Asianet Suvarna News Asianet Suvarna News

UPSC Recruitment 2022: ಗಣಿಗಾರಿಕೆ ಭೂವಿಜ್ಞಾನಿ ಸೇರಿ 78 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗ  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. 
36 ಕಿರಿಯ ಗಣಿಗಾರಿಕೆ ಭೂವಿಜ್ಞಾನಿ  ಹುದ್ದೆಗಳು ಸೇರಿ ಒಟ್ಟು 78 ಹುದ್ದೆಗಳು ಖಾಲಿ ಇದೆ. 

UPSC Recruitment 2022 notification for Junior Mining Geologist and other posts apply now gow
Author
Bengaluru, First Published Jan 8, 2022, 6:21 PM IST | Last Updated Jan 8, 2022, 6:21 PM IST

ಬೆಂಗಳೂರು(ಜ.8): ಕೇಂದ್ರ ಲೋಕಸೇವಾ ಆಯೋಗ (Union Publice Service Commission - UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. 36 ಕಿರಿಯ ಗಣಿಗಾರಿಕೆ ಭೂವಿಜ್ಞಾನಿ (Junior Mining Geologist) ಹುದ್ದೆಗಳು ಸೇರಿ ಒಟ್ಟು 78 ಹುದ್ದೆಗಳು ಖಾಲಿ ಇದೆ. ಆಸಕ್ತರು ಜನವರಿ 27ರ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ  ಇಲಾಖೆಯ ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಒಟ್ಟು 78 ಹುದ್ದೆಗಳ ವಿವರ ಇಂತಿದೆ
ಕಿರಿಯ ಗಣಿಗಾರಿಕೆ ಭೂವಿಜ್ಞಾನಿ - 36 ಹುದ್ದೆಗಳು
ಸಹಾಯಕ ನಿರ್ದೇಶಕ -16 ಹುದ್ದೆಗಳು
ಸಹಾಯಕ ಪ್ರಾಧ್ಯಾಪಕ (Assistant Professor)-7 ಹುದ್ದೆಗಳು
ರಸಾಯನಶಾಸ್ತ್ರಜ್ಞ (Chemist)-5 ಹುದ್ದೆಗಳು
ಆರ್ಥಿಕ ಅಧಿಕಾರಿ(Economic Officer)-4 ಹುದ್ದೆಗಳು
ಉಪನ್ಯಾಸಕ (Lecturer) - 4 ಹುದ್ದೆಗಳು
ವಿಜ್ಞಾನಿ 'ಬಿ' (Documents)- 2 ಹುದ್ದೆಗಳು
ಸಹಾಯಕ ಸಂಪಾದಕ - 1 ಹುದ್ದೆ
ಸಂಶೋಧನಾ ಅಧಿಕಾರಿ - 1 ಹುದ್ದೆ
ಆಡಳಿತ ಅಧಿಕಾರಿ - 1 ಹುದ್ದೆ
ಮೆಕ್ಯಾನಿಕಲ್ ನಾವಿಕ ಇಂಜಿನಿಯರ್ (Mechanical Marine Engineer) - 1 ಹುದ್ದೆ

CESCOM 2019 Selection Result: ಜೂನಿಯರ್ ಪವರ್‌ಮ್ಯಾನ್‌ ಹುದ್ದೆಗಳಿಗೆ ಆಯ್ಕೆಯಾದವರು

ಶೈಕ್ಷಣಿಕ ವಿದ್ಯಾರ್ಹತೆ: ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ  ಹುದ್ದೆಗನುಸಾರವಾಗಿ CA/CS/ICWA, Mcom,BE, ಸೇರಿ ಇತರೆ ಸ್ನಾತಕೋತ್ತರ ವಿದ್ಯಾರ್ಹತೆಗಳು ಮತ್ತು ಪದವಿ ಪಡೆದಿರಬೇಕು.

ವಯೋಮಿತಿ: ಕೇಂದ್ರ ಲೋಕಸೇವಾ ಆಯೋಗ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ 30 ರಿಂದ 50 ವರ್ಷದೊಳಗಿರಬೇಕು.

ಅರ್ಜಿ ಶುಲ್ಕ:  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ರೂ. 25/- ಅನ್ನು ಪಾವತಿಸಬೇಕು. ಶುಲ್ಕವನ್ನು SBI ಯ ಯಾವುದೇ ಶಾಖೆಯಲ್ಲಿ ಪಾವತಿ ಮಾಡಬಹುದು. ಅಥವಾ SBI ಯ ನೆಟ್ ಬ್ಯಾಂಕಿಂಗ್ ಸೌಲಭ್ಯ ಇಲ್ಲವೇ ವೀಸಾ/ಮಾಸ್ಟರ್ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡಬಹುದು. SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗಿಲ್ಲ.

IRFC RECRUITMENT 2022: ಭಾರತೀಯ ರೈಲ್ವೆ ಹಣಕಾಸು ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಖಾಲಿ ಇರುವ 187 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ ಆಹ್ವಾನ: ಕೇಂದ್ರ ಲೋಕಸೇವಾ ಆಯೋಗ (Union Publice Service Commission- UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 187 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ  13 ಜನವರಿ 2022 ರೊಳಗೆ ಅರ್ಜಿ ಸಲ್ಲಿಸಬೇಕು. ಖಾಲಿ ಇರುವ ಸಹಾಯಕ ಕಮಿಷನರ್ (Asistant Commissioner), ಸಹಾಯಕ ಇಂಜಿನಿಯರ್ (Assistant Engineer), ಜೂನಿಯರ್ ಟೈಮ್ ಸ್ಕೇಲ್ (Junior Time Scale), ಆಡಳಿತಾಧಿಕಾರಿ (Administrative Officer) ಮತ್ತು ಸಹಾಯಕ ಪ್ರಾಧ್ಯಾಪಕ (Assistant Professor) ಹುದ್ದೆಗಳು ಸೇರಿ ಒಟ್ಟು 187 ಹುದ್ದೆಗಳನ್ನು ಈ ನೇಮಕಾತಿ ಡ್ರೈವ್ನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು, ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. 

Latest Videos
Follow Us:
Download App:
  • android
  • ios