ಬೆಂಗಳೂರು, [ಜ.22]: ಭಾರತೀಯ ಪಶ್ಚಿಮ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1944  ವಿವಿಧ ಗ್ರೂಪ್-ಡಿ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 

ಗ್ರೂಪ್-ಡಿ ಯ ವಿವಿಧ ವಿಭಾಗಗಳಾದ ಖಲಾಸಿ, ಟ್ರಕ್ ಕ್ಲೀನರ್, ವಾಚ್ಮ್ಯಾನ್, ಫ್ಲ್ಯಾಗ್ಮಾನ್, ಟಿಡಬ್ಲ್ಯೂಡಿ ಕ್ಲೀನರ್, ಜವಾನ, ಮಾರ್ಕರ್ , ಡಬ್ಲ್ಯೂ ಆರ್ ಬಿ ಮತ್ತು ಆರ್ ಆರ್ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ರೈಲ್ವೇ ಇಲಾಖೆಯಲ್ಲಿ 14033 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಜನವರಿ 28,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗನುಸಾರ ಕೇಳಲಾಗುವ ವಿದ್ಯಾರ್ಹತೆಯನ್ನು ತಿಳಿಯಲು ಅಧಿಕೃತ ವೆಬ್ ಸೈಟ್ ಅನ್ನು ವೀಕ್ಷಿಸಿ.

ಸರ್ಕಾರಿ ಹಾಗೂ ಖಾಸಗಿ ಹುದ್ದೆಗಲ ನೇಮಕಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೇತನದ ವಿವರ: ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗ ಪಶ್ಚಿಮ ರೈಲ್ವೆ ನೇಮಕಾತಿಯ ಅನುಸಾರ ವೇತನವನ್ನು ನೀಡಲಾಗುವುದು.

ಅರ್ಜಿ ಸಲ್ಲಿಕೆ: ಪಶ್ಚಿಮ ರೈಲ್ವೆ ನೇಮಕಾತಿ 2019 ರ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಸೂಚನೆಯಂತೆ ಆನ್ ಲೈನ್ ಮೂಲಕ ಜನವರಿ 28,2019 ಅರ್ಜಿಯನ್ನು ಸಲ್ಲಿಸಬಹುದು.

ಇನ್ನು ಈ ಬಗ್ಗೆ ಹೆ್ಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ