UPSC NDA Notification 2022: 400 ಹುದ್ದೆಗಳ ನೇಮಕಾತಿ ಪರೀಕ್ಷೆ ಅಧಿಸೂಚನೆ ಹೊರಡಿಸಿದ UPSC
- NDAಯಲ್ಲಿ ಖಾಲಿ ಇರುವ 400 ಹುದ್ದೆಗಳ ಭರ್ತಿಗೆ ಪರೀಕ್ಷೆಯ ಅಧಿಸೂಚನೆ ಪ್ರಕಟ
- ಅರ್ಜಿ ಸಲ್ಲಿಸಲು ಜನವರಿ 11 ಕೊನೆಯ ದಿನ
- ಏಪ್ರಿಲ್ 10 ರಂದು ಪರೀಕ್ಷೆ ನಡೆಸುತ್ತಿರುವ ಆಯೋಗ
ನವದೆಹಲಿ(ಡಿ.23): ಕೇಂದ್ರ ಲೋಕ ಸೇವಾ ಆಯೋಗ (Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಹೀಗಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defence Academy-NDA) ಈ ಬಗ್ಗೆ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಸೇನೆಯಲ್ಲಿ ಖಾಲಿ ಇರುವ ಒಟ್ಟು 400 ಹುದ್ದೆಗಳು ಭರ್ತಿ ಮಾಡಲು ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 11 ಕೊನೆಯ ದಿನವಾಗಿರುತ್ತದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆಯೋಗವು ಏಪ್ರಿಲ್ 10, 2022 ರಂದು ಪರೀಕ್ಷೆಯನ್ನು ನಡೆಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ www.upsc.gov.in ಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 400 ಹುದ್ದೆಯಲ್ಲಿ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ- 370 ಹುದ್ದೆಗಳು, ನೌಕಾ ಅಕಾಡೆಮಿ- 30 ಹುದ್ದೆಗಳು ಇವೆ. ಕೇಂದ್ರ ಲೋಕ ಸೇವಾ ಆಯೋಗದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ ಪಾಸಾಗಿರಬೇಕು.
ವಯೋಮಿತಿ ಮತ್ತು ಅರ್ಜಿ ಶುಲ್ಕ: ಕೇಂದ್ರ ಲೋಕ ಸೇವಾ ಆಯೋಗದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಿವಾಹಿತ ಪುರುಷ ಅಭ್ಯರ್ಥಿಗಳು ಜುಲೈ 2,2003ರ ಮುಂಚೆ ಮತ್ತು ಜುಲೈ 1,2006ರ ನಂತರ ಜನಿಸಿರಬಾರದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಸ್ಪರ್ಧಾತ್ಮಕ ಪರೀಕ್ಷೆ , ದೈಹಿಕ ಪರೀಕ್ಷೆ, ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.
ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಅನುಸರಿಸಬೇಕಾದ ಅಂಶಗಳು: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು upsconline.nic.in ನಲ್ಲಿ NDA 2022 ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಕೋರಲಾಗಿದೆ. NDA 2022 ನೋಂದಣಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ತಮ್ಮ ಭಾವಚಿತ್ರ ಮತ್ತು ಸಹಿಯನ್ನು ಅಧಿಸೂಚನೆಯಲ್ಲಿ ನಮೂದಿಸಿದ ಆಯಾಮದಲ್ಲೇ ಅಪ್‌ಲೋಡ್ ಮಾಡಬೇಕು. ಅಭ್ಯರ್ಥಿಯ ಛಾಯಾಚಿತ್ರ JPG ಫಾರ್ಮೆಟ್ ನಲ್ಲಿ ಗರಿಷ್ಠ 300 KB ಫೈಲ್ ಗಾತ್ರ ಹೊಂದಿರಬೇಕು. ಅಭ್ಯರ್ಥಿಯ ಸಹಿಯ ಫೈಲ್ JPG ಫಾರ್ಮೆಟ್ ನಲ್ಲಿ ಗರಿಷ್ಠ 20 KB ಫೈಲ್ ಗಾತ್ರ ಹೊಂದಿರಬೇಕು.
ISI Recruitment 2022: ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯಲ್ಲಿ ಜೂನಿಯರ್ ರಿಸರ್ಚ್ ಫೆಲೋ
ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರದ ಸ್ಕ್ಯಾನ್ ಮಾಡಿದ ಪ್ರತಿ, ಅಭ್ಯರ್ಥಿಯ ಸಹಿಯುಳ್ಳ ಸ್ಕ್ಯಾನ್ ಮಾಡಿದ ಪ್ರತಿ, ಫೋಟೋ ಐಡಿ ಪಿಡಿಎಫ್ ನಲ್ಲಿರಬೇಕು. (ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ಯಾವುದು ಕೂಡ ಫೋಟೋ ಐಡಿಗೆ ನೀಡಬಹುದು) ಮೀಸಲಾತಿ ವರ್ಗಗಳಿಗೆ ಸೇರಿದವರು ಅರ್ಜಿ ಪ್ರಕ್ರಿಯೆಯಲ್ಲಿ ತಮ್ಮ ಜಾತಿ ಅಥವಾ ಪಂಗಡದ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬೇಕಾಗಿಲ್ಲ.
NDA 2022 ಅರ್ಜಿ ಪ್ರಕ್ರಿಯೆಯಲ್ಲಿ, ಅಭ್ಯರ್ಥಿಗಳು ಸರಕಾರದಿಂದ ಅಧಿಕೃತಗೊಂಡ ಫೋಟೋ ID ಯಲ್ಲಿ ನಮೂದಿಸಲಾದ ವಿವರಗಳನ್ನು ಒದಗಿಸಬೇಕು. ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಒಂದೇ ಫೋಟೋ ಐಡಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಪರೀಕ್ಷೆ ಪ್ರಾರಂಭವಾಗುವ ಮೂರು ವಾರಗಳ ಮೊದಲು NDA ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗುತ್ತದೆ. UPSC ಯ ಅಧಿಕೃತ ಸೈಟ್ ಅನ್ನು ಆಗಾಗ ನೀವು ಪರೀಕ್ಷಿಸುತ್ತಿರಬೇಕು.