ಆಯಿಲ್‌ ಇಂಡಿಯಾ ಲಿಮಿಟೆಡ್‌ (ಒಐಎಲ್‌) ನಲ್ಲಿ ಎ, ಬಿ ಮತ್ತು ಸಿ ವಿಭಾಗದಲ್ಲಿನ ಸೀನಿಯರ್‌ ಆಫೀಸರ್‌, ಸೂಪರಿಂಟೆಂಡಿಂಗ್‌ ಇಂಜಿನಿಯರ್‌, ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಆಯಿಲ್‌ ಇಂಡಿಯಾ ಲಿಮಿಟೆಡ್‌ (ಒಐಎಲ್‌) ನಲ್ಲಿ ಎ, ಬಿ ಮತ್ತು ಸಿ ವಿಭಾಗದಲ್ಲಿನ ಸೀನಿಯರ್‌ ಆಫೀಸರ್‌, ಸೂಪರಿಂಟೆಂಡಿಂಗ್‌ ಇಂಜಿನಿಯರ್‌, ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

1. ಮೇಲ್ವಿಚಾರಕ ವೈದ್ಯಕೀಯ ಅಧಿಕಾರಿ ( ಗ್ರೇಡ್‌-ಸಿ) : 04 ಹುದ್ದೆ (ಇವುಗಳಲ್ಲಿ ಮೂಳೆ ತಜ್ಞ /ರೇಡಿಯಾಲಜಿ / ಪರಿಸರವಿಭಾಗದ ಹುದ್ದೆಗಳು ಒಳಗೊಂಡಿರುತ್ತದೆ.)

2. ಸೀನಿಯ ಆಫೀಸರ್ (ಗ್ರೇಡ್‌-ಬಿ) : 97 ಹುದ್ದೆ: (ಇವುಗಳಲ್ಲಿ ಕೆಮಿಕಲ್, ಎಲೆಕ್ಟ್ರಿಕಲ್ , ಮೆಕ್ಯಾನಿಕಲ್ , ಮಾಹಿತಿ ತಂತ್ರಜ್ಞಾನ (ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ , ಹಿರಿಯ ಆಂತರಿಕ ಲೆಕ್ಕ ಪರೀಶೊಧಕರು, ಪೆಟ್ರೋಲಿಯಂ, ಹಿರಿಯ ಭೂವಿಜ್ಞಾನಿ, ಹೆಚ್ ಆರ್ ವಿಭಾಗದ ಹುದ್ದೆಗಳು ಒಳಗೊಂಡಿರುತ್ತದೆ.)

3. ಕಾರ್ಯದರ್ಶಿ( ಎ ಗ್ರೇಡ್ ) ನಲ್ಲಿ : 01 ಹುದ್ದೆ

ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ, 7 ಸಾವಿರಕ್ಕೂ ಹೆಚ್ಚು ನೇಮಕಾತಿ

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅಪ್ಲಿಕೇಷನ್‌ ಗೆ

ಪ್ರಾರಂಭ ದಿನಾಂಕ: 05-0102024

ಆನ್‌ಲೈನ್‌ ಅಪ್ಲಿಕೇಷನ್‌ ಗೆ

ಕೊನೆಯ ದಿನಾಂಕ: 29-01-2024

ಅರ್ಜಿ ಶುಲ್ಕ

ಸಾಮಾನ್ಯ / ಓಬಿಸಿ ಅಭ್ಯರ್ಥಿಗಳಿಗೆ : ರು. 500

ಎಸ್ ಸಿ/ ಎಸ್ ಟಿ/ ಪಿಡಬ್ಲ್ಯೂಡಿ/

ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕವಿಲ್ಲ.

ಶೈಕ್ಷಣಿಕ ವಿದ್ಯಾರ್ಹತೆ

1. ಮೇಲ್ವಿಚಾರಕ ವೈದ್ಯಕೀಯ ಅಧಿಕಾರಿ (ಗ್ರೇಡ್‌ ಸಿ) ಹುದ್ದೆಗೆ :

ಅ. ಅಭ್ಯರ್ಥಿಗಳು ಮಾನ್ಯತೆ ಪಡೆದ ವೈದ್ಯಕೀಯ ವಿಶ್ವವಿದ್ಯಾನಿಲಯದಿಂದ ಆರ್ಥೋಪೆಡಿಕ್ಸ್/ ರೇಡಿಯಾಲಜಿ ವಿಭಾಗದಲ್ಲಿ ಎಂಎಸ್ / ಎಂಡಿ ಪದವಿ ಪಡೆದಿರಬೇಕು.

ಆ. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪರಿಸರ ವಿಜ್ಞಾನ ವಿಭಾಗದಲ್ಲಿ ಎಂಜಿನಿಯರಿಂಗ್‌ ಸ್ನಾತಕೋತ್ತರ ಪದವಿಯನ್ನುಕನಿಷ್ಠ ಶೇಕಡಾ 65 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಹಾಗೂ ಕೆಂಪು ವರ್ಗದ ಕೈಗಾರಿಕಾ ವಲಯದಲ್ಲಿ ಕನಿಷ್ಠ 4 ವರ್ಷಗಳ ಸೇವಾ ಅನುಭವ ಹೊಂದಿರಬೇಕು.

2. ಸೀನಿಯರ್‌ ಆಫೀಸರ್‌ (ಗ್ರೇಡ್‌ ಬಿ) ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರ / ಎಲೆಕ್ಟ್ರಿಕಲ್ಸ್/ ಮೆಕ್ಯಾನಿಕಲ್/ ಕಂಪ್ಯೂಟರ್‌ ಸೈನ್ಸ್‌/ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಶನ್/ಪೆಟ್ರೋಲಿಯಂ ಇಂಜಿನಿಯರಿಂಗ್ ಪದವಿಯನ್ನು ಕನಿಷ್ಠ ಶೇಕಡಾ 65 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

3.ಕಾರ್ಯದರ್ಶಿ( ಎ ಗ್ರೇಡ್ ) ಹುದ್ದೆಗೆ: ಅಭ್ಯರ್ಥಿಗಳು ಡಿಪ್ಲೊಮಾ ಇನ್ಸೆಕ್ರೆಟರಿ ಪ್ರಾಕ್ಟೀಸ್ ಅಥವಾ ಕಚೇರಿ ನಿರ್ವಹಣೆ/ ಕಾರ್ಯದರ್ಶಿ ಅಭ್ಯಾಸ ಅಥವಾ ಕಾರ್ಯನಿರ್ವಾಹಕ ಸಹಾಯಕ ಡಿಪ್ಲೊಮಾ ಅಥವಾ ಕಂಪ್ಯೂಟರ್‌ ಅಪ್ಲಿಕೇಶನ್‌ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕನಿಷ್ಠ 02 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ಮತ್ತು ಶೀಘ್ರಲಿಪಿ ಮತ್ತು ಪ್ರತಿಲೇಖನದಲ್ಲಿ ಪ್ರಾವೀಣ್ಯತೆ ಪಡೆದಿರಬೇಕು.

ಅಗ್ನಿವೀರ ನೇಮಕಕ್ಕೆ ಆನ್‌ಲೈನ್‌ ಪರೀಕ್ಷೆ, ಫೆಬ್ರವರಿ 6ರೊಳಗೆ ಅರ್ಜಿ ಸಲ್ಲಿಸಲು ಸೂಚನೆ

ವೇತನ ಶ್ರೇಣಿ

1. ಮೇಲ್ವಿಚಾರಕ ವೈದ್ಯಕೀಯ ಅಧಿಕಾರಿ ( ಗ್ರೇಡ್‌ ಸಿ) ಹುದ್ದೆಗೆ : ರು. 80000 - 220000

2. ಸೀನಿಯರ್‌ ಆಫೀಸರ್‌ ( ಗ್ರೇಡ್‌ ಬಿ ) ಹುದ್ದೆಗೆ : ರು. 60000 - 180000

3. ಕಾರ್ಯದರ್ಶಿ ( ಎ ಗ್ರೇಡ್) ಹುದ್ದೆಗೆ: ರು. 50000 - 160000

ಆಯ್ಕೆ ಪ್ರಕ್ರಿಯೆ

ಈ ಮೇಲಿನ ಎಲ್ಲಾ ಹುದ್ದೆಗಳಿಗೂ ಸಹ ಎರಡು ಹಂತದ ಪರೀಕ್ಷೆಯನ್ನುನಡೆಸಲಾಗುತ್ತದೆ. ಮೊದಲ ಹಂತದಲ್ಲಿ 100 ಅಂಕಗಳಿಗೆ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಸಾಮಾನ್ಯ / ಒಬಿಸಿ ಅಭ್ಯರ್ಥಿಗಳು ಶೇಕಡಾ 50 ಅಂಕಗಳು ಮತ್ತು ಎಸ್ ಸಿ/ ಎಸ್ ಟಿ/ ಪಿಡಬ್ಲ್ಯೂಡಿ / ಇ ಡಬ್ಲ್ಯೂಎಸ್ ಅಭ್ಯರ್ಥಿಗಳು ಶೇಕಡಾ 40 ಅಂಕಗಳನ್ನು ಪಡೆಯಬೇಕು.

ಎರಡನೇ ಹಂತದಲ್ಲಿ 15 ಅಂಕಗಳಿಗೆ ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ.

ಕೊನೆಯದಾಗಿ ಮೊದಲ ಹಂತದ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕದಲ್ಲಿ ಶೇಕಡಾ 85 ಅಂಕಗಳನ್ನು ಮತ್ತು ವೈಯಕ್ತಿಕ ಸಂದರ್ಶನದಲ್ಲಿನ ಶೇಕಡಾ 15 ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ : www.oil-india.com