Asianet Suvarna News Asianet Suvarna News

Prasar Bharati Recruitment 2022: ಆಲ್‌ ಇಂಡಿಯಾ ರೇಡಿಯೋ ಹುದ್ದೆಗಳಿಗೆ ನೇಮಕಾತಿ

ಪ್ರಸಾರ ಭಾರತಿಯ ಆಲ್‌ ಇಂಡಿಯಾ ರೇಡಿಯೋದಲ್ಲಿ  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.   ಎಪ್ರಿಲ್ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

Prasar Bharati Recruitment 2022 notification for various posts  gow
Author
Bengaluru, First Published Apr 1, 2022, 11:14 AM IST

ಬೆಂಗಳೂರು (ಎ.1): ಪ್ರಸಾರ ಭಾರತಿಯ (Prasar Bharati) ಆಲ್‌ ಇಂಡಿಯಾ ರೇಡಿಯೋದಲ್ಲಿ (All India Radio) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಸುದ್ದಿ ಸಂಪಾದಕ​, ವೆಬ್ ಸಂಪಾದಕ, ಸುದ್ದಿವಾಚಕ ಮತ್ತು ಅನುವಾದಕ ಸೇರಿ​ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎಪ್ರಿಲ್ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ prasarbharati.gov.in ಗೆ ಭೇಟಿ ನೀಡಬಹುದು. 

ಹುದ್ದೆಯ ಮಾಹಿತಿ:
ಸುದ್ದಿ ಸಂಪಾದಕ- News Editor (ಇಂಗ್ಲಿಷ್)
ಸುದ್ದಿ ಸಂಪಾದಕ (ಹಿಂದಿ)
ವೆಬ್ ಸಂಪಾದಕ -Web Editor (ಇಂಗ್ಲಿಷ್)
ವೆಬ್ ಸಂಪಾದಕ (ಹಿಂದಿ)
ಗ್ರಾಫಿಕ್ ಡಿಸೈನರ್ (Graphic Designer)
ಸುದ್ದಿ ವಾಚಕ-ಇಂಗ್ಲಿಷ್ (Newsreader)
ಸುದ್ದಿ ವಾಚಕ-ಕಮ್-ಅನುವಾದಕ (ಹಿಂದಿ)
ಸುದ್ದಿ ವಾಚಕ-ಕಮ್-ಅನುವಾದಕ (ಸಂಸ್ಕೃತ)
ಸುದ್ದಿ ವಾಚಕ-ಕಮ್-ಅನುವಾದಕ (translator- ಅನುವಾದಕ)
ಸುದ್ದಿ ವಾಚಕ-ಕಮ್-ಅನುವಾದಕ (ಉರ್ದು)
ಸುದ್ದಿವಾಚಕ-ಕಮ್-ಅನುವಾದಕ (ಪಂಜಾಬಿ)
ಸುದ್ದಿ ವಾಚಕ-ಕಮ್-ಅನುವಾದಕ (ನೇಪಾಳಿ)
ಸುದ್ದಿ ಸಂಪಾದಕ (ವಾಣಿಜ್ಯ)
ಇಂಗ್ಲಿಷ್ ನಿರೂಪಕ - Anchors (ವಾಣಿಜ್ಯ)
ಹಿಂದಿ ನಿರೂಪಕ (ವಾಣಿಜ್ಯ)

ಶೈಕ್ಷಣಿಕ ಅರ್ಹತೆ: ಪ್ರಸಾರ ಭಾರತಿಯಲ್ಲಿ ಖಾಲಿ ಇರುವ  ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.

 Indian Navy Recruitment 2022: ಅಪ್ರೆಂಟಿಸ್ ಮತ್ತು SSR ಬ್ಯಾಚ್‌ ಗೆ ಅರ್ಜಿ ಆಹ್ವಾನ

ಸುದ್ದಿ ಸಂಪಾದಕ  (ಇಂಗ್ಲಿಷ್/ಹಿಂದಿ) ಮತ್ತು  ವರದಿಗಾರ ಹಾಗೂ ವೆಬ್ ಸಂಪಾದಕ  ಹುದ್ದೆಗೆ ಕನಿಷ್ಠ ಒಂದು ವರ್ಷದ ಅವಧಿಯೊಂದಿಗೆ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಮುದ್ರಣ/ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿ ಮಾಡುವ/ಸಂಪಾದಿಸುವ ಕೆಲಸದಲ್ಲಿ 5 ವರ್ಷಗಳ ಅನುಭವ. ಇಂಗ್ಲಿಷ್/ಹಿಂದಿ ಭಾಷೆಯಲ್ಲಿ ಪ್ರಾವೀಣ್ಯತೆ. ಕಂಪ್ಯೂಟರ್ ಅಪ್ಲಿಕೇಶನ್‌ಗಳ ಜ್ಞಾನ ಹೊಂದಿರಬೇಕು.

ಗ್ರಾಫಿಕ್ ಡಿಸೈನರ್: ಗ್ರಾಫಿಕ್ಸ್ ಕ್ಷೇತ್ರದಲ್ಲಿ ಪದವಿ/ಡಿಪ್ಲೊಮಾ ಮಾಡಿರಬೇಕು.

ಸುದ್ದಿ ವಾಚಕ-ಕಮ್-ಅನುವಾದಕ ಹುದ್ದೆಗೆ ಮೇಲೆ ನಮೂದಿಸಿದ ಎಲ್ಲಾ ಭಾಷೆಗಳಲ್ಲಿ ಪ್ರಾವಿಣ್ಯತೆ ಹೊಂದಿರಬೇಕು. ವಿಶ್ವವಿದ್ಯಾಲಯದಿಂದ ಪದವಿ ಮಾಡಿರಬೇಕು.

ಸುದ್ದಿ ನಿರೂಪಕ ಹುದ್ದೆಗೆ ಕನಿಷ್ಠ ಒಂದು ವರ್ಷದ ಅವಧಿಯೊಂದಿಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಅಥವಾ
ಮುದ್ರಣ/ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವ್ಯಾಪಾರ ವರದಿ/ಸಂಪಾದನೆ ಕೆಲಸದಲ್ಲಿ 5-ವರ್ಷದ ಅನುಭವ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಾವೀಣ್ಯತೆ. ಪ್ರಸಾರಕ್ಕೆ ಸೂಕ್ತವಾದ ಉತ್ತಮ ಗುಣಮಟ್ಟದ ಧ್ವನಿಯನ್ನು ಹೊಂದಿರಬೇಕು.  ಕಂಪ್ಯೂಟರ್ ಅಪ್ಲಿಕೇಶನ್‌ಗಳ ಉತ್ತಮ ಜ್ಞಾನ ಹೊಂದಿರಬೇಕು

KIOCL RECRUITMENT 2022: ಕುದುರೆಮುಖ ಕಬ್ಬಿಣ ಕಾರ್ಖಾನೆಯಲ್ಲಿ ಎಂಜಿನಿಯರ್ ಪದವೀಧರರ ನೇಮಕಾತಿ
 
ವಯೋಮಿತಿ: ಪ್ರಸಾರ ಭಾರತಿಯಲ್ಲಿ ಖಾಲಿ ಇರುವ  ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 21 ವರ್ಷದಿಂದ 50 ವರ್ಷಗದ  ಒಳಗಿರಬೇಕು.

ಅರ್ಜಿ ಶುಲ್ಕ: ಪ್ರಸಾರ ಭಾರತಿಯಲ್ಲಿ ಖಾಲಿ ಇರುವ  ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ₹300 ಮತ್ತು SC/ST/OBC ಅಭ್ಯರ್ಥಿಗಳು ₹225 ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಪ್ರಸಾರ ಭಾರತಿಯಲ್ಲಿ ಖಾಲಿ ಇರುವ  ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖತ ಪರೀಕ್ಷೆ, ಧ್ವನಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

IAS Officer Salary: UPSC ಪರೀಕ್ಷೆ ಬರೆದು IAS ಅಧಿಕಾರಿಯಾಗುವವರಿಗೆ ವೇತನವೆಷ್ಟು?

Follow Us:
Download App:
  • android
  • ios