ರೈಲ್ವೆ ಇಲಾಖೆಯಲ್ಲಿ 9970 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ/ಐಟಿಐ/ಡಿಪ್ಲೊಮಾ ಅರ್ಹತೆಯುಳ್ಳ 18-30 ವರ್ಷದೊಳಗಿನ ಅಭ್ಯರ್ಥಿಗಳು https://indianrailways.gov.in ನಲ್ಲಿ ಏಪ್ರಿಲ್ 12 ರಿಂದ ಮೇ 11, 2025 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ₹500 (ಸಾಮಾನ್ಯ) / ₹250 (ಎಸ್‌ಸಿ/ಎಸ್‌ಟಿ). ಆಯ್ಕೆ ಲಿಖಿತ ಪರೀಕ್ಷೆ/ಸಂದರ್ಶನ ಮೂಲಕ. ವೇತನ ₹19,900.
ರೈಲ್ವೆ ನೇಮಕಾತಿ ಮಂಡಳಿಗಳು (RRB) ಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ಒಟ್ಟು ಹುದ್ದೆಗಳು: 9,970
ಹುದ್ದೆ ಹೆಸರು: ಸಹಾಯಕ ಲೋಕೋ ಪೈಲಟ್ (ALP).
ಒಟ್ಟು ಖಾಲಿ ಹುದ್ದೆಗಳು: 9970 (ತಾತ್ಕಾಲಿಕ, ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು).
ಉದ್ಯೋಗ ಸ್ಥಳ: ಭಾರತದ ವಿವಿಧ ರೈಲ್ವೆ ವಲಯಗಳಲ್ಲಿ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಭರ್ಜರಿ ಅವಕಾಶ, ಸೆಂಟ್ರಲ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗೆ ನೇಮಕಾತಿ
ವಿದ್ಯಾರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ 10ನೇ, ಐಟಿಐ, ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಭ್ಯರ್ಥಿಯು ಕನಿಷ್ಠ 18 ಮತ್ತು ಗರಿಷ್ಠ 30 ವರ್ಷ ವಯೋಮಿತಿ ಹೊಂದಿರಬೇಕು. SC/ST: 5 ವರ್ಷಗಳು.
ಒಬಿಸಿ : 3 ವರ್ಷಗಳು ವಯೋಮಿತಿ ಸಡಿಲಿಕೆ ಇದೆ.
ಅರ್ಜಿಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ: 500 ರು.
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 250 ರು.
ವೇತನ ಶ್ರೇಣಿ: 7ನೇ ಕೇಂದ್ರ ವೇತನದ ಪ್ರಕಾರ ಮಾಸಿಕ 19,900 ರು. ವೇತನವನ್ನು ನಿಗದಿಪಡಿಸಲಾಗಿದೆ. ಮತ್ತು ಇತರ ಭತ್ಯೆಗಳು ಇರಲಿದೆ.
ಆಯ್ಕೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ , ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿಸಲ್ಲಿಸುವ ವಿಧಾನ: ಆರ್‌ಆರ್‌ಬಿ ನೇಮಕಾತಿ ಅಧಿಕೃತ ವೆಬ್‌ಸೈಟ್ https://indianrailways.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: ಏಪ್ರಿಲ್ 12, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೆ 11,2025
ಹೈ ಸ್ಪೀಡ್ ರೈಲು ಕಾರ್ಪೊರೇಷನ್‌ನಲ್ಲಿ ಭರ್ಜರಿ ಉದ್ಯೋಗವಕಾಶ, ಆಯ್ಕೆಯಾದವರಿಗೆ 2.40 ಲಕ್ಷ ವೇತನ!
ಶೈಕ್ಷಣಿಕ ಅರ್ಹತೆ:
ಎ) ಫಿಟ್ಟರ್, ಎಲೆಕ್ಟ್ರಿಷಿಯನ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್, ಮಿಲ್‌ರೈಟ್/ಮೇಂಟೆನೆನ್ಸ್ ಮೆಕ್ಯಾನಿಕ್, ಮೆಕ್ಯಾನಿಕ್ (ರೇಡಿಯೋ ಮತ್ತು ಟಿವಿ), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಮೆಕ್ಯಾನಿಕ್ (ಮೋಟಾರ್ ವೆಹಿಕಲ್), ವೈರ್‌ಮ್ಯಾನ್, ಟ್ರ್ಯಾಕ್ಟರ್ ಮೆಕ್ಯಾನಿಕ್, ಆರ್ಮೇಚರ್ ಮತ್ತು ಕಾಯಿಲ್ ವೈಂಡರ್, ಮೆಕ್ಯಾನಿಕ್ (ಡೀಸೆಲ್), ಹೀಟ್ ಎಂಜಿನ್, ಟರ್ನರ್, ಮೆಷಿನಿಸ್ಟ್, ರೆಫ್ರಿಜರೇಶನ್ ಮತ್ತು ಏರ್-ಕಂಡಿಷನಿಂಗ್ ಮೆಕ್ಯಾನಿಕ್. (ಅಥವಾ) ಮೆಟ್ರಿಕ್ಯುಲೇಷನ್ / ಎಸ್‌ಎಸ್‌ಎಲ್‌ಸಿ ಜೊತೆಗೆ ಮೇಲೆ ತಿಳಿಸಲಾದ ಟ್ರೇಡ್‌ಗಳಲ್ಲಿ ಕೋರ್ಸ್ ಪೂರ್ಣಗೊಂಡ ಆಕ್ಟ್ ಅಪ್ರೆಂಟಿಸ್‌ಶಿಪ್ (ಅಥವಾ)
ಬಿ) ಮೆಟ್ರಿಕ್ಯುಲೇಷನ್ / ಎಸ್‌ಎಸ್‌ಎಲ್‌ಸಿ ಜೊತೆಗೆ ಐಟಿಐ ಬದಲಿಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಈ ಎಂಜಿನಿಯರಿಂಗ್ ವಿಭಾಗಗಳ ವಿವಿಧ ಸ್ಟ್ರೀಮ್‌ಗಳ ಸಂಯೋಜನೆಯಲ್ಲಿ ಮೂರು ವರ್ಷಗಳ ಡಿಪ್ಲೊಮಾ. ಗಮನಿಸಿ: ಎಂಜಿನಿಯರಿಂಗ್ ಡಿಪ್ಲೊಮಾ ಬದಲಿಗೆ ಮೇಲಿನ ಎಂಜಿನಿಯರಿಂಗ್ ವಿಭಾಗಗಳಲ್ಲಿ ಪದವಿ ಸಹ ಸ್ವೀಕಾರಾರ್ಹವಾಗಿರುತ್ತದೆ.
