Asianet Suvarna News Asianet Suvarna News

Bank of Baroda Recruitment 2022: ಒಟ್ಟು 220 ಹುದ್ದೆಗಳ ಭರ್ತಿಗೆ ಮುಂದಾದ ಬ್ಯಾಂಕ್ ಆಫ್​ ಬರೋಡ

ಬ್ಯಾಂಕ್ ಆಫ್​ ಬರೋಡ  ಖಾಲಿ ಇರುವ ಹುದ್ದೆಗಳನ್ನು ತುಂಬಲು  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.   ಫೆಬ್ರವರಿ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Bank of Baroda Recruitment 2022 notification  hiring for Managerial posts gow
Author
Bengaluru, First Published Jan 25, 2022, 9:10 PM IST

ಬೆಂಗಳೂರು(ಜ.25): ಬ್ಯಾಂಕ್ ಆಫ್​ ಬರೋಡ (Bank of Baroda) ಖಾಲಿ ಇರುವ ಹುದ್ದೆಗಳನ್ನು ತುಂಬಲು  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.   ಮ್ಯಾನೇಜರ್, ಸೀನಿಯರ್ ಮ್ಯಾನೇಜರ್,  ಸೇರಿ ಒಟ್ಟು 220 ಹುದ್ದೆಗಳು ಖಾಲಿ ಇದ್ದು,  ಆಸಕ್ತರು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಬೇಕು.  ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು,  ಫೆಬ್ರವರಿ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ಆಸಕ್ತರು ಬ್ಯಾಂಕ್​ ಆಫ್​ ಬರೋಡದ ಅಧಿಕೃತ ವೆಬ್​ಸೈಟ್​​ www.bankofbaroda.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ. 

ಒಟ್ಟು 220 ಹುದ್ದೆಗಳ ಮಾಹಿತಿ ಇಂತಿದೆ
ಜೋನಲ್ ಸೇಲ್ಸ್​ ಮ್ಯಾನೇಜರ್-11
ರೀಜನಲ್ ಸೇಲ್ಸ್​ ಮ್ಯಾನೇಜರ್-09
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್-50
ಸೀನಿಯರ್ ಮ್ಯಾನೇಜರ್-110
ಮ್ಯಾನೇಜರ್-40

ಶೈಕ್ಷಣಿಕ ವಿದ್ಯಾರ್ಹತೆ: ಬ್ಯಾಂಕ್ ಆಫ್​ ಬರೋಡದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು.

ಅರ್ಜಿ ಶುಲ್ಕ: ಬ್ಯಾಂಕ್ ಆಫ್​ ಬರೋಡದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ SC/SC/PWD  ಅಭ್ಯರ್ಥಿಗಳು 100ರೂ ಮತ್ತು ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳು 600 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ವಯೋಮಿತಿ:
ಜೋನಲ್ ಸೇಲ್ಸ್​ ಮ್ಯಾನೇಜರ್ ಹುದ್ದೆಗೆ 32ರಿಂದ 48 ವರ್ಷ
ರೀಜನಲ್ ಸೇಲ್ಸ್​ ಮ್ಯಾನೇಜರ್  ಹುದ್ದೆಗೆ 28ರಿಂದ 45 ವರ್ಷ
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಹುದ್ದೆಗೆ 28 ರಿಂದ 40 ವರ್ಷ
ಸೀನಿಯರ್ ಮ್ಯಾನೇಜರ್ ಹುದ್ದೆಗೆ 25ರಿಂದ 37 ವರ್ಷ
ಮ್ಯಾನೇಜರ್ ಹುದ್ದೆಗೆ 22ರಿಂದ 35 ವರ್ಷ

ಆಯ್ಕೆ ಪ್ರಕ್ರಿಯೆ: ಬ್ಯಾಂಕ್ ಆಫ್​ ಬರೋಡದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ  ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 

ಉದ್ಯೋಗದ ಸ್ಥಳ: ಬ್ಯಾಂಕ್ ಆಫ್​ ಬರೋಡ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ  ಆಯ್ಕೆಯಾದ ಅಭ್ಯರ್ಥಿಗಳು ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ಮಾಡಲು ರೆಡಿಯಾಗಿರಬೇಕು.

ವೇತನ: ಬ್ಯಾಂಕ್ ಆಫ್​ ಬರೋಡಾದಲ್ಲಿ ಖಾಲಿ ಇರುವ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಜೋನಲ್, ರೀಜನಲ್ ಸೇಲ್ಸ್​ ಮ್ಯಾನೇಜರ್, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ಇರಲಿದೆ.

POST OFFICE RECRUITMENT 2022: ಅಂಚೆ ಇಲಾಖೆಯ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನ

ಬರೋಡ ಬ್ಯಾಂಕ್ ನಲ್ಲಿ ಪದವೀಧರರಿಗೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ: ಬ್ಯಾಂಕ್ ಆಫ್​ ಬರೋಡ (Bank of Baroda) ಖಾಲಿ ಇರುವ 198 ಹುದ್ದೆಗಳನ್ನು ತುಂಬಲು  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.   ಮ್ಯಾನೇಜರ್, ಜನರಲ್ ಮ್ಯಾನೇಜರ್, ವೈಸ್ ಪ್ರೆಸಿಡೆಂಟ್, ಪ್ರೊಡಕ್ಟ್ ಮ್ಯಾನೇಜರ್, ಹೆಡ್ ಪ್ರಾಜೆಕ್ಟ್​ & ಪ್ರೊಸೆಸ್, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, MIS ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಪದವಿ ಪಾಸಾಗಿರುವ ಅಭ್ಯರ್ಥಿಗಳನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಆಸಕ್ತರು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಬೇಕು.  ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು,  ಫೆಬ್ರವರಿ 1 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ಆಸಕ್ತರು ಬ್ಯಾಂಕ್​ ಆಫ್​ ಬರೋಡದ ಅಧಿಕೃತ ವೆಬ್​ಸೈಟ್​​ www.bankofbaroda.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ. 

KPTCL Recruitment 2022: ವಿದ್ಯುತ್ ಪ್ರಸರಣ ನಿಗಮದಲ್ಲಿ 1492 ಹುದ್ದೆಗಳ ನೇಮಕಾತಿಗೆ ಅರ್ಜಿ

ಸಂಪತ್ತು ನಿರ್ವಹಣಾ ಸೇವೆಗಳ ವಿಭಾಗದಲ್ಲಿ ಹುದ್ದೆಗಳ ಭರ್ತಿಗೆ ಕರೆ ನೀಡಿದ BOB: ಬ್ಯಾಂಕ್ ಆಫ್ ಬರೋಡಾ (Bank of Baroda) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಗುತ್ತಿಗೆ ಆಧಾರದ ಮೇಲೆ ಸಂಪತ್ತು ನಿರ್ವಹಣಾ ಸೇವೆಗಳ (Wealth Management Services) ವಿಭಾಗದಲ್ಲಿ ಖಾಲಿ ಇರುವ 58  ಹುದ್ದೆಗಳನ್ನು ತುಂಬಲು  ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.  ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.  ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ bankofbaroda.in ಗೆ ಭೇಟಿ ನೀಡಿ.

Follow Us:
Download App:
  • android
  • ios