Asianet Suvarna News Asianet Suvarna News

ಉದ್ಯೋಗಾಂಕ್ಷಿಗಳಿಗೆ ಗುಡ್​ ನ್ಯೂಸ್​: 6506 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟಾಫ್​ ಸೆಲೆಕ್ಷನ್​ ಕಮಿಷನ್ ವಿವಿಧ ಒಟ್ಟು  6,506 ಹುದ್ದೆಗಳ ನೇಮಕಾತಿಗೆ ಅಧಿಸೂಚಿನೆ ಹೊರಡಿಸಿದೆ. ಈ ಬಗ್ಗೆ ಇನ್ನುಷ್ಟು ಮಾಹಿತಿ ಈ ಕೆಳಗಿನಂತಿದೆ.

SSC CGL recruitment 6506 vacancies of various Group B and c rbj
Author
Bengaluru, First Published Jan 3, 2021, 4:55 PM IST

ನವದೆಹಲಿ, (ಜ.03): ಸ್ಟಾಫ್​ ಸೆಲೆಕ್ಷನ್​ ಕಮಿಷನ್​ (ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಒಟ್ಟು 6,506 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು. ಮೀಸಲಾತಿಗೆ ಅನುಗುಣವಾಗಿ ಈ ಹುದ್ದೆಗಳು ಇವೆ.

 (ಗ್ರೂಪ್‌ 'ಬಿ' ಗೆಜೆಟೆಡ್‌ 250, ಗ್ರೂಪ್‌ 'ಬಿ' ನಾನ್‌-ಗೆಜೆಟೆಡ್‌-3,513, ಗ್ರೂಪ್‌ 'ಸಿ' 2,743 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು,  ಕಂಬೈನ್ಡ್ ಗ್ರಾಜುಯೇಟ್‌ ಲೆವೆಲ್‌ ಪರೀಕ್ಷೆ-2020ರ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಅರ್ಜಿಗಳನ್ನು  ಆನ್‌ಲೈನ್ ಮೂಲಕ ಸಲ್ಲಿಸಲು  31-01-2021 ಕೊನೆ ದಿನವಾಗಿರುತ್ತದೆ. 

ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುದ್ದೆಗಳಿಗೆ ಟೈಯರ್‌-1 ಪರೀಕ್ಷೆ 2021ರ ಮೇ 29ರಿಂದ ಜೂನ್‌ 7ರ ನಡುವೆ ನಡೆಯಲಿದೆ. ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಮೂಲಕ ಕೇಂದ್ರ ಸರಕಾರದ ವಿವಿಧ ಇಲಾಖೆ, ಸಚಿವಾಲಯಗಳಲ್ಲಿನ ಗ್ರೂಪ್‌ 'ಬಿ' ಮತ್ತು ಗ್ರೂಪ್‌ 'ಸಿ' ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.

ವಿದ್ಯಾರ್ಹತೆ: ಅಂಗೀಕೃತ ವಿ.ವಿ.ಗಳಿಂದ ಯಾವುದೇ ಪದವಿ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. 

ವಯೋಮಿತಿ:  ವಿವಿಧ ಹುದ್ದೆಗಳಿಗೆ ಭಿನ್ನ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಪೋಸ್ಟ್‌ ಲೆವೆಲ್‌-8ರ ಹುದ್ದೆಗಳಿಗೆ 30 ವರ್ಷ, ಪೋಸ್ಟ್‌ ಲೆವೆಲ್-7ಕ್ಕೆ 20-30 ವರ್ಷ, ಇನ್‌ಸ್ಪೆಕ್ಟರ್‌ ಹುದ್ದೆಗಳಿಗೆ 18-30 ವರ್ಷ, ಪೋಸ್ಟ್‌ ಲೆವೆಲ್‌-5 ಹುದ್ದೆಗಳಿಗೆ 18-27 ವರ್ಷ ಎಂದು ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:  100 ರೂ. ನಿಗದಿ ಪಡಿಸಲಾಗಿದೆ. ಅಭ್ಯರ್ಥಿಗಳು ಯುಪಿಐ, ನೆಟ್‌ ಬ್ಯಾಂಕಿಂಗ್‌ ಮೂಲಕ ಅಥವಾ ವೀಸಾ, ಮಾಸ್ಟರ್‌ಕಾರ್ಡ್‌, ಮೆಸ್ಟ್ರೋ, ರುಪೇ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಮೂಲಕ ಶುಲ್ಕ ಪಾವತಿಸಬಹುದು. ಎಸ್‌ಬಿಐ ಶಾಖೆಗಳಲ್ಲಿ ಚಲನ್‌ ಮೂಲಕವೂ ಪಾವತಿಸಬಹುದಾಗಿದೆ. ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ವಿಕಲಚೇತನರು (ಪಿಡಬ್ಲ್ಯುಡಿ), ಮಾಜಿ ಸೈನಿಕ (ಇಎಸ್‌ಎಂ) ಮತ್ತು ಮಹಿಳಾ ಅಭ್ಯರ್ಥಿಗಳು ಮತ್ತು ಅರ್ಜಿದಾರರು ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಪ್ರಮುಖ ದಿನಾಂಕಗಳು 
ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸುವ ದಿನಾಂಕಗಳು: 29-12-2020 to 31-01-2021

ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 31-01-2021

ಆನ್‌ಲೈನ್ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ 02-02-2021

ಆಫ್‌ಲೈನ್ ಚಲನ್ ಜನರೇಟ್​ ಮಾಡಲು ಕೊನೆಯ ದಿನಾಂಕ 04-02-2021

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios