ನವೋದಯ ವಿದ್ಯಾಲಯ ಸಮಿತಿಯಲ್ಲಿ 1377 ಭೋದಕೇತರ ಹುದ್ದೆ ಖಾಲಿ ಇದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನವಾಗಿದೆ.

ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ 1377 ಬೋಧಕೇತರ (ಮಹಿಳಾ ಸಿಬ್ಬಂದಿ ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ, ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್, ಲ್ಯಾಬ್ ಅಟೆಂಡೆಂಟ್, ಮೆಸ್ ಹೆಲ್ಪರ್ ಮತ್ತು ಇತರೆ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ
ಸ್ಟಾಫ್ ಸಿಬ್ಬಂದಿ :121 ಹುದ್ದೆ

ಬೋಧಕೇತರ ಸಿಬ್ಬಂದಿ :1256 ಹುದ್ದೆ

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-04-2024

ಅರ್ಜಿ ಶುಲ್ಕ:

1. ಸ್ಟಾಫ್ ನರ್ಸ್‌ ಹುದ್ದೆಗೆ :

ಸಾಮಾನ್ಯ ವರ್ಗದವರಿಗೆ : ರು.1500

ಎಸ್‌ಸಿ/ಎಸ್‌ಟಿ ವರ್ಗದವರಿಗೆ: ರು. 500

2. ಬೋಧಕೇತರ ಸಿಬ್ಬಂದಿ ಹುದ್ದೆಗೆ :

ಸಾಮಾನ್ಯ ವರ್ಗದವರಿಗೆ: ರು.1000

ಎಸ್‌ ಸಿ/ ಎಸ್‌ ಟಿ ವರ್ಗದವರಿಗೆ: ರು. 500

ಶೈಕ್ಷಣಿಕ ವಿದ್ಯಾರ್ಹತೆ:

1.ಸ್ಟಾಫ್ ನರ್ಸ್‌ ಹುದ್ದೆಗೆ: ಅಭ್ಯರ್ಥಿಗಳು ಬಿ.ಎಸ್ಸಿ ನರ್ಸಿಂಗ್‌ ಪದವಿಯನ್ನು ಪಡೆದಿರಬೇಕು.

2. ಬೋಧಕೇತರ ಸಿಬ್ಬಂದಿ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು ಹಾಗೂ ತಾವು ಆಯ್ಕೆ ಬಯಸುವ ಹುದ್ದೆಗೆ ತಕ್ಕಂತೆ ಬಿ.ಕಾಂ/ಬಿ.ಇ/ಬಿ.ಎಸ್ಸಿ/ಬಿ-ಟೆಕ್/ಕಾನೂನು/ಬಿ.ಸಿ.ಎ/ ಐಟಿಐ ಪದವಿಯನ್ನು ಪಡೆದಿರಬೇಕು.

ಆಯ್ಕೆ ವಿಧಾನ: ಅಭ್ಯರ್ಥಿಗಳು ಸಂಬಂಧಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಮೆರಿಟ್‌ ಆಧಾರದ ಮೇಲೆ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ವೀಕ್ಷಿಸಬಹುದು.