ಯುಪಿಎಸ್‍ಸಿ ಪೂರ್ವ ಪರೀಕ್ಷೆ: ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್

ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಳನ್ನು ಮುಂದೂಡುಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಹತ್ವದ ತೀರ್ಪು ಪ್ರಕಟಿಸಿದೆ.

UPSC Prelims 2020: Plea seeking postponement of exam dismissed by Supreme Court

ನವದೆಹಲಿ, (ಸೆ.30): ಕೇಂದ್ರ ಲೋಕಸೇವಾ ಆಯೋಗ ಅಕ್ಟೋಬರ್ 4ರಂದು ನಡೆಸಲು ಉದ್ದೇಶಿಸಿರುವ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಳನ್ನು ಮುಂದೂಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ಅ.4ರಂದು ಯುಪಿಎಸ್‍ಸಿ ಪ್ರಿಲಿಮ್ಸ್ ಪರೀಕ್ಷೆ ನಡೆಯಲಿದೆ.

ಕೊರೋನಾ ಭೀತಿ ಮತ್ತು ಕೆಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ 2 ತಿಂಗಳ ಮಟ್ಟಿಗೆ ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆಗಳನ್ನು ಮುಂದೂಡುವಂತೆ ಅರ್ಜಿ ಸಲ್ಲಿಸಲಾಗುತ್ತು..

IAS ಸಂದರ್ಶನದಲ್ಲಿ ಕೇಳುವ 'ರಕ್ತ ಕುದಿಯುವಂತ' ಪ್ರಶ್ನೆಗಳು, ಆದ್ರೆ #BeCool...

ಆದ್ರೆ, ಸುಪ್ರೀಂಕೋರ್ಟ್ ಈ ಅರ್ಜಿಗಳನ್ನು ಇಂದು (ಬುಧವಾರ) ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಎ.ಎಂ.ಕಾನ್ವಿಲ್ಕರ್, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ, ಅಕ್ಟೋಬರ್ 4ರಂದು ಯುಪಿಎಸ್‍ಸಿ ಪರೀಕ್ಷೆಗಳನ್ನು ನಡೆಸಬೇಕು ಎಂದಿದೆ.

ಈ ಹಿಂದೆ ಕೊರೋನಾ ಪಿಡುಗಿನಿಂದ ಪರೀಕ್ಷೆಗೆ ಹಾಜರಾಗಲು ವಂಚಿತರಾದ ಅಭ್ಯರ್ಥಿಗಳಿಗೂ ಕೊನೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷಾ ಪ್ರವೇಶ ಪತ್ರ ಪ್ರಕಟ

2020 ಮತ್ತು 2021ರ ಯುಪಿಎಸ್‍ಸಿ ಪರೀಕ್ಷೆಗಳನ್ನು ಒಟ್ಟಿಗೆ ನಡೆಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸಹ ಸರ್ವೋನ್ನತ್ತ ನ್ಯಾಯಾಲಯ ವಜಾಗೊಳಿಸಿದೆ.

Latest Videos
Follow Us:
Download App:
  • android
  • ios