Asianet Suvarna News Asianet Suvarna News

SAIL Recruitment 2022: ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗೆ ನೇರ ನೇಮಕಾತಿ

ಭಾರತೀಯ ಉಕ್ಕು ಪ್ರಾಧಿಕಾರ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.   ಫೆಬ್ರವರಿ 9 ರಿಂದ 11 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಲು ಅಧಿಸೂಚನೆಯಲ್ಲಿ ಕೋರಲಾಗಿದೆ.

sail recruitment 2022 notification for  Multiple Vacancies gow
Author
Bengaluru, First Published Jan 29, 2022, 4:53 PM IST

ಬೆಂಗಳೂರು(ಜ.29): ಭಾರತೀಯ ಉಕ್ಕು ಪ್ರಾಧಿಕಾರ (Steel Authority of India- SAIL) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ .  ಸ್ಪೆಷಲಿಸ್ಟ್​ ಮತ್ತು ಜನರಲ್​ ಡ್ಯೂಟಿ ಮೆಡಿಕಲ್​ ಆಫೀಸರ್ ಸೇರಿ ಒಟ್ಟು 24 ಹುದ್ದೆಗಳು  ಖಾಲಿ ಇದ್ದು, ಎಂಬಿಬಿಎಸ್, ಎಂಎಸ್​, ಎಂಡಿ ಪೂರ್ಣಗೊಳಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 9 ರಿಂದ 11 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ (Walk-in-Interview)ಭಾಗವಹಿಸಲು ಅಧಿಸೂಚನೆಯಲ್ಲಿ ಕೋರಲಾಗಿದೆ.

ಒಟ್ಟು 24 ಹುದ್ದೆಗಳ ವಿವರ:
ಸ್ಪೆಷಲಿಸ್ಟ್​ - 08
ಜನರಲ್​ ಡ್ಯೂಟಿ ಮೆಡಿಕಲ್​ ಆಫೀಸರ್- 16

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಉಕ್ಕು ಪ್ರಾಧಿಕಾರ (SAIL)ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಕಾಲೇಜಿನಿಂದ ಕಡ್ಡಾಯವಾಗಿ ಎಂಬಿಬಿಎಸ್, ಎಂಎಸ್​, ಎಂಡಿ ಪೂರ್ಣಗೊಳಿಸಿರಬೇಕು.

ಸ್ಪೆಷಲಿಸ್ಟ್​  ಹುದ್ದೆಗಳಿಗೆ ಪಿಜಿ ಡಿಪ್ಲೋಮಾ/ ಪದವಿ, ಎಂಬಿಬಿಎಸ್​​ ಪದವಿ ಮತ್ತು
ಜನರಲ್​ ಡ್ಯೂಟಿ ಮೆಡಿಕಲ್​ ಆಫೀಸರ್ ಹುದ್ದೆಗಳಿಗೆ  ಎಂಬಿಬಿಎಸ್​ ಪದವಿ ಮಾಡಿರಬೇಕು.

ವಯೋಮಿತಿ: ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ 69 ವರ್ಷ ಮೀರಿರಬಾರದು.

ಉದ್ಯೋಗದ ಸ್ಥಳ: ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅಭ್ಯರ್ಥಿಗಳು ಪಶ್ಚಿಮ ಬಂಗಾಳದ ಕೆಲಸ ಮಾಡಬೇಕಾಗುತ್ತದೆ.

ವೇತನ ವಿವರ: ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗನುಸಾರ ವೇತನ ನಿಗದಿಯಾಗಿದೆ.

ಜಿಡಿಎಂಒ- ಮಾಸಿಕ 70,000 ರೂ
ಸ್ಪೆಷಲಿಸ್ಟ್​(ಪಿಜಿ ಡಿಪ್ಲೊಮಾ)- ಮಾಸಿಕ  90,000 ರೂ
ಸ್ಪೆಷಲಿಸ್ಟ್​(ಪಿಜಿ ಡಿಗ್ರಿ)- ಮಾಸಿಕ 1,20,000 ರೂ

ಆಯ್ಕೆ ಪ್ರಕ್ರಿಯೆ: ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದೆ.

ಸಂದರ್ಶನ ನಡೆಯುವ ಸ್ಥಳ:
ED ಕಚೇರಿ (M&HS)
DSP ಮುಖ್ಯ ಆಸ್ಪತ್ರೆ ದುರ್ಗಾಪುರ- 713205
ಪಶ್ಚಿಮ್ ಬರ್ಧಮಾನ್

Follow Us:
Download App:
  • android
  • ios