ಬೆಂಗಳೂರು, (ಮೇ. 22): ದಕ್ಷಿಣ ರೈಲ್ವೆ142 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 6/6/2019ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ದಕ್ಷಿಣ ರೈಲ್ವೆ ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದವರು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.

ವಿವಿಧ ಹುದ್ದೆಗಳ ನೇಮಕಾತಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜ್ಯೂನಿಯರ್ ಇಂಜಿನಿಯರ್/P.way 84 ಹುದ್ದೆಗಳು, ಜ್ಯುನಿಯರ್ ಇಂಜಿನಿಯರ್/Track Machine Organization 58  ಸೇರಿದಂತೆ ಒಟ್ಟು 142 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ 9,300 ರಿಂದ 34,800 ತನಕ ಪ್ರತಿ ತಿಂಗಳ ವೇತನ ನಿಗದಿ ಮಾಡಲಾಗಿದೆ. 

ವಯೋಮಿತಿ: SC/ST ಅಭ್ಯರ್ಥಿಗಳಿಗೆ 47 ವರ್ಷ, OBC ಅಭ್ಯರ್ಥಿಗಳಿಗೆ 45, ಯುಆರ್ ಅಭ್ಯರ್ಥಿಗಳಿಗೆ 42 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅವಶ್ಯಕತೆ ಇಲ್ಲ.

ವಿದ್ಯಾರ್ಹತೆ
1. ಜ್ಯೂನಿಯರ್ ಇಂಜಿನಿಯರ್/P.way ಹುದ್ದೆಗೆ ಅರ್ಜಿ ಸಲ್ಲಿಸುವವರು ಸಿವಿಲ್ ಇಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೊಮಾ, ಸಿವಿಲ್ ಇಂಜಿನಿಯರಿಂಗ್‌ ನಲ್ಲಿ ಬಿಎಸ್‌ಸಿ ಅಥವಾ ಸಿವಿಲ್ ಇಂಜನಿಯರಿಂಗ್‌ನಲ್ಲಿ ಮಾನ್ಯತೆ ಪಡೆದ ಸಂಸ್ಥೆ ಅಥವ ವಿಶ್ವವಿದ್ಯಾಲಯದಿಂದ ತತ್ಸಮಾನ ಕೋರ್ಸ್ ಪೂರ್ಣಗೊಳಿಸಿರಬೇಕು. 

2. ಜ್ಯುನಿಯರ್ ಇಂಜಿನಿಯರ್/Track Machine Organization ಹುದ್ದೆಗೆ ಅರ್ಜಿ ಹಾಕುವವರು ಮೆಕಾನಿಕಲ್‌/ಪ್ರೊಡಕ್ಷನ್/ಆಟೋ ಮೊಬೈಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/Instrumentation & Control Engineeringನಲ್ಲಿ ಮೂರು ವರ್ಷದ ಡಿಪ್ಲೊಮಾ ಮಾಡಿರಬೇಕು. 

ಅರ್ಜಿ ಸಲ್ಲಿಕೆ ಹೇಗೆ?: ಅಭ್ಯರ್ಥಿಗಳು ಸಾಮಾನ್ಯ ಪೋಸ್ಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 

ವಿಳಾಸ : The Chairman, Railway Recruitment Cell, No.5, Dr.P.V.Cherian Cresent Road, Behind Ethiraj College, Egmore, Chennai - 600 008. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ.