UPSC Recruitment 2022: ಉಪನ್ಯಾಸಕ ಸೇರಿ ವಿವಿಧ ಹುದ್ದೆಗಳಿಗೆ ಯುಪಿಎಸ್‌ಸಿ ನೇಮಕಾತಿ

ಕೇಂದ್ರ ಲೋಕಸೇವಾ ಆಯೋಗ ಖಾಲಿ ಇರುವ ವಿವಿಧ ಹುದ್ದೆಗಳ  ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 31 ಆಗಿದೆ. 

UPSC Recruitment 2022 notification for 45 various post gow

ಬೆಂಗಳೂರು(ಮಾ.14): ಕೇಂದ್ರ ಲೋಕಸೇವಾ ಆಯೋಗ (Union Public Service Commission- UPSC) ಖಾಲಿ ಇರುವ ವಿವಿಧ ಹುದ್ದೆಗಳ  ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಹಿರಿಯ ಉಪನ್ಯಾಸಕ, ಟೆಕ್ನಿಕಲ್ ಆಫೀಸರ್ ಸೇರಿ ಒಟ್ಟು 45 ವಿವಿಧ ಹುದ್ದೆಗಳು ಖಾಲಿ ಇದ್ದು,  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 31. ಆಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ upsc.gov.in ಗೆ ಭೇಟಿ ನೀಡಲು ಕೋರಲಾಗಿದೆ. https://www.upsconline.nic.in/  ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಒಟ್ಟು 45 ಹುದ್ದೆಗಳ ಮಾಹಿತಿ ಇಂತಿದೆ
ಸಹಾಯಕ ಸಂಪಾದಕ (ತೆಲುಗು): 1 ಹುದ್ದೆ
ಫೋಟೋಗ್ರಾಫಿಕ್ ಅಧಿಕಾರಿ: 1 ಹುದ್ದೆ
ವಿಜ್ಞಾನಿ "ಬಿ" (ಟಾಕ್ಸಿಕಾಲಜಿ): 1 ಹುದ್ದೆ
ತಾಂತ್ರಿಕ ಅಧಿಕಾರಿ: 4 ಹುದ್ದೆಗಳು
ಡ್ರಿಲ್ಲರ್-ಇನ್-ಚಾರ್ಜ್: 3 ಹುದ್ದೆಗಳು
ಗಣಿ ಸುರಕ್ಷತೆಯ ಉಪ ನಿರ್ದೇಶಕರು (ಮೆಕ್ಯಾನಿಕಲ್): 23 ಹುದ್ದೆಗಳು
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್): 3 ಹುದ್ದೆಗಳು
ಸಿಸ್ಟಮ್ ವಿಶ್ಲೇಷಕ: 6 ಹುದ್ದೆಗಳು
ಹಿರಿಯ ಉಪನ್ಯಾಸಕರು (ಜನರಲ್ ಮೆಡಿಸಿನ್): 1 ಹುದ್ದೆ
ಹಿರಿಯ ಉಪನ್ಯಾಸಕರು (ಸಾಮಾನ್ಯ ಶಸ್ತ್ರಚಿಕಿತ್ಸೆ): 1 ಹುದ್ದೆ
ಹಿರಿಯ ಉಪನ್ಯಾಸಕರು (ಕ್ಷಯರೋಗ ಮತ್ತು ಉಸಿರಾಟದ ಕಾಯಿಲೆಗಳು): 1 ಹುದ್ದೆ

ಶೈಕ್ಷಣಿಕ ವಿದ್ಯಾರ್ಹತೆ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಸಹಾಯಕ ಸಂಪಾದಕ (ತೆಲುಗು):   ಲೈಬ್ರೆರಿಯನ್ ಪದವಿ/ಡಿಪ್ಲೋಮ ಜೊತೆಗೆ 5 ವರ್ಷಗಳ ಅನುಭವ ಜೊತೆಗೆ ತೆಲುಗು ಭಾಷೆಯಲ್ಲಿ ಪ್ರಾವಿಣ್ಯತೆ ಇರಬೇಕು
ಫೋಟೋಗ್ರಾಫಿಕ್ ಅಧಿಕಾರಿ:  ಪದವಿ /ಛಾಯಾಗ್ರಹಣದ ವಿವಿಧ ಶಾಖೆಗಳಲ್ಲಿ ಎರಡು ವರ್ಷಗಳ ಅನುಭವ/ಪತ್ರಿಕಾ ಛಾಯಾಗ್ರಹಣದಲ್ಲಿ ಅನುಭವ. 
ವಿಜ್ಞಾನಿ "ಬಿ" (ಟಾಕ್ಸಿಕಾಲಜಿ):  ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ಬಯೋಕೆಮಿಸ್ಟ್ರಿ/ಫಾರ್ಮಕಾಲಜಿ/ಫಾರ್ಮಸಿ/ಫೊರೆನ್ಸಿಕ್ ಸೈನ್ಸ್ .
ತಾಂತ್ರಿಕ ಅಧಿಕಾರಿ: ಸಿವಿಲ್ ಇಂಜಿನಿಯರಿಂಗ್ /ಪರಿಸರ ಇಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ  
ಡ್ರಿಲ್ಲರ್-ಇನ್-ಚಾರ್ಜ್:  ಡ್ರಿಲ್ಲಿಂಗ್/ಮೈನಿಂಗ್/ಮೆಕ್ಯಾನಿಕಲ್/ಸಿವಿಲ್/ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಜೊತೆಗೆ ಅನುಭವ
ಗಣಿ ಸುರಕ್ಷತೆಯ ಉಪ ನಿರ್ದೇಶಕರು (ಮೆಕ್ಯಾನಿಕಲ್):  ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ಇಂಜಿನಿಯರ್‌ಗಳ ಸಂಸ್ಥೆಯಿಂದ  ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಾಖೆಯಲ್ಲಿ ಅಸೋಸಿಯೇಟ್ ಸದಸ್ಯತ್ವ ಪರೀಕ್ಷೆಯ ವಿಭಾಗ A ಮತ್ತು ವಿಭಾಗ B ಯಲ್ಲಿ ತೇರ್ಗಡೆ ಮತ್ತು 10 ವರ್ಷಗಳ ಅನುಭವ.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್):  ದೂರಸಂಪರ್ಕ/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ 
ಸಿಸ್ಟಮ್ ವಿಶ್ಲೇಷಕ:  ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿ ಅಥವಾ M.Sc. ಕಂಪ್ಯೂಟರ್ ಸೈನ್ಸ್ ಅಥವಾ ಎಂ.ಎಸ್ಸಿ. ಅಥವಾ ಕಂಪ್ಯೂಟರ್ ಸೈನ್ಸ್ 
ಹಿರಿಯ ಉಪನ್ಯಾಸಕರು (ಜನರಲ್ ಮೆಡಿಸಿನ್, ಸಾಮಾನ್ಯ ಶಸ್ತ್ರಚಿಕಿತ್ಸೆ ,ಕ್ಷಯರೋಗ ಮತ್ತು ಉಸಿರಾಟದ ಕಾಯಿಲೆಗಳು):  ಭಾರತೀಯ ವೈದ್ಯಕೀಯ ನೋಂದಣಿಯಲ್ಲಿ ನೋಂದಾಯಿಸಿರಬೇಕು. M.D.(ಮೆಡಿಸಿನ್ ಅಥವಾ ಕ್ಷಯರೋಗ)/ M.D.(ಜನರಲ್ ಮೆಡಿಸಿನ್ ಅಥವಾ T.B. ಮತ್ತು ಉಸಿರಾಟದ ಕಾಯಿಲೆಗಳು) ಅಥವಾ M.S.(ಶಸ್ತ್ರಚಿಕಿತ್ಸೆ)/ M.S.(ಜನರಲ್ ಸರ್ಜರಿ) ಆಗಿರಬೇಕು.

ವಯೋಮಿತಿ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ವಯೋಮಿತಿ ಹೊಂದಿರಬೇಕು.
ಸಹಾಯಕ ಸಂಪಾದಕ (ತೆಲುಗು) - ಗರಿಷ್ಠ 35 ವರ್ಷಗಳು
ಫೋಟೋಗ್ರಾಫಿಕ್ ಅಧಿಕಾರಿ, ವಿಜ್ಞಾನಿ 'ಬಿ' (ಟಾಕ್ಸಿಕಾಲಜಿ) - ಗರಿಷ್ಠ 30 ವರ್ಷಗಳು
ವಿಜ್ಞಾನಿ 'ಬಿ' (ಟಾಕ್ಸಿಕಾಲಜಿ) - ಗರಿಷ್ಠ 35 ವರ್ಷಗಳು
ತಾಂತ್ರಿಕ ಅಧಿಕಾರಿ (ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್) - ಗರಿಷ್ಠ 35 ವರ್ಷಗಳು
ಡ್ರಿಲ್ಲರ್-ಇನ್-ಚಾರ್ಜ್ - ಗರಿಷ್ಠ 30 ವರ್ಷಗಳು
ಗಣಿ ಸುರಕ್ಷತೆಯ ಉಪ ನಿರ್ದೇಶಕ (ಮೆಕ್ಯಾನಿಕಲ್) - ಗರಿಷ್ಠ 40 ವರ್ಷಗಳು
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಲೆಕ್ಟ್ರಾನಿಕ್ಸ್) - ಗರಿಷ್ಠ 35 ವರ್ಷಗಳು
ಸಿಸ್ಟಮ್ ವಿಶ್ಲೇಷಕ - ಗರಿಷ್ಠ 35 ವರ್ಷಗಳು
ಹಿರಿಯ ಉಪನ್ಯಾಸಕರು - ಗರಿಷ್ಠ 50 ವರ್ಷಗಳು

ಅರ್ಜಿ ಶುಲ್ಕ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ  ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ರೂ  ಅರ್ಜಿ ಶುಲ್ಕ.  SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

Latest Videos
Follow Us:
Download App:
  • android
  • ios