ಬೆಂಗಳೂರು, (ಫೆ.22): ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡದಲ್ಲಿ 6 ಎಕ್ಸಿಕ್ಯುಟಿವ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

 ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://www.iitdh.ac.in./ಗೆ ಭೇಟಿ ನೀಡಿ  ಅಧಿಸೂಚನೆಯನ್ನು ಓದಿಕೊಂಡು ನಂತರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

UPSC ನೇಮಕಾತಿ 2019: IAS,IFC ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಸಕ್ತ ಅರ್ಹ ಅಭ್ಯರ್ಥಿಗಳು ಕೆಳಗಡೆ ನೀಡಲಾಗಿರುವ ವಿಳಾಸದಲ್ಲಿ ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಮಾರ್ಚ್ 16,2019 ರಂದು ಸಂದರ್ಶನದಲ್ಲಿ ಪಾಲ್ಗೋಳ್ಳಬಹುದು.

ವಿದ್ಯಾರ್ಹತೆ: ಎಂಇ /ಎಂ.ಟೆಕ್
ವೇತನ ಶ್ರೇಣಿ: 25,000 ರಿಂದ 40,000 ರೂ. ತಿಂಗಳಿಗೆ.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಟ 27ರೊಳಗಿನ ವಯೋಮಿತಿಯನ್ನು ಹೊಂದಿರಬೇಕು. 
ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ನೇರನೇಮಕಾತಿಯನ್ನು ನಡೆಸಲಾಗುತ್ತಿದ್ದು ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.
ಸಂದರ್ಶನ ನಡೆಯುವ ಸ್ಥಳ: ಐಐಟಿ ಧಾರವಾಡ, ವಾಲ್ಮಿ ಕ್ಯಾಂಪಸ್, ಹೈ ಕೋರ್ಟ್ ಹತ್ತಿರ, ಧಾರವಾಡ-580011. 
ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ