NPCIL Recruitment 2022: ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ನರ್ಸ್ ಸೇರಿ ವಿವಿಧ 42 ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಅಣುವಿದ್ಯುತ್ ನಿಗಮ ನಿಯಮಿತ ತನ್ನ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ನರ್ಸ್ ಸೇರಿ ವಿವಿಧ 42 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆಯ ದಿನವಾಗಿದೆ.
ಬೆಂಗಳೂರು(ಫೆ.11): ಭಾರತೀಯ ಅಣುವಿದ್ಯುತ್ ನಿಗಮ ನಿಯಮಿತ (Nuclear Power Corporation of India - NPCIL)ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ನರ್ಸ್, ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಸೇರಿ ವಿವಿಧ 42 ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆಯ ದಿನವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ npcilcareers.co.in ಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 42 ಹುದ್ದೆಗಳ ಮಾಹಿತಿ:
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್ವೈಸರ್)- 03
ನರ್ಸ್ A-02
ಅಸಿಸ್ಟೆಂಟ್ ಗ್ರೇಡ್ 1(HR)-13
ಅಸಿಸ್ಟೆಂಟ್ ಗ್ರೇಡ್ 1(F&A)-11
ಅಸಿಸ್ಟೆಂಟ್ ಗ್ರೇಡ್ 1(C &MM)-04
ಸ್ಟೆನೋಗ್ರಾಫರ್ ಗ್ರೇಡ್ 1- 09
ಶೈಕ್ಷಣಿಕ ವಿದ್ಯಾರ್ಹತೆ: ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಹೊಂದಿರಬೇಕು.
-ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್) ಅಥವಾ B.Sc + ಒಂದು ವರ್ಷದ ಡಿಪ್ಲೊಮಾ/ಇಂಡಸ್ಟ್ರಿಯಲ್ ಸುರಕ್ಷತೆಯಲ್ಲಿ ಪ್ರಮಾಣಪತ್ರ ಪಡೆದಿರಬೇಕು
-ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ ಉತ್ತೀರ್ಣರಾಗಿರಬೇಕು, ಜತೆಗೆ ನರ್ಸಿಂಗ್ನಲ್ಲಿ 3 ವರ್ಷಗಳ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
-ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ.50ರಷ್ಟು ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. 1 ನಿಮಿಷದಲ್ಲಿ 30 ಇಂಗ್ಲಿಷ್ ಪದಗಳನ್ನು ಟೈಪ್ ಮಾಡುವ ಸ್ಪೀಡ್ ಇರಬೇಕು.
KSISF RECRUITMENT 2022: ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರಾಜ್ಯ ಪೊಲೀಸ್
ವಯೋಮಿತಿ: ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಹುದ್ದೆಗೆ ಅನುಸಾರವಾಗಿ ವಯೋಮಿತಿ ನಿಗದಿಯಾಗಿದೆ. ಅದರ ವಿವರ ಈ ಕೆಳಗಿನಂತಿದೆ.
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್ವೈಸರ್)- 18-35 ವರ್ಷ
ನರ್ಸ್ : 18-30 ವರ್ಷ
ಅಸಿಸ್ಟೆಂಟ್ ಗ್ರೇಡ್ 1: 21ರಿಂದ 28 ವರ್ಷ
ಅಸಿಸ್ಟೆಂಟ್ ಗ್ರೇಡ್ 1: 21ರಿಂದ 28 ವರ್ಷ
ಅಸಿಸ್ಟೆಂಟ್ ಗ್ರೇಡ್ 1: 21ರಿಂದ 28 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ 1: 21ರಿಂದ 28 ವರ್ಷ
ಆಯ್ಕೆ ಪ್ರಕ್ರಿಯೆ: ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
India Unemployed people: 2020ರ ಲಾಕ್‌ಡೌನ್ ಮೊದಲ 3 ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರು 23 ಲಕ್ಷ ಮಂದಿ!
ವೇತನ ವಿವರ: ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಹುದ್ದೆಗೆ ಅನುಸಾರವಾಗಿ ವೇತನ ನಿಗದಿಯಾಗಿದ್ದು, ವಿವರಣೆ ಈ ಕೆಳಗಿನಂತಿದೆ.
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್ವೈಸರ್)-ಮಾಸಿಕ ₹ 44,900
ನರ್ಸ್ A-ಮಾಸಿಕ ₹ 44,900
ಅಸಿಸ್ಟೆಂಟ್ ಗ್ರೇಡ್ 1(HR)- ಮಾಸಿಕ ₹ 25,500
ಅಸಿಸ್ಟೆಂಟ್ ಗ್ರೇಡ್ 1(F&A)-ಮಾಸಿಕ ₹ 25,500
ಅಸಿಸ್ಟೆಂಟ್ ಗ್ರೇಡ್ 1(C &MM)-ಮಾಸಿಕ ₹ 25,500
ಸ್ಟೆನೋಗ್ರಾಫರ್ ಗ್ರೇಡ್ 1- ಮಾಸಿಕ ₹ 25,500
ಉದ್ಯೋಗ ಸ್ಥಳ: ಭಾರತೀಯ ಅಣುವಿದ್ಯುತ್ ( Atomic Power) ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾರವಾರ ತಾಲೂಕಿನ ಕೈಗಾ ಅಣು ಸ್ಥಾವರದಲ್ಲಿ (Kaiga Atomic Power Station) ಕರ್ತವ್ಯ ನಿರ್ವಹಿಸಬೇಕಾಗುತ್ತದೆ.