RRB NTPC CBT 2 Exam 2022 : ರೈಲ್ವೆ ನೇಮಕಾತಿಯ ಸಿಬಿಟಿ-2 ಪರೀಕ್ಷೆಯ ದಿನಾಂಕ ಬಿಡುಗಡೆ

ರೈಲ್ವೆ ನೇಮಕಾತಿ ಮಂಡಳಿ 2019 ನೇ ಸಾಲಿನ ನಾನ್‌-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ  ಹುದ್ದೆಗಳ ಅಧಿಸೂಚನೆಯ ಸಿಬಿಟಿ-2 ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಫೆಬ್ರವರಿ 15 ರಿಂದ 19 ರವರೆಗೆ ಪರೀಕ್ಷೆ ನಡೆಯಲಿದೆ.

RRB NTPC CBT 2 Exam 2022 dates have been released gow

ಬೆಂಗಳೂರು(ಜ.25): ರೈಲ್ವೆ ನೇಮಕಾತಿ ಮಂಡಳಿ (Railway Recruitment Board)2019 ನೇ ಸಾಲಿನ ನಾನ್‌-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ ( NTPC) ಹುದ್ದೆಗಳ ಅಧಿಸೂಚನೆಯ ಸಿಬಿಟಿ-2 ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಆರ್‌ಬಿ ಎನ್‌ಟಿಪಿಸಿ ಸಿಬಿಟಿ 2 ಎಲ್ಲ ಲೆವೆಲ್‌ಗೂ ಒಂದೇ ಹಂತದಲ್ಲಿ ನಡೆಯಲಿದೆ. 2022 ರ ಫೆಬ್ರವರಿ 15 ರಿಂದ 19 ರವರೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದೆ.  ಹೆಚ್ಚಿನ ಮಾಹಿತಿಗೆ https://www.rrbbnc.gov.in/ ಗೆ ಭೇಟಿ ನೀಡಿ.

ರೈಲ್ವೆ ನೇಮಕಾತಿ ಮಂಡಳಿ ಎನ್‌ಟಿಪಿಸಿ CBT-1(Computer Based Test) ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಂದಿನ ಹಂತ ಸಿಬಿಟಿ 2 ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಇದು ಎಲ್ಲ ರೈಲ್ವೆ ವಲಯಗಳಲ್ಲಿಯೂ ಫೆಬ್ರವರಿ 15 ರಿಂದ ಆರಂಭವಾಗಲಿದೆ.

ಆರ್‌ಆರ್‌ಬಿ ಎನ್‌ಟಿಪಿಸಿ CBT 2 ಪರೀಕ್ಷೆಯ ಅಡ್ಮಿಟ್ ಕಾರ್ಡ್‌  ಅನ್ನು ಪರೀಕ್ಷೆ ನಡೆಯುವ 4 ದಿನಗಳಿಗೆ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತದೆ. ಸಿಬಿಟಿ 2 ಪರೀಕ್ಷೆಯನ್ನು 7ನೇ ಸಿಪಿಸಿ'ಯ ಲೆವೆಲ್ 2, 3, 4, 5, 6 ಹುದ್ದೆಗಳಿಗೆ ಒಂದೇ ಹಂತದಲ್ಲಿ ನಡೆಸಲಾಗುತ್ತದೆ.

BANK OF BARODA RECRUITMENT 2022: ಒಟ್ಟು 220 ಹುದ್ದೆಗಳ ಭರ್ತಿಗೆ ಮುಂದಾದ ಬ್ಯಾಂಕ್ ಆಫ್​ ಬರೋಡ

ರೈಲ್ವೆ ನೇಮಕಾತಿ ಮಂಡಳಿಯು ಪರೀಕ್ಷೆ ಕೇಂದ್ರ, ದಿನಾಂಕ, ಟ್ರಾವೆಲ್‌ ಅಥಾರಿಟಿ ಮತ್ತು ಇತರೆ ಮಾಹಿತಿಗಳನ್ನು ರಿಸರ್ವ್‌ಡ್‌ ಕೆಟಗರಿಗಳಿಗೆ ಮುಂದಿನ ತಿಂಗಳ ಫೆಬ್ರವರಿ 11 ರಂದು ಬಿಡುಗಡೆ ಮಾಡಲಿದೆ.

ಅಡ್ಮಿಟ್‌ ಕಾರ್ಡ್‌ ಅನ್ನು ಫೆಬ್ರವರಿ 11, 2022 ರಂದು ಅಭ್ಯರ್ಥಿಗಳು ತಮ್ಮ ಪ್ರಾದೇಶಿಕ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡಿ, ಲಾಗಿನ್‌ ಅಗುವ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅರ್‌ಆರ್‌ಬಿ ಎನ್‌ಟಿಪಿಸಿ 2019 ರಲ್ಲಿ 35,281 ಎನ್‌ಟಿಪಿಸಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಟೈಮ್‌ಕೀಪರ್, ಟ್ರೈನ್ ಕ್ಲರ್ಕ್, ಟಿಕೆಟ್ ಕ್ಲರ್ಕ್, ಕ್ಲರ್ಕ್-ಕಮ್-ಟೈಪಿಸ್ಟ್ ಮುಂತಾದ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಸಿಬಿಟಿ 1 ಪರೀಕ್ಷೆಯನ್ನು ದೇಶದಾದ್ಯಂತ 7 ಹಂತಗಳಲ್ಲಿ ನಡೆಸಲಾಗಿತ್ತು. ಒಂದು ಕೋಟಿಗೂ ಅಧಿಕ ಅಭ್ಯರ್ಥಿಗಳು ಡಿಸೆಂಬರ್ 28, 2020 ರಿಂದ ಜುಲೈ 31, 2021 ರವರೆಗೆ  ಪರೀಕ್ಷೆ ಬರೆದಿದ್ದರು. ಜನವರಿ 15 ರಂದು ಸಿಬಿಟಿ-1 ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಂಡಿತ್ತು. ಸಿಬಿಟಿ 1 ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಇದೀಗ ಸಿಬಿಟಿ 2 ಪರೀಕ್ಷೆ ನಡೆಸಲಾಗುತ್ತದೆ. 

Post Office Recruitment 2022: ಅಂಚೆ ಇಲಾಖೆಯ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನ

69 ಮ್ಯಾನೇಜರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ ಹುದ್ದೆಗಳು: ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Railtel Corporation of India Limited) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಮ್ಯಾನೇಜರ್ , ಸೀನಿಯರ್ ಮ್ಯಾನೇಜರ್ ಸೇರಿ ಒಟ್ಟು 69 ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.  ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 23 ಆಗಿದೆ.   ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ http://railtelindia.com/ ಗೆ ಭೇಟಿ ನೀಡಬಹುದು.

69 ಹುದ್ದೆಗಳ ವಿವರ:
ಉಪ ವ್ಯವಸ್ಥಾಪಕ (Deputy Manager):52 ಹುದ್ದೆಗಳು
ಮ್ಯಾನೇಜರ್ (Manager):10 ಹುದ್ದೆಗಳು
ಹಿರಿಯ ಮ್ಯಾನೇಜರ್ (Senior Manager):7 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ:
 ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​ನಿಂದ ಕಡ್ಡಾಯವಾಗಿ  ಸ್ನಾತಕೋತ್ತರ ಪದವಿ ಪಡೆದಿರಬೇಕು. ಹುದ್ದೆಗನುಸಾರವಾಗಿ BE/BTech/BSc/MBA/PG Diploma/CA/ICWA (CMA)/LLB (Full time)/MSc/MCA ಮಾಡಿರಬೇಕು.

Latest Videos
Follow Us:
Download App:
  • android
  • ios