ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಡಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್‌ 27 ಕೊನೆಯ ದಿನಾಂಕವಾಗಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಪರ್ಸನಲ್ ಅಸಿಸ್ಟೆಂಟ್ ನೇಮಕಾತಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಡಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್‌ 27 ಕೊನೆಯ ದಿನಾಂಕವಾಗಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಯಲ್ಲಿ 323 ಪರ್ಸನಲ್ ಅಸಿಸ್ಟೆಂಟ್ ನೇಮಕಾತಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಡಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಖಾಲಿ ಇರುವ 323 ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮದಲ್ಲಿ ಇಂಜಿನಿಯರ್ ನೇಮಕಾತಿ, ಲಕ್ಷಕ್ಕೂ ಹೆಚ್ಚು ವೇತನ!

ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-03-2024
ನೇಮಕಾತಿ ಅರ್ಹತಾ ಪರೀಕ್ಷೆಗಳ ದಿನಾಂಕ : 07-07-2024

ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ: ರೂ. 25
ಎಸ್‌ ಸಿ/ ಎಸ್‌ ಟಿ /ಮಹಿಳಾ ಅಭ್ಯರ್ಥಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕವಿಲ್ಲ

ವಯಸ್ಸಿನ ಮಿತಿ (27-03-2024 ರಂತೆ)
ಕನಿಷ್ಟ ವಯಸ್ಸಿನ ಮಿತಿ : 18 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ: 30 ವರ್ಷಗಳು

ತರಬೇತಿ ಅವಧಿ : 2 ವರ್ಷಗಳು

ವೇತನ ಶ್ರೇಣಿ : 7ನೇ ಸ್ಕೇಲ್

ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಲ್ಲಿ ಸೈಂಟಿಸ್ಟ್‌ ಹುದ್ದೆ, 1 ಲಕ್ಷದ 70 ಸಾವಿರ ವೇತನ!

ಶೈಕ್ಷಣಿಕ ವಿದ್ಯಾರ್ಹತೆ
1. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು.

2. ಸ್ಟೆನೋಗ್ರಫಿಯಲ್ಲಿ ಪ್ರತಿ ನಿಮಿಷಕ್ಕೆ 120 ಪದಗಳ ವೇಗದೊಂದಿಗೆ 10 ನಿಮಿಷಗಳ ಅವಧಿಗೆ ಡಿಕ್ಟೇಶನ್ (ಇಂಗ್ಲಿಷ್ ಅಥವಾ ಹಿಂದಿ) ಮಾಡುವ ಸಾಮರ್ಥ್ಯ ಹೊಂದಿರಬೇಕು.

ಆಯ್ಕೆ ವಿಧಾನ/ಪರೀಕ್ಷಾ ಮಾಹಿತಿ: ಇಲ್ಲಿ ಆಂಗ್ಲ ಭಾಷೆ, ಸಾಮಾನ್ಯ ಜ್ಞಾನ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್ ವಿಷಯಗಳ ಮೇಲೆ 300 ಅಂಕಗಳಿಗೆ ಎರಡು ಗಂಟೆಯ ಅವಧಿಗೆ ಬಹು ಆಯ್ಕೆಯ ವಸ್ತುನಿಷ್ಠ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳ ಮಾಹಿತಿ: ಕರ್ನಾಟಕದಲ್ಲಿ ಧಾರವಾಡ , ಮೈಸೂರು ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ : www.upsconline.nic.in