Asianet Suvarna News Asianet Suvarna News

ಉತ್ತರ ಕೋಲ್ ಫೀಲ್ಡ್ಸ್ ಲಿಮಿಟೆಡ್‌ ನಲ್ಲಿ ಸಹಾಯಕ ಫೋರ್‌ಮ್ಯಾನ್ ನೇಮಕಾತಿ

ಉತ್ತರ ಕೋಲ್ ಫೀಲ್ಡ್ಸ್ ಲಿಮಿಟೆಡ್‌ (ಎನ್‌ಸಿಎಲ್)ನಲ್ಲಿ ಸಹಾಯಕ ಫೋರ್‌ಮ್ಯಾನ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್‌ ಅರ್ಜಿ ಸಲ್ಲಿಸಲು ಫೆಭ್ರುವರಿ 5 ಕೊನೆ ದಿನವಾಗಿದೆ.

Northern Coalfields Limited to recruit for Assistant Post gow
Author
First Published Jan 30, 2024, 2:07 PM IST | Last Updated Jan 30, 2024, 2:07 PM IST

ಉತ್ತರ ಕೋಲ್ ಫೀಲ್ಡ್ಸ್ ಲಿಮಿಟೆಡ್‌ (ಎನ್‌ಸಿಎಲ್) ನಲ್ಲಿ ಸಹಾಯಕ ಫೋರ್‌ಮ್ಯಾನ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ

ಸಹಾಯಕ ಫೋರ್‌ಮನ್ 150 ಹುದ್ದೆಗಳು:

1. ಸಹಾಯಕ ಫೋರ್‌ಮನ್ (ಇ&ಟಿ) (ಟ್ರೇನಿ) ಗ್ರೇಡ್ - ಸಿ – 09 ಹುದ್ದೆ

2. ಸಹಾಯಕ ಫೋರ್‌ಮನ್ (ಮೆಕ್ಯಾನಿಕಲ್) (ತರಬೇತಿ) ಗ್ರೇಡ್-ಸಿ - 59 ಹುದ್ದೆ

3. ಸಹಾಯಕ ಫೋರ್‌ಮನ್ (ಎಲೆಕ್ಟ್ರಿಕಲ್) (ತರಬೇತಿ) ಗ್ರೇಡ್-ಸಿ - 82 ಹುದ್ದೆ

 ಆನ್‌ಲೈನ್ ಅಪ್ಲಿಕೇಷನ್‌ಗೆ ಕೊನೆಯ ದಿನಾಂಕ: 05-02-2024

ಅರ್ಜಿ ಶುಲ್ಕ: ಸಾಮಾನ್ಯ/ಒಬಿಸಿ/ಇಡ್ಬ್ಲೂಎಸ್ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ರು. 1180

ಎಸ್‌ ಸಿ/ಎಸ್‌ಟಿ/ ಇಎಸ್‌ಎಮ್/‌ ಪಿಡ್ಬ್ಲೂಡಿ ವರ್ಗದ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕವಿಲ್ಲ

ವಯಸ್ಸಿನ ಮಿತಿ

ಕನಿಷ್ಠ ವಯಸ್ಸಿನ ಮಿತಿ : 18 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ : 30 ವರ್ಷಗಳು

ಬರೋಬ್ಬರಿ 7100 ಹೊಸ ಸಹಾಯಕ ಪ್ರಾಧ್ಯಾಪಕ ಹುದ್ದೆ ಸೃಷ್ಟಿಗೆ ಉನ್ನತ ಶಿಕ್ಷಣ ಇಲಾಖೆ ಪ್ರಸ್ತಾವನೆ

ಶೈಕ್ಷಣಿಕ ವಿದ್ಯಾರ್ಹತೆ

1. ಸಹಾಯಕ ಫೋರ್‌ಮ್ಯಾನ್ (ಇ&ಟಿ) (ತರಬೇತಿ) ಗ್ರೇಡ್-ಸಿ ಹುದ್ದೆಗೆ :

ಎ) ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಮೆಟ್ರಿಕ್ಯುಲೇಟ್ ಅಥವಾ ತತ್ಸಮಾನ ಪರೀಕ್ಷೆಯನ್ನು ಉತ್ತೀರ್ಣರಾಗಿರಬೇಕು.

ಬಿ) ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ/ಇಂಜಿನಿಯರಿಂಗ್‌ ಪದವಿ ಪಡೆದಿರಬೇಕು.

2. ಸಹಾಯಕ ಫೋರ್‌ಮನ್(ಮೆಕ್ಯಾನಿಕಲ್) (ತರಬೇತಿ) ಗ್ರೇಡ್-ಸಿ ಹುದ್ದೆಗೆ :

ಎ) ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಮೆಟ್ರಿಕ್ಯುಲೇಟ್ ಅಥವಾ ತತ್ಸಮಾನ ಪರೀಕ್ಷೆಯನ್ನು ಉತ್ತೀರ್ಣರಾಗಿರಬೇಕು.

ಬಿ) ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ನಲ್ಲಿ ಡಿಪ್ಲೊಮಾ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.

3. ಸಹಾಯಕ ಫೋರ್‌ಮನ್ (ಎಲೆಕ್ಟ್ರಿಕಲ್) (ತರಬೇತಿ) ಗ್ರೇಡ್ - ಸಿ ಹುದ್ದೆಗೆ :

ಎ) ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಮೆಟ್ರಿಕ್ಯುಲೇಟ್ ಅಥವಾ ತತ್ಸಮಾನ ಪರೀಕ್ಷೆಯನ್ನು ಉತ್ತೀರ್ಣರಾಗಿರಬೇಕು.

ಬಿ) ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಿಕಲ್ ನಲ್ಲಿ ಡಿಪ್ಲೊಮಾ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.

ಜರ್ಮನಿಯೊಂದೇ ಅಲ್ಲ, ಈ 7 ದೇಶಗಳಲ್ಲಿದೆ ವಾರಕ್ಕೆ 4 ದಿನ ಕೆಲಸ ಪಾಲಿಸಿ

ತರಬೇತಿ ಅವಧಿ

1. ಸಹಾಯಕ ಫೋರ್‌ಮ್ಯಾನ್ (ಇ&ಟಿ) (ತರಬೇತಿ) ಗ್ರೇಡ್ - ಸಿ ಹುದ್ದೆಗೆ : ಒಂದು ವರ್ಷ

2. ಸಹಾಯಕ ಫೋರ್‌ಮನ್ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್) (ತರಬೇತಿ) ಗ್ರೇಡ್ - ಸಿ ಹುದ್ದೆಗೆ : ಎರಡು ವರ್ಷ

ವೇತನ ಶ್ರೇಣಿ

ರು. 47330.25 (ಮಾಸಿಕ)

ಆಯ್ಕೆ ಪ್ರಕ್ರಿಯೆ

1. ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ.

2. ಕಂಪ್ಯೂಟರ್ ಆಧಾರಿತ ಪರೀಕ್ಷೆಯು 100 ಅಂಕಗಳಿಗೆ 90 ನಿಮಿಷಗಳ ಅವಧಿಯಲ್ಲಿ ನಡೆಸಲಾಗುತ್ತದೆ.

3. ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಎರಡು ವಿಭಾಗಗಳನ್ನು ಒಳಗೊಂಡಿರುತ್ತದೆ. ವಿಭಾಗ "ಎ" ತಾಂತ್ರಿಕ ಜ್ಞಾನಕ್ಕೆ ಸಂಬಂಧಿಸಿದ

70 ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಹಾಗೂ ವಿಭಾಗ "ಬಿ" ಸಾಮಾನ್ಯ ಜ್ಞಾನ, ಸಾಮಾನ್ಯ ಅರಿವು, ತಾರ್ಕಿಕತೆ,

ಮೌಖಿಕ ಮತ್ತು ಮಾನಸಿಕ ಸಾಮರ್ಥ್ಯದ ವಿಷಯಕ್ಕೆ ಸಂಬಂಧಿಸಿದಂತೆ 30 ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಸೂಚನೆ: ತಪ್ಪು ಉತ್ತರಕ್ಕೆ ಯಾವುದೇ ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುವುದಿಲ್ಲ.

ಕನಿಷ್ಠ ಅರ್ಹತಾ ಅಂಕಗಳು

1. ಸಾಮಾನ್ಯ/ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ 50 ಅರ್ಹತಾ ಅಂಕಗಳನ್ನು ನಿಗದಿಗೊಳಿಸಲಾಗಿದೆ.

2. ಎಸ್‌ಸಿ/ಎಸ್‌ಟಿ/ಇಎಸ್‌ಎಮ್/‌ಒಬಿಸಿ/ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ 40 ಅರ್ಹತಾ ಅಂಕಗಳನ್ನು ನಿಗದಿಗೊಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: www.nclcil.in

Latest Videos
Follow Us:
Download App:
  • android
  • ios