Asianet Suvarna News Asianet Suvarna News

ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷಾ ಪ್ರವೇಶ ಪತ್ರ ಪ್ರಕಟ

ಕೇಂದ್ರ ಲೋಕಸೇವಾ ಆಯೋಗ ನಾಗರಿಕ ಸೇವೆಗಳ 2020 ರ ಪೂರ್ವಭಾವಿ ಪರೀಕ್ಷೆಗೆ ಹಾಲ್‌ ಟೆಕೆಟ್ ರಿಲೀಸ್ ಮಾಡಿದ್ದು, ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಇದು ಕಡ್ಡಾಯವಾಗಿದೆ.

UPSC Civil Services Prelims Exam 2020: Admit card released
Author
Bengaluru, First Published Sep 1, 2020, 2:49 PM IST

ನವದೆಹಲಿ, (ಸೆ.01): ಕೇಂದ್ರ ಲೋಕಸೇವಾ ಆಯೋಗವು ಇಂದು (ಮಂಗಳವಾರ) ನಾಗರಿಕ ಸೇವೆಗಳ 2020 ರ ಪೂರ್ವಭಾವಿ ಪರೀಕ್ಷೆಗೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.

ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 04 ರಂದು ದೇಶದಾದ್ಯಂತ ನಡೆಸಲು ದಿನಾಂಕ ನಿಗದಿಮಾಡಿದೆ. ಅ.04 ರವರೆಗೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಕೇಳಬಹುದಾದ ಟ್ರಿಕ್ಕಿ ಪ್ರಶ್ನೆಗಳು ಇವು

 ಪರೀಕ್ಷೆಗೆ ಅಪ್ಲಿಕೇಶನ್‌ ಸಲ್ಲಿಸಿರುವ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಅಭ್ಯರ್ಥಿಗಳು ಇ-ಅಡ್ಮಿಟ್ ಕಾರ್ಡ್‌ ಅನ್ನು ಪ್ರಿಂಟ್‌ ತೆಗೆದುಕೊಂಡು ಹೋಗದಿದ್ದಲ್ಲಿ, ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ. ಪ್ರವೇಶ ಪತ್ರದ ಜತೆಗೆ, ಅಧಿಕೃತ ಫೋಟೋ ಐಡಿಯನ್ನು ಸಹ ಪರೀಕ್ಷೆ ಕೊಠಡಿಗೆ ತೆಗೆದುಕೊಂಡು ಹೋಗಬೇಕು. 

Follow Us:
Download App:
  • android
  • ios