Asianet Suvarna News Asianet Suvarna News

SSB Recruitment: ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಶಸ್ತ್ರ ಸೀಮಾ ಬಲ (Sashastra Seema Bal)ದಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಇನ್ಸ್‌ಪೆಕ್ಟರ್ ಮತ್ತು ಸಬ್‌ ಇನ್ಸ್‌ಪೆಕ್ಟ್ ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಸೂಕ್ತ ಅಭ್ಯರ್ಥಿಗಳು ಜನವರಿ 5ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

SSB is recruiting inspector and sub inspector posts
Author
Bengaluru, First Published Nov 27, 2021, 5:21 PM IST
  • Facebook
  • Twitter
  • Whatsapp

ಕೇಂದ್ರ ಸರಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇಲ್ಲೊಂದು ಅವಕಾಶವಿದೆ. ಅದರಲ್ಲೂ ಸುರಕ್ಷಾ ಪಡೆಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಈ ಹುದ್ದೆಗಳು ಹೆಚ್ಚು ಸೂಕ್ತವಾಗಿವೆ. ಏನೆಂದರೆ, ಕೇಂದ್ರ ಗೃಹ ಇಲಾಖೆಯಲಯ (Ministry of Home Affairs) ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಶಸ್ತ್ರ ಸೀಮಾ ಬಲ (Sashastra Seema Bal) ದಲ್ಲಿ 13 ಇನ್‌ಸ್ಪೆಕ್ಟರ್ ಮತ್ತು ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.  ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು  ಸಶಸ್ತ್ರ ಸೀಮಾ ಬಲ (Sashastra Seema Bal)ದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಪರಿಶೀಲಿಸಬಹುದು.  ಭಾರತದೆಲ್ಲೆಡೆ ಪೂರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಸಿದ್ದರಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ನವೆಂಬರ್ 17 ರಿಂದ ಅರ್ಜಿ ಪ್ರಕ್ರಿಯೆಯು ಶುರುವಾಗಿದ್ದು, ಜನವರಿ 15ರವರೆಗೂ ಅರ್ಜಿ ಸಲ್ಲಿಕೆಗೆ ಕಾಲಾವಕಾಶವಿದೆ.  ಸಶಸ್ತ್ರ ಸೀಮಾ ಬಲ  (Sashastra Seema Bal) ನೇಮಕಾತಿಯಲ್ಲಿ ಇನ್‌ಸ್ಪೆಕ್ಟರ್ (Inspector) ಮತ್ತು ಸಬ್‌ ಇನ್‌ಸ್ಪೆಕ್ಟರ್ (Sub-Inspector) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಟರ್‌ಮೀಡಿಯೇಟ್ (10+2) ಪೂರೈಸಿದ್ದು, ಸೈನ್ಸ್ನಲ್ಲಿ ಬಯೋಲಾಜಿ (Biology) ಪ್ರಮುಖ ವಿಷಯವಾಗಿರಬೇಕು. ಹಾಗೇ ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ  ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

SSB ನೇಮಕಾತಿ ಮೂಲಕ ಸಬ್‌ ಇನ್‌ಸ್ಪೆಕ್ಟರ್ (Sub Inspector) - 8 ಹುದ್ದೆಗಳು, ಇನ್‌ಸ್ಪೆಕ್ಟರ್ (Inspector) - 5 ಹುದ್ದೆಗಳು ಸೇರಿ ಒಟ್ಟು ಒಟ್ಟು 13 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಶಸ್ತ್ರ ಸೀಮಾ ಬಲ ನೇಮಕಾತಿಯ ಇನ್‌ಸ್ಪೆಕ್ಟರ್ ಮತ್ತು ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 15,2022ಕ್ಕೆ ಅನ್ವಯಿಸುವಂತೆ ಗರಿಷ್ಟ 52 ವರ್ಷ ವಯೋಮಿತಿ ಇರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.  ಅಧಿಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಸಶಸ್ತ್ರ ಸೀಮಾ ಬಲ ನೇಮಕಾತಿಯ ಇನ್‌ಸ್ಪೆಕ್ಟರ್ ಮತ್ತು ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಡೆಪ್ಯುಟೇಶನ್/ ಮರು ಉದ್ಯೋಗದ ಮೂಲಕ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತದೆ.  ಸಶಸ್ತ್ರ ಸೀಮಾ ಬಲ ನೇಮಕಾತಿಯ ಇನ್‌ಸ್ಪೆಕ್ಟರ್ ಮತ್ತು ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ನಿಯಮಾನುಸಾರ ಪೇ ಲೆವೆಲ್ (Pay Level) 6 ಮತ್ತು 7ರ ಅನ್ವಯ ವೇತನ ಪಡೆಯಲಿದ್ದಾರೆ.  

ಸಶಸ್ತ್ರ ಸೀಮಾ ಬಲ ನೇಮಕಾತಿಯ ಇನ್‌ಸ್ಪೆಕ್ಟರ್ ಮತ್ತು ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದು.

Jobs in Konkan Railway: ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟಂಟ್‌ ಹುದ್ದೆಗಳಿಗೆ ವಾಕ್ ಇನ್ ಇಂಟರ್‌ವ್ಯೂ

ಇನ್ನು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು "Commandant (Pers-II), Directorate General,Sashastra Seema Bal, East Block-V, R.K. Puram, Sector-I.  New Delhi-110066 - ಈ ವಿಳಾಸಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಜನವರಿ 15ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಹಾಗೂ ಅಧಿಸೂಚನೆಯನ್ನು ಗಮನಿಸಬಹುದು.

Job Vacancy: ಎಚ್‌ಪಿಸಿಎಲ್‌ನಲ್ಲಿ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

Follow Us:
Download App:
  • android
  • ios