ಲಿ ವ್ಯಕ್ತಿಯೊಬ್ಬರ ಶವ ಕಂಡು ಬಂದಿದೆ.

ತಾಲೂಕಿನ ಮಾದಾಪಟ್ಟಣದ ಗ್ರಾಮದ ಮಹದೇವಶೆಟ್ಟಿ(60) ಶವ ಮಾದಾಪಟ್ಟಣ ರಸ್ತೆಯಿಂದ ಕಮರಹಳ್ಳಿಗೆ ಹೋಗುವ ಸಂಪರ್ಕ ರಸ್ತೆಯ ಬದಿ ದೊರೆತಿದೆ. ಮೃತರ ಸಂಬಂಧಿಕ ಪ್ರಕಾರ ಕಾಡು ಪ್ರಾಣಿ ದಾಳಿ ಮಾಡಿ ಸಾಯಿಸಿದೆ ಎಂದು ಹೇಳುತ್ತಿದ್ದಾರೆ.

ಚಿರತೆ ದಾಳಿ ಮಾಡಿ ಶವವನ್ನು ತಿಂದಿದೆ ಎಂದು ಹೇಳುತ್ತಿದ್ದಾರೆ. ಆದರೆ ಕಾಡು ಪ್ರಾಣಿ ದಾಳಿ ಮಾಡಿದ್ದರೆ ವ್ಯಕ್ತಿಯ ಕತ್ತಿಗೆ ಹಿಡಿಯುತ್ತದೆ. ಅದು ಕಂಡು ಬಂದಿಲ್ಲ. ಶವದ ಮುಖದ ಗಾಯದ ಗುರುತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಮರಾಜನಗರ: ಪಂಜಿನ ಹಬ್ಬದ ಮೇಲೆ ಬಿತ್ತು ಕರಿನೆರಳು!

ಕಾಡು ಪ್ರಾಣಿ ದಾಳಿಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲೆಬ್ಬಿದ ಕಾರಣ ಡಿವೈಎಸ್ಪಿ ಮೋಹನ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ.ಮಹದೇವಸ್ವಾಮಿ, ಎಸಿಎಫ್‌ ಕೆ.ಪರಮೇಶ್‌, ಬಂಡೀಪುರ ಪಶು ವೈದ್ಯ ಡಾ. ನಾಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಹದೇವಶೆಟ್ಟಿಗೆ ಕಾಡು ಪ್ರಾಣಿಯಿಂದಲೇ ಸಾವನ್ನಪ್ಪಿದ್ದಾನೆ ಎಂದು ಮೃತನ ಮಗ ದೂರು ನೀಡುವುದಾಗಿ ಹೇಳಿದ ಬಳಿಕ ಶವ ಪರೀಕ್ಷೆಯನ್ನು ಡಾ.ದೀಪಕ್‌ ನಡೆಸಿದ್ದಾರೆ.

ಈ ಗ್ರಾಮದಲ್ಲಿ ಬೀದಿ ನಾಯಿಗಳಿಗಿಂತಲೂ ಕುಡುಕರ ಹಾವಳಿಯೇ ಹೆಚ್ಚು..!

ಇಲಾಖೆಯ ಮೂಲಗಳ ಪ್ರಕಾರ ಶವದ ಕತ್ತಿನ ಹಿಂದೆ ಗಾಯದ ಗುರುತಿದೆ. ಚಿರತೆ ದಾಳಿ ನಡೆಸಿ ಎಳೆದುಕೊಂಡು ಬಂದಿದ್ದರೆ ಕಾಲ, ಕೈಗಳಿಗೆ ಗಾಯದ ಗುರುತಿಲ್ಲ ಎಂದು ತಿಳಿದು ಬಂದಿದೆ.

ಮೃತ ಮಹದೇವಶೆಟ್ಟಿಪುತ್ರ ಈ ಸಂಬಂಧ ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಕೊಲೆಯೋ, ಕಾಡು ಪ್ರಾಣಿಯಿಂದಲೋ ಎನ್ನುವುದು ಪೊಲೀಸ್‌ ತನಿಖೆಯಿಂದ ಗೊತ್ತಾಗಬೇಕಿದೆ.

ಸುಳ್ಳು ವದಂತಿ:

ಚಿರತೆ ದಾಳಿಯಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆ ನೂರಾರು ಜನರು ಮಹದೇವಶೆಟ್ಟಿಶವ ನೋಡಲು ಆಗಮಿಸಿದ್ದರು. ಈ ಸಂಬಂಧ ಎಸಿಎಫ್‌ ಕೆ.ಪರಮೇಶ್‌ ಮಾತನಾಡಿ, ಕಾಡು ಪ್ರಾಣಿಯಿಂದ ಮಹದೇವಶೆಟ್ಟಿಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ವರದಿ ಬಂದಲ್ಲಿ ಮುಂದಿನ ಕ್ರಮ ಎಂದು ಹೇಳಿದ್ದಾರೆ. ಮೃತ ಮಹದೇವಶೆಟ್ಟಿಸಾವನ್ನಪ್ಪಿದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತರ ಪತ್ನಿ, ಮಗನ ಆಕ್ರಂದನ ಮುಗಿಲು ಮುಟ್ಟಿತ್ತು.