ಬೆಂಗಳೂರು, (ಸೆ.06): ಭಾರತೀಯ ವಾಯುಪಡೆ (ಐಎಎಫ್) ಗ್ರೂಪ್ ಎಕ್ಸ್ (ಟೆಕ್ನಿಕಲ್ ಟ್ರೇಡ್) (ಎಜುಕೇಷನ್ ಇನ್​​ಸ್ಟ್ರಕ್ಟರ್ ಟ್ರೇಡ್ ಹೊರತುಪಡಿಸಿ) ನಲ್ಲಿ ಏರ್​​ಮನ್ ಹುದ್ದೆಗೆ ನೇಮಕಾತಿ ರ‍್ಯಾಲಿ ನಡೆಸಯಲಿದ್ದು, ಕರ್ನಾಟಕದ ಅವಿವಾಹಿತ ಪುರುಷ ಅಭ್ಯರ್ಥಿಗಳು ಹೆಸರು ನೋಂದಾಯಿಸಬಹುದಾಗಿದೆ.

ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 4 ವರೆಗೆ ಬೆಂಗಳೂರಿನ ಮಣೆಕ್​​ಷಾ ಪರೇಡ್ ಗ್ರೌಂಡ್ ಹಾಗೂ 7 ಏರ್​​ಮನ್ ನೇಮಕಾತಿ ಕೇಂದ್ರದಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ. ನಡೆಯಲಿದೆ.

ಅಂಚೆ ಇಲಾಖೆಯಲ್ಲಿ ನೇಮಕಾತಿ: ವಿದ್ಯಾರ್ಹತೆ 10ನೇ ತರಗತಿ

ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 10ರ ವರೆಗೆ www.airmenselection.cdac.in ನಲ್ಲಿ ರ‍್ಯಾಲಿಗೆ ನೋಂದಣಿ ಮಾಡಲು ಅವಕಾಶವಿದೆ.  

ವಿದ್ಯಾರ್ಹತೆ: ಇಂಟರ್​ಮೀಡಿಯೇಟ್ / 10+2 / ತತ್ಸಮಾನ ಪರೀಕ್ಷೆಯನ್ನು ಗಣಿತ, ಭೌತಶಾಸ್ತ್ರ, ಇಂಗ್ಲಿಷ್ ವಿಷಯಗಳಲ್ಲಿ ಶೇ. 50 ಅಂಕಗಳೊಂದಿಗೆ ಹಾಗೂ ಇಂಗ್ಲಿಷ್ ನಲ್ಲಿ ಶೇ. 50 ಅಂಕಗಳಿಸಿ ಪಾಸಾಗಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೊಮಾ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.

ಅರ್ಜಿ ಹಾಕಿದ್ದ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್: 1,40 ಲಕ್ಷ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರು

ವಯೋಮಿತಿ: 2000 ರ ಜನವರಿ 17 ಮತ್ತು 2003ರ ಡಿಸೆಂಬರ್ 30 ರ ಮಧ್ಯೆ ಜನಿಸಿರಬೇಕು. 

 ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಇತ್ಯಾದಿ ನಡೆಸಲಾಗುತ್ತದೆ.