ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಮೋದಿ, 1 ಕೋಟಿಗೂ ಅಧಿಕ ನೌಕರರಿಗೆ ಲಾಭ
2019 ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ,ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇದು1 ಕೋಟಿಗೂ ಅಧಿಕ ನೌಕರರಿಗೆ ನೆರವಾಗಲಿದೆ.
ನವದೆಹಲಿ, [ಫೆ.19]: ಕೇಂದ್ರ ಸರ್ಕಾರಿ ನೌಕರರಿಗೆ ಶೇ.3 ರಷ್ಟು ಡಿಯರ್ನೆಸ್ ಅಲೋಯನ್ಸ್(DA) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ
ಇಂದು [ಮಂಗಳವಾರ] ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ DA ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ತುಟ್ಟಿಭತ್ಯೆಯನ್ನು ಶೇ 9ರಿಂದ ಶೇ.12ಕ್ಕೆ ಏರಿಕೆಯಾಗಿದ್ದು, ಜನವರಿ 1, 2019ರಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
Cabinet approves a proposal for promulgation of Indian Medical Council (Amendment Second Ordinance-2019), also approves additional DA of 3% over the existing rate of 9% to govt. employees and dearness relief to pensioners from 1.1.2019
— ANI (@ANI) February 19, 2019
ಈ ಘೋಷಣೆಯಿಂದ 48.41 ಲಕ್ಷ ಉದ್ಯೋಗಿಗಳು ಹಾಗೂ 62.03 ಲಕ್ಷ ಪಿಂಚಣಿದಾರರು ಒಳಗೊಂಡಂತೆ ಒಟ್ಟು 1.1 ಕೋಟಿ ಕೇಂದ್ರ ನೌಕರರಿಗೆ ನೆರವಾಗಲಿದೆ. ಅಲ್ಲದೆ ಇದರಿಂದಾಗಿ ಸರ್ಕಾರಕ್ಕೆ 9 ಸಾವಿರ ಕೋಟಿ ವೆಚ್ಚವಾಗಲಿದೆ.