UPSC Indian Forest Service Recruitment 2022: ಐಎಎಸ್‌, ಐಪಿಎಸ್‌, ಐಎಫ್‌ಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ಅರಣ್ಯ ಸೇವೆ, ಭಾರತೀಯ ನಾಗರಿಕ ಸೇವೆ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ.

UPSC is inviting applications for IFS  Exam 2022 for 151 Vacancies gow

ಬೆಂಗಳೂರು(ಫೆ.6): ಕೇಂದ್ರ ಲೋಕಸೇವಾ ಆಯೋಗ (Union Public Service Commission- UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ಅರಣ್ಯ ಸೇವೆ, ಭಾರತೀಯ ನಾಗರಿಕ ಸೇವೆ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರ ಹಾಗೂ ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. 

ಭಾರತೀಯ ನಾಗರಿಕ ಸೇವೆ ಹುದ್ದೆ -861 
ಭಾರತೀಯ ಅರಣ್ಯ ಸೇವೆ ಹುದ್ದೆ -151  

ಕೇಂದ್ರ ಲೋಕಸೇವಾ ಆಯೋಗ ಭಾರತೀಯ ಅರಣ್ಯ ಸೇವೆ ಮತ್ತು ಸಿವಿಲ್‌ ಸೇವೆಗಳಿಗೆ ಜೂನ್‌ 05, 2022 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಈ ಸದರಿ ಪರೀಕ್ಷೆಗೆ ಫೆಬ್ರುವರಿ 22, 2022 ರವರೆಗೆ ಆನ್‌ಲೈನ್‌ ರಿಜಿಸ್ಟ್ರೇಷನ್‌ ಪಡೆಯಬಹುದು.

EASTERN COALFIELDS LIMITED RECRUITMENT 2022: ಬರೋಬ್ಬರಿ 313 ಮೈನಿಂಗ್ ಸಿರ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 03-02-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22-02-2022 (18-00 PM)
ಯುಪಿಎಸ್‌ಸಿ ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ : 05-06-2022
ಅಪ್ಲಿಕೇಶನ್‌ ವಿತ್‌ಡ್ರಾ ಪಡೆಯಲು ಅವಕಾಶ : 01-03-2022 ರಿಂದ 07-03-2022 ರ ಸಂಜೆ 06 ಗಂಟೆವರೆಗೆ.

ವಯೋಮಿತಿ ಅರ್ಹತೆಗಳು
- ಅಭ್ಯರ್ಥಿಗಳು 01-08-2022 ಕ್ಕೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ 32 ವರ್ಷ ಮೀರಿರಬಾರದು.
- ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
- ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

BEML Recruitment 2022: ಗ್ರೂಪ್​ ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 9 ಕೊನೆಯ ದಿನ

ಶೈಕ್ಷಣಿಕ ವಿದ್ಯಾರ್ಹತೆ: ಯುಪಿಎಸ್‌ಸಿ ಸಿವಿಲ್‌ ಸೇವೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ಪಾಸ್‌ ಮಾಡಿರಬೇಕು. ಯುಪಿಎಸ್‌ಸಿ ಭಾರತೀಯ ಅರಣ್ಯ ಸೇವೆ ಪರೀಕ್ಷೆ ತೆಗೆದುಕೊಳ್ಳಲು ಅಭ್ಯರ್ಥಿ ಪದವಿಯಲ್ಲಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ/ ಸಸ್ಯಶಾಸ್ತ್ರ / ರಸಾಯನಶಾಸ್ತ್ರ / ಭೂವಿಜ್ಞಾನ / ಗಣಿತ / ಭೌತಶಾಸ್ತ್ರ / ಅಂಕಿಅಂಶ ಮತ್ತು ಪ್ರಾಣಿಶಾಸ್ತ್ರ / ಕೃಷಿ ಪದವಿ / ಅರಣ್ಯಶಾಸ್ತ್ರದಲ್ಲಿ ಯಾವುದಾದರೂ ಒಂದು ವಿಷಯವನ್ನು ಓದಿರಬೇಕು.

ಯುಪಿಎಸ್‌ಸಿ ಐಎಎಸ್‌ / ಸಿಎಸ್‌ಇ ಪರೀಕ್ಷೆ ಎಷ್ಟು ಬಾರಿ ಬರೆಯಬಹುದು?
- ಸಾಮಾನ್ಯ ವರ್ಗದ ಅಭ್ಯರ್ಥಿ 6 ಬಾರಿ ಐಎಎಸ್‌ / ಸಿಎಸ್‌ಇ ಪರೀಕ್ಷೆಗಳನ್ನು ಬರೆಯಬಹುದು.
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು. ಇಂತಿಷ್ಟು ಎಂದು ಮಿತಿ ಇಲ್ಲ.
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 09 ಬಾರಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬಹುದು.
- PWD ಅಭ್ಯರ್ಥಿ GL / EWS/OBC ಗೆ ಸೇರಿದಲ್ಲಿ 09 ಬಾರಿ, ಎಸ್‌ಸಿ / ಎಸ್‌ಟಿ ಅಭ್ಯರ್ಥಿ ಆಗಿದ್ದಲ್ಲಿ ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಯುಪಿಎಸ್‌ಸಿ ನೇಮಕಾತಿಗೆ ಅರ್ಜಿ ಹಾಕಲು ವೆಬ್‌ಸೈಟ್‌ upsconline.nic.in ಗೆ ಭೇಟಿ ನೀಡಿ.

Latest Videos
Follow Us:
Download App:
  • android
  • ios