ನರಹಂತಹ ಹುಲಿಯನ್ನು ಹಿಡಿಯುವ ಆಪರೇಷನ್ ಟೈಗರ್ ಸಕ್ಸಸ್‌ ಆಗೋದಿಕ್ಕೆ ಕಬ್ಬೇಪುರ ಗ್ರಾಮದ ಬಳಿಯ ಮಾಳಿಗಮ್ಮನ ಅನುಗ್ರಹವೇ ಕಾರಣ ಎಂಬ ಮಾತು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕೇಳಿ ಬಂದಿದೆ. ಸತತ ಪ್ರಯತ್ನದ ನಂತರವೂ ಹುಲಿ ಸೆರೆಯಾಗದಿದ್ದಾಗ ಅಧಿಕಾರಿಗಳು ಜನರ ಒತ್ತಾಯಕ್ಕೆ ಮಣಿದು ಹರಕೆ ಹೊತ್ತಿದ್ದರು.

ಗುಂಡ್ಲುಪೇಟೆ(ಅ.16): ಬಂಡೀಪುರ ಅರಣ್ಯದಂಚಿನಲ್ಲಿ ಹುಲಿಗೆ ಇಬ್ಬರು ರೈತರು ಬಲಿಯಾದ ಬಳಿಕ ನಡೆದ ಕಾರ್ಯಾಚರಣೆ ದೇವರ ಮೊರೆಯಿಂದಲೇ ಯಶಸ್ವಿಯಾಯಿತು ಎಂದು ಬಂಡೀಪುರ ಹುಲಿ ಯೋಜನೆ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಟಿ.ಬಾಲಚಂದ್ರ ಹೇಳಿದ್ದಾರೆ.

ಬಂಡೀಪುರ ಕಾಡಂಚಿನ ಕಬ್ಬೇಪುರ ಗ್ರಾಮದ ಬಳಿಯ ಮಾಳಿಗಮ್ಮನ ದೇವರಿಗೆ ದರ್ಶನ ಪಡೆದು ಹರಕೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾಯಿಯ ಸ್ಮರಣೆಯಿಂದ ಸುಖ್ಯಾಂತವಾಗಿದೆ. ಅ. 8ರಂದು ಚೌಡಹಳ್ಳಿಯ ರೈತ ಶಿವಲಿಂಗಪ್ಪ ಹುಲಿಗೆ ತುತ್ತಾದ. ಇಲಾಖೆ ಹುಲಿ ಸೆರೆಗೆ ಕಾರ್ಯಾಚರಣೆ ಎರಡು ದಿನ ನಡೆದರೂ ಹುಲಿ ಕಾಣಲಿಲ್ಲ. ಮಾಳಿಗಮ್ಮನಿಗೆ 5 ವರ್ಷದಿಂದ ಪೂಜೆ ಹಾಗೂ ಜಾತ್ರೆ ಸ್ಥಗಿತವಾಗಿದ್ದೇ ಹುಲಿ ಕಾಟಕ್ಕೆ ಕಾರಣ ಎಂದು ಈ ಭಾಗದ ರೈತರು ಹೇಳಿದ ಹಿನ್ನೆಲೆ ನಾನು ದೇವರ ಮೊರೆ ಹೋದೆ ಎಂದಿದ್ದಾರೆ.

ಹುಲಿ ಸೆರೆಗೆ ಹರಕೆ ಹೊತ್ತಿತ್ತಾ ಅರಣ್ಯ ಇಲಾಖೆ..?

ಮಾಳಿಗಮ್ಮನ ಹರಕೆ ಮಾಡಿಕೊಂಡ ಬಳಿಕ ಹುಲಿ ಸೆರೆಯಾಗಿದೆ. ಸದ್ಯ ಈ ಭಾಗದ ಜನರಿಗೆ ತುಸು ನೆಮ್ಮದಿ ಸಿಗುವಂತಾಗಿದೆ. ಬಂಡೀಪುರ ಕಾಡಂಚಿನ ಗ್ರಾಮದಲ್ಲಿ ಮಾನವ-ಪ್ರಾಣಿ ಸಂಘರ್ಷ ಆಗದಿರಲಿ ಎಂದು ದೇವರಲ್ಲಿ ಬೇಡಿಕೊಂಡಿರುವೆ ಎಂದಿದ್ದಾರೆ.

ಇಂದು ಗೋಪಾಲನಿಗೆ ಪೂಜೆ:

ಮಾಳಿಗಮ್ಮನ ದೇವರಲ್ಲಿ ಹುಲಿ ಸೆರೆಯಾಗಲಿ ಎಂದು ಬೇಡಿದ್ದೆ. ಈ ಹಿಂದೆ ಬಂಡೀಪುರ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಾಗಲೂ ಕೂಡ ಗೋಪಾಲಸ್ವಾಮಿ ಬೆಟ್ಟದ ದೇವರ ಮೊರೆ ಹೋಗಿದ್ದೇ. ಅ. 16 ಬುಧವಾರ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ.

5ನೇ ದಿನದ ಆಪರೇಷನ್ ಸಕ್ಸಸ್, ನರಭಕ್ಷಕ ಹುಲಿ ಕೊನೆಗೂ ಅರೆಸ್ಟ್..!

ಈ ಸಮಯದಲ್ಲಿ ಅರಣ್ಯಾಧಿಕಾರಿಗಳಾದ ಎನ್‌.ಪಿ.ನವೀನ್‌ಕುಮಾರ್‌, ಮಂಜುನಾಥ ಪ್ರಸಾದ್‌, ಶ್ರೀನಿವಾಸನಾಯಕ, ಈ ಭಾಗದ ಮುಖಂಡರಾದ ಸಿ.ಎಂ.ಶಿವಮಲ್ಲಪ್ಪ, ಎಚ್‌.ಪಿ.ಮಹೇಂದ್ರ, ಬೆಳ್ಳಿಬಸಪ್ಪ,ನಂದೀಶ್‌, ಛತ್ರಿ ಮಂಜುನಾಥ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಪೂಜೆಯಲ್ಲಿ ಭಾಗವಹಿಸಿದ್ದರು.

ಪ್ರಸಾದ ವಿನಿಯೋಗ:

5 ವರ್ಷಗಳಿಂದ ನಿಂತಿದ್ದ ಪೂಜೆ ಕಾರಣ ಮಂಗಳವಾರ ನಡೆದ ಮಾಳಿಗಮ್ಮನ ದೇವಸ್ಥಾನಲ್ಲಿ ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ಕೂಡ ಗ್ರಾಮಸ್ಥರು ಏರ್ಪಡಿಸಿದ್ದರು.

ಉಚ್ಛಾಟಿತ ಶಾಸಕನ ಕ್ಷೇತ್ರದಲ್ಲಿ ಇತ್ತೀಚೆಗೆ ಪಕ್ಷ ಸೇರಿದ ಮುಖಂಡಗೆ ಟಿಕೆಟ್..!