NTPC Recruitment 2022; ಒಟ್ಟು 20 ಸಹಾಯಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಸಹಾಯಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 20 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 26 ಕೊನೆಯ ದಿನವಾಗಿದೆ.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (NTPC) ಸಹಾಯಕ ಅಧಿಕಾರಿ (ಸುರಕ್ಷತೆ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 20 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ntpc.co.in ನಲ್ಲಿ NTPC ಯ ಅಧಿಕೃತ ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 26, 2022 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಅನುಭವ, ಆಯ್ಕೆ ಮಾನದಂಡಗಳು ಮತ್ತು ಇತರ ವಿವರಗಳನ್ನು ಅಧಿಕೃತ ವೆಬ್‌ಸೈಟ್ https://www.ntpc.co.in/ ನಲ್ಲಿ ಪರಿಶೀಲನೆ ನಡೆಸಬಹುದು.
ಶಿಕ್ಷಣ ಅರ್ಹತೆ: ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಉತ್ಪಾದನೆಯಲ್ಲಿ ಇಂಜಿನಿಯರಿಂಗ್ ಪದವಿ/ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕನಿಷ್ಠ 60% ಅಂಕಗಳೊಂದಿಗೆ ಪ್ರಾದೇಶಿಕ ಕಾರ್ಮಿಕ ಸಂಸ್ಥೆ/ಸಂಸ್ಥೆಯಿಂದ ಕೈಗಾರಿಕಾ ಸುರಕ್ಷತೆಯಲ್ಲಿ ಪೂರ್ಣ ಸಮಯದ ಡಿಪ್ಲೊಮಾ ಜೊತೆಗೆ ಕಾರ್ಖಾನೆಗಳು/ಆಕ್ಟ್/ನಿಯಮಗಳ ಅಡಿಯಲ್ಲಿ ಮಾನ್ಯತೆ ಪಡೆದಿರಬೇಕು ಅಥವಾ ಇಂಜಿನಿಯರಿಂಗ್ ಪದವಿ ಕಾರ್ಖಾನೆಗಳ ಕಾಯಿದೆ/ನಿಯಮಗಳ ಅಡಿಯಲ್ಲಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕನಿಷ್ಠ 60% ಅಂಕಗಳೊಂದಿಗೆ ಕೈಗಾರಿಕಾ ಸುರಕ್ಷತೆ/ಬೆಂಕಿ ಮತ್ತು ಸುರಕ್ಷತೆ ಬಗ್ಗೆ ಮಾಹಿತಿ ಇರಬೇಕು.
ಅರ್ಜಿ ಶುಲ್ಕ: ಸಾಮಾನ್ಯ / EWS / OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ನೋಂದಣಿ ಶುಲ್ಕ ರೂ. 300. SC / ST / PwBD / XSM ವರ್ಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ವೇತನ ವಿವರ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ 30,000 ರೂ ನಿಂದ 1,20,000 ರೂ ವೇತನ ಪಡೆಯಲಿದ್ದಾರೆ.
ವಯೋಮಿತಿ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಗರಿಷ್ಠ 30 ವರ್ಷ ವಯೋಮಿತಿ ಹೊಂದಿರಬೇಕು.
Karnataka High Court Recruitment 2022; 150 ಗ್ರೂಪ್-ಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಯಾದಗಿರಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿವತಿಯಿಂದ ವಿವಿಧ ಹುದ್ದೆಗಳಿಗಾಗಿ ಆ.22 ಸೋಮವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಪ್ರಭಾಕರ ಅವರು ತಿಳಿಸಿದ್ದಾರೆ.
ಐಡಿಎಫ್ ಫೈನಾನ್ಸಿಯಲ್ ಸರ್ವಿಸಸ್ ಪೈ್ರ.ಲಿ.ನಲ್ಲಿ ಫೀಲ್ಡ್ ಆಫೀಸರ್ ಹುದ್ದೆ-30, ಬ್ರ್ಯಾಂಚ್ ಮ್ಯಾನೇಜರ್ ಹುದ್ದೆ-6 ಖಾಲಿ ಇದ್ದು (ಪುರುಷ ಅಭ್ಯರ್ಥಿಗಳಿಗೆ ಮಾತ್ರ) ಎಸ್ಸೆಸ್ಸೆಲ್ಸಿ , ಪಿಯುಸಿ ಯಾವುದೇ ಪದವಿ, ಹೊಂದಿದವರಿಗೆ ಸುರಪುರ, ಹುಣಸಗಿ, ದೇವದುರ್ಗ, ಮಾನ್ವಿ, ಸಿರವಾರ, ಆಫಜಲಪುರ, ಆಳಂದ, ಕಮಲಾಪುರ ಉದ್ಯೋಗ ಸ್ಥಳವಾಗಿದೆ.
ಭಾರತ್ ಫೈನಾನ್ಸಿಯಲ್ ಪೈ್ರ.ಲಿ.ದಲ್ಲಿ ಫೀಲ್ಡ್ ಅಸಿಸ್ಟಂಟ್ ಹುದ್ದೆ- 20, ಲೋನ್ ಆಫೀಸರ್ ಹುದ್ದೆ- 20, ಭಾರತ ಮನಿ ಆಫೀಸರ್ ಹುದ್ದೆ- 10 ಖಾಲಿ ಇದ್ದು, (ಪುರು?Ü ಅಭ್ಯರ್ಥಿಗಳಿಗೆ ಮಾತ್ರ) ಎಸ್ ಎಸ್ ಎಲ್ ಸಿ, ಪಿಯುಸಿ ಯಾವುದೇ ಪದವಿ. ಯಾದಗಿರಿ, ಶಹಾಪುರ, ಸುರುಪುರ, ಕಲಬುರಗಿ, ರಾಯಚೂರು, ಜಿಲ್ಲೆಯಾದ್ಯಂತ ಉದ್ಯೋಗ ಸ್ಥಳವಾಗಿದೆ.
ಪೋಸ್ಟ್ ಆಫೀಸ್‌ನಲ್ಲಿ 1 ಲಕ್ಷ ಉದ್ಯೋಗ ನೇಮಕಾತಿಗೆ ಅಧಿಸೂಚನೆ, ಇಲ್ಲಿದೆ ಅರ್ಜಿ
ಶಾಹಿ ಎಕ್ಸ್‌ಪೋರ್ಚ್ ಪ್ರೈ.ಲಿ ದಲ್ಲಿ (ಟೈಲರ್/ಹೆಲ್ಪರ್/ಸೂಪರ್‌ವೈಸರ್/ಕಸ್ಟಮರ್ ಎಕ್ಸಿಕ್ಯೂಟಿವ್/ರಿಟೇಲರ್ 7ನೇ ತರಗತಿ ಮೇಲ್ಪಟ್ಟು (ಯಾದಗಿರಿಯಲ್ಲಿ 2ತಿಂಗಳು ಟೈ್ರನಿಂಗ್ ನಂತರ ಉದ್ಯೋಗ ಬೆಂಗಳೂರಿನಲ್ಲಿ) ಪುರುಷ ಮತ್ತು ಮಹಿಳೆಯರಿಗೆ ಅವಕಾಶವಿದೆ.
ಜೀನಿಯಸ್ ಮ್ಯಾನ್‌ಪವರ್ ಸರ್ವಿಸಸ್ ಪ್ರೈ.ಲಿ. ನಲ್ಲಿ ಕ್ಯಾಸಿಯರ್ ಹುದ್ದೆ- 50, ಪ್ಯಾಕರ್ ಹುದ್ದೆ- 50 ಖಾಲಿ ಇದ್ದು (ಪುರುಷ ಮತ್ತು ಮಹಿಳೆ) ಎಸ್ಸೆಸ್ಸೆಲ್ಸಿ, ಪಿಯುಸಿ ಆದವರು ಸಂದರ್ಶನಕ್ಕೆ ಹಾಜರಾಗಬಹುದಿದ್ದು, ಹೈದ್ರಾಬಾದ್ ಉದ್ಯೋಗ ಸ್ಥಳವಾಗಿದೆ. (ಮೇಲಿನ ಹುದ್ದೆಗಳಿಗೆ 18 ರಿಂದ 32 ವರ್ಷದೊಳಗಿನವರು ಅವಕಾಶ ವಂಚಿತ ನಿರುದ್ಯೋಗಿ ಆಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಈ ನೇರ ಸಂದರ್ಶನಕ್ಕೆ ಬರುವ ಆಭ್ಯರ್ಥಿಗಳು ಅಗತ್ಯ ದಾಖಲಾತಿಗಳು, (4ವ್ಯಕ್ತಿ ಪರಿಚಯ/ರಿಸ್ಯೂಮ್/ಬಯೋಡಾಟಾ) ತರಬೇಕು.
ಹೆಚ್ಚಿನ ಮಾಹಿತಿಗಾಗಿ ಚಿತ್ತಾಪೂರ ರೋಡ್ (ಮಿನಿ ವಿಧಾನ ಸೌಧ) ಜಿಲ್ಲಾ ಆಡಳಿತ ಭವನ, ಉದ್ಯೋಗ ವಿನಿಮಯ ಕಚೇರಿ ಯಾದಗಿರಿ ದೂ: 08473-253718 ಹಾಗೂ ಮೊ: 94485 66765ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.